ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಕಾಮಗಾರಿಯಲ್ಲಿ ದೋಖಾ, ಕಂಪನಿ ಕಪ್ಪು ಪಟ್ಟಿಗೆ

|
Google Oneindia Kannada News

ಬೆಂಗಳೂರು, ಜುಲೈ 16: ನಮ್ಮ ಮೆಟ್ರೋ ಕಾಮಗಾರಿಯಲ್ಲಿ ವಂಚನೆ ಮಾಡಿದ್ದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ಎರಡನೇ ಹಂತದ ಮೆಟ್ರೋ ಯೋಜನೆಯಲ್ಲಿ ಬ್ಯಾಂಕ್ ಠೇವಣಿ ಕುರಿತು ಕಂಪನಿ ತಪ್ಪು ಮಾಹಿತಿ ನೀಡಿತ್ತು. ಹಾಗಾಗಿ ವಿಜಯ ಎನರ್ಜಿ ಪ್ಲಸ್‌ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ಮೆಟ್ರೋ ಸ್ಮಾರ್ಟ್‌ಕಾರ್ಡ್‌ಗೆ ಡಿಮ್ಯಾಂಡೋ ಡಿಮ್ಯಾಂಡು, ಪ್ರಯಾಣಿಕರೂ ಹೆಚ್ಚಳ ಮೆಟ್ರೋ ಸ್ಮಾರ್ಟ್‌ಕಾರ್ಡ್‌ಗೆ ಡಿಮ್ಯಾಂಡೋ ಡಿಮ್ಯಾಂಡು, ಪ್ರಯಾಣಿಕರೂ ಹೆಚ್ಚಳ

ಈ ಕಂಪನಿ ಇನ್ನೂ ಐದು ವರ್ಷಗಳ ಕಾಲ ಮೆಟ್ರೋ ಟೆಂಡರ್‌ನಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೆಆರ್ ಪುರ-ಸಿಲ್ಕ್‌ಬೋರ್ಡ್ ಮೆಟ್ರೋ ಮಾರ್ಗದ ಯೋಜನೆಗಾಗಿ ಬೆಸ್ಕಾಂ ಕೇಬಲ್‌ಗಳನ್ನು ಸ್ಥಳಾಂತರಿಸಬೇಕಿದೆ.

Worked for Banglore metro company now blacklisted

ಇದಕ್ಕಾಗಿ ಟೆಂಡರ್ ಆಹ್ವಾನಿಸಲಾಗಿತ್ತು. ಕಾಮಗಾರಿ ಆರಂಭಕ್ಕೂ ಮುನ್ನ ಕಂಪನಿಯು ಬ್ಯಾಂಕ್ ಠೇವಣಿಯನ್ನು ನೀಡಬೇಕಿತ್ತು. 91.51 ಲಕ್ಷ ರೂ ಠೇವಣಿಯನ್ನು ಎಸ್‌ಬಿಐನಲ್ಲಿ ಇರಿಸಲಾಗಿದೆ ಎಂದು ತಿಳಿಸುವ ದಾಖಲೆಗಳನ್ನು ಕಂಪನಿಯು ಬಿಎಂಆರ್‌ಸಿಎಲ್‌ಗೆ ತಿಳಿಸಿತ್ತು.

ಬಳಿಕ ಟೆಂಡರ್‌ನ್ನು ಕಂಪನಿಗೆ ನೀಡಿ ಕೆಲಸಕ್ಕೆ ಚಾಲನೆ ನೀಡಲು ಸಿದ್ಧತೆ ಮಾಡಲಾಗಿತ್ತು. ಕೊನೆಯ ಹಂತದಲ್ಲಿ ಎಸ್‌ಬಿಐ ಬ್ಯಾಂಕ್ ನಿಂದ ಮಾಹಿತಿ ಕೇಳಿದಾಗ ಯಾವುದೇ ಠೇವಣಿಯನ್ನು ಬ್ಯಾಂಕ್‌ನಲ್ಲಿ ಇರಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸುವುದು ಅಗತ್ಯವಾಗಿದ್ದು, ಈ ಪ್ರಕ್ರಿಯೆಯನ್ನು ನಡೆಸದೆ ಕಂಪನಿ ವಂಚನೆ ಮಾಡಿತ್ತು.

English summary
BMRCL has filed a cheating case against a private company and blacklisted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X