ಬೆಂಗಳೂರು: ಸ್ಟಾರ್‌ಬಕ್ಸ್‌ನಲ್ಲಿ ಪರ್ಸ್ ಕದ್ದ ಮಹಿಳೆ, ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳಿಯ ಕೈಚಳಕ

ಬೆಂಗಳೂರು: ನಮ್ಮೆಲ್ಲರಲ್ಲಿ ಒಂದು ಸಾಮಾನ್ಯ ನಂಬಿಕೆಯಿರುತ್ತದೆ. ಅದೇನೆಂದರೆ ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ಪ್ರತಿಷ್ಠಿತ ಕೆಫೆಗಳು ಹಾಗೂ ಮಾಲ್‌ಗಳಲ್ಲಿ ನಮ್ಮ ಬೆಲೆಬಾಳುವ ವಸ್ತುಗಳು ಸುರಕ್ಷಿತವಾಗಿರುತ್ತವೆ ಎಂಬ ನಂಬಿಕೆ ಅನೇಕರಿಗಿರುತ್ತದೆ. ಆದರೆ, ಬೆಂಗಳೂರಿನ ಜನನಿಬಿಡ ಪ್ರದೇಶವಾದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಸ್ಟಾರ್‌ಬಕ್ಸ್ ಮಳಿಗೆಯಲ್ಲಿ ನಡೆದಿರುವ ಘಟನೆಯೊಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಹೌದು, ಬೆಂಗಳೂರು ಸ್ಟಾರ್‌ಬಕ್ಸ್ ಕಳ್ಳತನ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ಅತ್ಯಂತ ಸಲೀಸಾಗಿ, ಯಾವುದೇ ಭಯವಿಲ್ಲದೆ ಗ್ರಾಹಕರೊಬ್ಬರ ಬ್ಯಾಗ್‌ನಿಂದ ವ್ಯಾಲೆಟ್ ಅಂದರೆ ಪರ್ಸ್ ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕಳ್ಳತನದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರು ಹೊರಗೆ ಹೋದಾಗ ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ.

Woman Casually Steals Wallet At Bengaluru Starbucks On CCTV Cops React To Viral Video On X Now

ಕಮರ್ಷಿಯಲ್ ಸ್ಟ್ರೀಟ್ ಸ್ಟಾರ್‌ಬಕ್ಸ್‌ನಲ್ಲಿ ನಡೆದಿದ್ದೇನು?

ಬೆಂಗಳೂರಿನ ಹೃದಯಭಾಗದಲ್ಲಿರುವ ಕಮರ್ಷಿಯಲ್ ಸ್ಟ್ರೀಟ್‌ನ ಸ್ಟಾರ್‌ಬಕ್ಸ್ ಔಟ್‌ಲೆಟ್‌ನಲ್ಲಿ ಈ ಘಟನೆ ನಡೆದಿದೆ. ದಿಶಾ ಭಾಟಿಯಾ ಎಂಬುವವರ ಸಂಗಾತಿಯ ಬ್ಯಾಗ್‌ನಿಂದ ಈ ವ್ಯಾಲೆಟ್ ಕಳ್ಳತನವಾಗಿದೆ. ವೀಡಿಯೊದಲ್ಲಿ ಕಾಣಿಸುವಂತೆ, ಕಳ್ಳತನ ಮಾಡಿದ ಮಹಿಳೆ ಅತ್ಯಂತ ಸಹಜವಾಗಿ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕುಳಿತಿದ್ದವರ ಬ್ಯಾಗ್‌ನ ಬಳಿ ಬರುತ್ತಾಳೆ.

ಒಂದು ಚೂರು ಹೆದರದೆ ಬ್ಯಾಗ್‌ನೊಳಗೆ ಕೈಹಾಕಿ ವ್ಯಾಲೆಟ್ ಅನ್ನ ತೆಗೆದುಕೊಂಡು, ಯಾರ ಗಮನಕ್ಕೆ ಬಾರದಂತೆ ಅಲ್ಲಿಂದ ಕಾಲ್ಕೀಳುತ್ತಾಳೆ. ಈಕೆಯ ಕೈಚಳಕ ಮತ್ತು ಅವಳ ವರ್ತನೆ ನೋಡಿದರೆ, ಈಕೆ ಈ ಹಿಂದೆಯೂ ಇಂತಹ ಕೃತ್ಯಗಳನ್ನ ಎಸಗಿರಬಹುದೇ ಎಂಬ ಅನುಮಾನ ಮೂಡುತ್ತದೆ.

ವೈರಲ್ ಆದ ಸಿಸಿಟಿವಿ ದೃಶ್ಯಾವಳಿ

ತಮ್ಮ ಸಂಗಾತಿಯ ವ್ಯಾಲೆಟ್ ಕಳೆದುಕೊಂಡ ದಿಶಾ ಭಾಟಿಯಾ ಅವರು ತಕ್ಷಣವೇ ಎಕ್ಸ್ ಖಾತೆಯಲ್ಲಿ ಈ ಸಿಸಿಟಿವಿ ದೃಶ್ಯವನ್ನ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಕಳ್ಳತನ ಮಾಡಿದ ಮಹಿಳೆಯ ಮುಖ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದೆ.

ದಿಶಾ ಅವರು ತಮ್ಮ ಪೋಸ್ಟ್‌ನಲ್ಲಿ, "ಜನರೇ, ದಯವಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಂತ ಎಚ್ಚರಿಕೆಯಿಂದಿರಿ. ಕಮರ್ಷಿಯಲ್ ಸ್ಟ್ರೀಟ್‌ನ ಸ್ಟಾರ್‌ಬಕ್ಸ್‌ನಲ್ಲಿ ಈ ಮಹಿಳೆ ನನ್ನ ಸಂಗಾತಿಯ ವ್ಯಾಲೆಟ್ ಅನ್ನು ಕದ್ದಿದ್ದಾಳೆ" ಎಂದು ಬರೆದುಕೊಂಡು ಸಾರ್ವಜನಿಕರನ್ನ ಎಚ್ಚರಿಸಿದ್ದಾರೆ. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಅನೇಕರು ತಮಗಾದ ಕಹಿ ಅನುಭವಗಳನ್ನ ಕಾಮೆಂಟ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ತ್ವರಿತವಾಗಿ ಸ್ಪಂದಿಸಿದ ಬೆಂಗಳೂರು ಪೊಲೀಸ್

ದಿಶಾ ಭಾಟಿಯಾ ಅವರು ತಮ್ಮ ಪೋಸ್ಟ್‌ನಲ್ಲಿ ಬೆಂಗಳೂರು ಪೊಲೀಸ್ ಇಲಾಖೆಯನ್ನ ಟ್ಯಾಗ್ ಮಾಡಿ, ಘಟನೆಯ ಬಗ್ಗೆ ಗಮನಹರಿಸುವಂತೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಬೆಂಗಳೂರು ಪೊಲೀಸರು ತಕ್ಷಣವೇ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಸಂತ್ರಸ್ತರ ದೂರಿನ ಆಧಾರದ ಮೇಲೆ ಘಟನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ದೂರನ್ನ ದಾಖಲಿಸಿಕೊಳ್ಳಲಾಗಿದೆ ಮತ್ತು ಕಳ್ಳಿಯ ಪತ್ತೆಗಾಗಿ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರತಿಕ್ರಿಯೆ

ವ್ಯಾಲೆಟ್ ಕಳ್ಳತನವಾದ ತಕ್ಷಣ ತಮ್ಮ ಬ್ಯಾಂಕ್ ಖಾತೆಗಳನ್ನ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಲು ದಿಶಾ ಅವರು ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿದ್ದರು. ಆದರೆ, ಗ್ರಾಹಕ ಸೇವಾ ಕೇಂದ್ರದಿಂದ ಸರಿಯಾದ ಸ್ಪಂದನೆ ಸಿಗಲಿಲ್ಲ ಹಾಗೂ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಬಗ್ಗೆಯೂ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದ ಅವರಿಗೆ, ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರತಿಕ್ರಿಯಿಸಿದೆ. "ನಿಮಗಾದ ಈ ಅಹಿತಕರ ಘಟನೆ ಹಾಗೂ ಗ್ರಾಹಕ ಸೇವಾ ಕೇಂದ್ರದಿಂದ ಆದ ಕಹಿ ಅನುಭವಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಈ ಪರಿಸ್ಥಿತಿ ಎಷ್ಟು ಆತಂಕಕಾರಿ ಎಂಬುದನ್ನ ನಾವು ಅರ್ಥಮಾಡಿಕೊಂಡಿದ್ದೇವೆ, ಶೀಘ್ರದಲ್ಲೇ ನಿಮಗೆ ಅಗತ್ಯ ನೆರವು ನೀಡುತ್ತೇವೆ" ಎಂದು ಬ್ಯಾಂಕ್ ಭರವಸೆ ನೀಡಿದೆ.

ಸ್ಟಾರ್‌ಬಕ್ಸ್‌ನಂತಹ ಪ್ರತಿಷ್ಠಿತ ಹಾಗೂ ಸಿಸಿಟಿವಿ ಕಣ್ಗಾವಲು ಇರುವ ಸ್ಥಳಗಳಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ಪರಿಚಿತ ಹಾಗೂ ಸುರಕ್ಷಿತ ಎನಿಸುವ ಕೆಫೆಗಳ ಒಳಗೆ ಕುಳಿತಿದ್ದರೂ ಸಹ, ಜನರು ತಮ್ಮ ಬ್ಯಾಗ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಬೆಲೆಬಾಳುವ ವಸ್ತುಗಳ ಬಗ್ಗೆ ಸದಾ ನಿಗಾ ವಹಿಸುವುದು ತುಂಬ ಮುಖ್ಯ.

ಸಾಮಾನ್ಯವಾಗಿ ಇಂತಹ ಕಳ್ಳರು ಒಂಟಿಯಾಗಿರುವ ಅಥವಾ ತಮ್ಮ ಲ್ಯಾಪ್‌ಟಾಪ್‌ಗಳಲ್ಲಿ ತಲ್ಲೀನರಾಗಿರುವ ಗ್ರಾಹಕರನ್ನೇ ಗುರಿಯಾಗಿಸಿಕೊಳ್ಳುತ್ತಾರೆ. ಸಿಸಿಟಿವಿ ಕ್ಯಾಮೆರಾಗಳಿವೆ ಎಂಬ ಕಾರಣಕ್ಕೆ ಮೈಮರೆಯದೆ, ನಮ್ಮ ವಸ್ತುಗಳ ಸುರಕ್ಷತೆ ನಮ್ಮದೇ ಜವಾಬ್ದಾರಿ ಎಂಬುದನ್ನ ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+