ಮೆಜೆಸ್ಟಿಕ್ ನಲ್ಲಿ ಈ ಮಹಿಳಾ ಪೊಲೀಸ್ ಅಧಿಕಾರಿಯ ಖದರ್ ನೋಡಿ
ಬೆಂಗಳೂರು, ಜೂನ್ 04: ಖಾಕಿಯ ಖದರ್ರೇ ಹಾಗೆಯೋ ಏನೋ, ಅದನ್ನು ಧರಿಸಿದವರ ಸ್ಟೈಲೇ ಬದಲಾಗಿಬಿಡುತ್ತದೆ. ಇಲ್ಲೊಬ್ಬ ಲೇಡಿ ಪೊಲೀಸ್ ಇದ್ದಾರೆ ನೋಡಿ, ನೋಡಲು ಸೌಮ್ಯವಾಗಿ ಕಂಡರೂ ಅವರ ಖದರ್ರೇ ಬೇರೆ.
ಮೆಜೆಸ್ಟಿಕ್‌ನಲ್ಲಿ ಪುಂಡ ಪೋಕರಿಗಳ ಹಾವಳಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಇಂದು ಮಾತ್ರ ಅವರಿಗೆ ಸಮಯ ಸರಿ ಇರಲಿಲ್ಲ. ಲೇಡಿ ಪೊಲೀಸ್ ಒಬ್ಬರು ಇಡೀ ಮೆಜೆಸ್ಟಿಕ್ ಅಡ್ಡಾಡಿ ಪುಂಡ ಪೋಕರಿಗಳಿಗೆಲ್ಲಾ ಲಾಠಿ ರುಚಿ ತೋರಿಸಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಮಹಿಳೆಯರ ಸುರಕ್ಷತೆಗೆಂದು ನೇಮಕವಾಗಿರುವ ವಿಶೇಷ ದಳ ಓಬವ್ವ ಸ್ಕ್ವಾಡ್‌ನ ಈ ಮಹಿಳಾ ಪೊಲೀಸ್ ಅಧಿಕಾರಿ ಲಾಠಿ ಬೀಸುವ ರಭಸಕ್ಕೆ ಭೀಮ ಕಾಯದ ಪುಂಡರೂ ಹೆದರಿ ಮೂಲೆ ಸೇರಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿ ಮೆಜೆಸ್ಟಿಕ್‌ನಲ್ಲಿ ಗುಟುರು ಹಾಕಿರುವ ಚಿತ್ರಗಳನ್ನು ಪಶ್ಚಿಮ ವಿಭಾಗದ ಪೊಲೀಸ್ ಆಯುಕ್ತ ರವಿ.ಡಿ.ಚನ್ನಣ್ಣವರ್ ಅವರು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಉಪ್ಪಾರಪೇಟೆ ಪೊಲೀಸರು ಮೇಜಸ್ಟಿಕ್ ಪ್ರದೇಶದಲ್ಲಿ ಸಾರ್ವಜನಿಕ ವ್ಯವಸ್ಥೆ ಕಾಪಡಲು, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಾಗೂ ವಿಶೇಷವಾಗಿ ಮಹಿಳಾ ಸುರಕ್ಷತೆಗಾಗಿ ಗಸ್ತಿನಲ್ಲಿ ನಿರತರಾಗಿರುತ್ತಾರೆ' ಎಂದು ರವಿ ಚನ್ನಣ್ಣನವರ್ ಬರೆದುಕೊಂಡಿದ್ದಾರೆ.












Click it and Unblock the Notifications