World Cancer Day 2025: ಕ್ಯಾನ್ಸರ್ ಗೆದ್ದವರ 'ಪಿಕಲ್‌ಬಾಲ್' ಪಂದ್ಯಾವಳಿ
ಬೆಂಗಳೂರು, ಫೆಬ್ರವರಿ 03: ಫೆಬ್ರವರಿ 04ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತಿದೆ. ಮಂಗಳವಾರ ಅನೇಕ ವೈದ್ಯಕೀಯ ಸಂಸ್ಥೆಗಳು ಈ ದಿನ ಆಚರಿಸಿ, ಕ್ಯಾನ್ಸರ್ ಮಾರಕ ಕಾಯಿಲೆ ಬಗ್ಗೆ ಜಾಗೃತಿ ಮುಡಿಸುತ್ತಾರೆ. ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ನಮಗೇ ಗೊತ್ತಿಲ್ಲದೇ ದೇಹದೊಳಗೆ ಕ್ಯಾನ್ಸರ್ ಹೊಕ್ಕು, ಬೃಹತ್ ಆಗಿ ಬೆಳೆಯುತ್ತದೆ. ಕೆಲವೊಮ್ಮ ಜೀವಕ್ಕೆ ಆಪುತ್ತು ತಂದು ಬಿಡುತ್ತದೆ. ಇಂತಹ ಕಾಯಲೆ ವಿರುದ್ಧ ಹೋರಾಡಿ ಸೆಣಸಿ ಗೆದ್ದವರಿಗಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ 'ಪಿಕಲ್‌ಬಾಲ್' ಪಂದ್ಯಾವಳಿ ಆಯೋಜಿಸಲಾಗಿತ್ತು.
ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಕ್ಯಾನ್ಸರ್ ಗೆದ್ದವರು, ವೈದ್ಯರು, ಶುಷ್ರೂಷಕರಿಗೆ 'ಪಿಕಲ್‌ಬಾಲ್' ಪಂದ್ಯಾವಳಿಯನ್ನು ಎಚ್‌ಸಿಜಿ ಕ್ಯಾನ್ಸರ್ ಕೇಂದ್ರವು ಆಯೋಜಿಸಿತ್ತು. ಇದು ಗುಣಮುಖರಾದ ಕ್ಯಾನರ್ ರೋಗಿಗಳಲ್ಲಿ ನವ ಚೈತನ್ಯ ತಂದುಕೊಡುವಿಲ್ಲ. ಎಲ್ಲರಂತೆ ತಾವು ಸಾಮಾನ್ಯ ಜೀವನಕ್ಕೆ ಪುನಃ ಕಾಲಿಟ್ಟಿದ್ದೇವೆ ಎಂಬ ಭಾವನೆ ಮೂಡಿಸಿದೆ.

'ಯುನೈಟೆಡ್ ಬೈ ಯೂನಿಯನ್' ಎಂಬ ಶೀರ್ಷಿಕೆಯಡಿ, ಕ್ರೀಡೆಯ ಮೂಲಕ ಏಕತೆಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಕ್ಯಾನ್ಸರ್ ಚಾಂಪಿಯನ್‌ಗಳ ವೈಯಕ್ತಿಕ ವಿಷಯವನ್ನು ಆಚರಿಸಲು ವಿಶ್ವ ಕ್ಯಾನ್ಸರ್ ದಿನದಂಗವಾಗಿ ಹಮ್ಮಿಕೊಳ್ಳಲಾಗಿದೆ. ಒಟ್ಟು 35 ಜನರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.
ಪಂದ್ಯಾವಳಿ ಕುರಿತು ಎಚ್‌ಸಿಜಿ ಕಾರ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನೀಷಾ ಕುಮಾರ್ ಅವರು ಮಾತನಾಡಿ, ಕ್ಯಾನ್ಸರ್ ಗೆ ತುತ್ತಾದವರು ತಮ್ಮ ಬದುಕಿಗಾಗಿ ಹೋರಾಡಿ ಗೆಲ್ಲುವುದು ಜೀವನವನ್ನೇ ಗೆದ್ದಂತೆ. ಅವರ ಈ ಬದುಕಿನ ಸಂಭ್ರಮವನ್ನು ಆಚರಿಸಲೆಂದೇ ವಿಶ್ವ ಕ್ಯಾನ್ಸರ್ ದಿನದಂದು ನಮ್ಮ ಎಲ್ಲಾ ಕ್ಯಾನ್ಸರ್‌ನಿಂದ ಬದುಕುಳಿದವರಿಗಾಗಿ ಈ ಪಿಕಲ್‌ಬಾಲ್ ಕ್ರೀಡೆಯನ್ನು ಹಮ್ಮಿಕೊಂಡಿದ್ದೆವು.

ಕ್ಯಾನ್ಸರ್ ಗೆದ್ದವರ ಕುಟುಂಬಸ್ಥರು, ವೈದ್ಯರು, ಶುಷ್ರೂಷಕರು ಸಹ ಪಾಲ್ಗೊಂಡಿರುವುದು ಸಂತಸ ಹೆಚ್ಚಿಸಿದೆ. ಕ್ಯಾನ್ಸರ್ ಚಾಂಪಿಯನ್‌ಗಳನ್ನು ದೈಹಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸುವ ಉದ್ದೇಶವೂ ಇದರ ಭಾಗವಾಗಿದೆ ಎಂದು ಅವರು ವಿವರಿಸಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ಅತ್ಯಾಧುನಿಕ ಡಿಜಿಟಲ್ ಶಿಕ್ಷಣ
ಸರ್ಕಾರಿ ಶಾಲಾ ಮಕ್ಕಳು ಹಾಗೂ ವಿಶೇಷ ಚೇತನ ಮಕ್ಕಳಿಗೂ ಅಗತ್ಯ ಮೂಲಸೌಕರ್ಯದ ಜೊತೆಗೆ ಡಿಜಿಟಲ್ ಶಿಕ್ಷಣ ನೀಡುವ ಉದ್ದೇಶದಿಂದ ಗ್ಲೋಬಲೋಜಿಕ್, ಮೊಬೈವಿಲ್ ಹಾಗೂ ಇಟಾಚಿ ಕಂಪನಿಗಳ ಸಹಯೋಗದೊಂದಿಗೆ ಉಪಕರಣ ಹಾಗೂ ಮೂಲಭೂತ ಸೌಕರ್ಯ ನೀಡಲಾಗಿದೆ.
ಸಿಎಸ್‌ಆರ್ ಅಡಿಯಲ್ಲಿ ಹೆಣ್ಣೂರಿನ ನಗರದ "ಶ್ರೋಧಂಜಲಿ ಇಂಟಿಗ್ರೇಟೆಡ್ ಪ್ರಾಥಮಿಕ ಶಾಲೆ" ಹಾಗೂ ಭಾರತೀಯ ವಿದ್ಯಾನಿಕೇತನ ಹೈಸ್ಕೂಲ್ ಗಳಿಗೆ ಪ್ರತ್ಯೇಕವಾಗಿ ಡಿಜಿಟಲೀಕರಣದ ಶಿಕ್ಷಣಕ್ಕೆ ಸಂಬಂಧಿಸಿದ ಉಪಕರಣ, ಸೌಲಭ್ಯಗಳನ್ನು ಒದಗಿಸಲಾಯಿತು. 129 ವಿಶೇಷ ಚೇತನ ಮಕ್ಕಳಿಗೆ ಮೂಲಸೌಕರ್ಯ ನೀಡಿ ನೆರವು ಒದಗಿಸಲಾಯಿತು. ಅಷ್ಟೇ ಅಲ್ಲದೇ ಅವರಿಗೆ ವೈಯಕ್ತಿಕ ಚಿಕಿತ್ಸೆ, ಸಹಾಯಕ ಸಾಧನಗಳು ಸೇರಿದಂತೆ ಈ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಈ ಸಂಸ್ಥೆಗಳು ವಹಿಸಿಕೊಂಡವು.
ಇನ್ನೂ ಶಾಲೆಯಾದ ಭಾರತೀಯ ವಿದ್ಯಾನಿಕೇತನ ಹೈಸ್ಕೂಲ್‌ನಲ್ಲಿ ಮಕ್ಕಳಿಗೆ ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡಲಾಯಿತು. 700ಕ್ಕೂ ಅಧಿಕ ಮಕ್ಕಳನ್ನು ಹೊಂದಿರುವ ಈ ಶಾಲೆಯಲ್ಲಿ "ಡಿಜಿ ವಿದ್ಯಾ ಶಾಲಾ" ಕಾರ್ಯಕ್ರಮವನ್ನು ಪ್ರಥಮ್ ಇನ್ಫೋಟೆಕ್ ಫೌಂಡೇಶನ್ ಮತ್ತು ಎಜುಕೇಷನಲ್ ಇನಿಶಿಯೇಟಿವ್ಸ್ (ಇಐ) ಯ ಸಹಯೋಗದೊಂದಿಗೆ ಚಾಲನೆ ನೀಡಲಾಯಿತು.












Click it and Unblock the Notifications