ಒಂದೇ ಕುಣಿಕೆಯಲ್ಲಿ ನೇಣು ಹಾಕಿಕೊಂಡು ತಾಯಿ ಮಗ ಆತ್ಮಹತ್ಯೆ
ಬೆಂಗಳೂರು, ಮಾರ್ಚ್ 25: ಫ್ಯಾನ್‌ಗೆ ಪುತ್ರನ ನೇಣು ಹಾಕಿ ಅದೇ ಕುಣಿಕೆಯಲ್ಲಿ ಕೊರಳೊಡ್ಡಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಡೆತ್‌ನೋಟ್ ಬರೆದಿಟ್ಟ ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಬಾವಿ ಸಮೀಪದ ಕಲ್ಯಾಣ ನಗರದಲ್ಲಿ ನಡೆದಿದೆ.
ಪ್ರತಿಮಾ ಮಂಗಳೂರ್ಕರ್ (28) ಹಾಗೂ ಪುತ್ರ ಸಾತ್ವಿಕ್ ಎಂದು ಗುರುತಿಸಲಾಗಿದೆ. ಅಬಕಾರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿದ್ದ ಸಂತೋಷ್ ಶೆಟ್ಟಿ ಎಂಬುವವರ ಪತ್ನಿ ಹಾಗೂ ಪುತ್ರರಾಗಿದ್ದ ಇವರು ನಾಗರಬಾವಿ ಸಮೀಪದ ಕಲ್ಯಾಣ ನಗರದ 14ನೆ ಬಿ ಮುಖ್ಯ ರಸ್ತೆ ನಿವಾಸಿಗಳಾಗಿದ್ದರು.

ಮೂಲತಃ ಕಾರವಾರದ ಈ ಕುಟುಂಬ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿತ್ತು.ಶನಿವಾರ ರಾತ್ರಿ 9.45ರ ಸುಮಾರಿನಲ್ಲಿ ಪ್ರತಿಮಾ "ನನಗೆ ಬದುಕಲು ಇಷ್ಟವಿಲ್ಲ, ನಾನು ಸಾಯುತ್ತಿದ್ದೇನೆ." ಎಂದು ಡೆತ್ ನೋಟ್ ಬರೆದಿಟ್ಟು ಬೆಡ್ ರೂಮಿನಲ್ಲಿ ತನ್ನ ಮಗನಿಗೆ ನೇಣು ಹಾಕಿ ಕೊಂದಿದ್ದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವೇಳೆ ಕೆಲಸಕ್ಕೆ ತೆರಳಿದ್ದ ಪತಿ ಸಂತೋಷ್ ರಾತ್ರಿ ಮನೆಗೆ ಆಗಮಿಸಿದ ನಂತರ ಇಬ್ಬರೂ ಸಾವನ್ನಪ್ಪಿರುವುದನ್ನು ಕಂಡಿದ್ದಾನೆ.ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚಂದ್ರಾ ಲೇ ಔಟ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಸಂತೋಷ್ ಶೆಟ್ಟಿ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡವರು.
ಸಾಮಾನ್ಯವಾಗಿ ಸಂತೋಷ್ ವಾರಾಂತ್ಯದಲ್ಲಿ ಮನೆಯವರೊಂದಿಗೆ ಪಿಕ್‌ನಿಕ್ ಹೋಗುತ್ತಿದ್ದರು ಅಂದು ಐದಾರು ಬಾರಿ ಕರೆ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮನೆಗೆ ಬಂದು ನೋಡಿದಾಗ ವಿಷಯ ತಿಳಿಯಿತು ಎಂದು ಸಂತೋಷ್ ಮಾಹಿತಿ ನೀಡಿದ್ದಾರೆ.












Click it and Unblock the Notifications