ರೈಲಿನಲ್ಲಿ ಮಹಿಳಾ ಪೊಲೀಸ್ ಬಳಿಯೇ ದೋಚಿದ ಕಳ್ಳರು
ಬೆಂಗಳೂರು, ಮಾರ್ಚ್ 6: ಕಳ್ಳರನ್ನು ಹಿಡಿಯುವ ಪೊಲೀಸರ ಬಳಿಯೇ ಕಳ್ಳತನವಾಗಿರುವ ಘಟನೆ ಬೆಂಗಳೂರು ರೈಲಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಮಚಲೀಪಟ್ಟಣಂಗೆ ಹೋಗುವ ಮಾರ್ಗ ಮಧ್ಯೆ ಘಟನೆ ನಡೆದಿದೆ.
ಅವರ ಬಳಿ ಇದ್ದ ಮೊಬೈಲ್ ಫೋನ್, ಚಿನ್ನದ ಆಭರಣಗಳು ಸೇರಿ ಸುಮಾರು 43 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪೊಲೀಸ್ ಚಂದ್ರಕಲಾ ಅವರ ವಸ್ತುಗಳು ಕಳವಾಗಿವೆ. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅವರ ಸಹೋದ್ಯೋಗಿಗಳೊಂದಿಗೆ ಮಚಲೀಪಟ್ಟಣಂಗೆ ಹೊರಟಿದ್ದರು. ಮಲಗುವ ಮುಂಚೆ ಕಪ್ಪು ಬ್ಯಾಗ್ ಒಂದನ್ನು ತಲೆಯ ಸಮೀಪವಿಟ್ಟುಕೊಂಡಿದ್ದರು.

ಬೆಳಗ್ಗೆ 6 ಗಂಟೆ ಸುಮಾರಿಗೆ ಎದ್ದು ನೋಡುವಾಗ ಬ್ಯಾಗ್ ಇರಲಿಲ್ಲ. ಆಂಧ್ರಪ್ರದೇಶದ ವಿಜಯವಾಡ, ಗುಡಿವಾಡ ಮಧ್ಯೆ ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications