ಮದ್ಯದ ಅಮಲಿನಲ್ಲಿ ಯುವತಿಯಿಂದ ಸಾರ್ವಜನಿಕರ ಮೇಲೆ ಹಲ್ಲೆ
ಬೆಂಗಳೂರು, ಅಕ್ಟೋಬರ್ 21: ಕುಡಿತದ ಅಮಲಿನಲ್ಲಿ ಯುವತಿಯೊಬ್ಬಳು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹೆಣ್ಣೂರು ಬಂಡೆ ಬಳಿ ಈ ಘಟನೆ ನಡೆದಿದ್ದು, ಕಂಠಪೂರ್ತಿ ಕುಡಿದ ಯುವತಿ ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಹಲ್ಲೆ ನಡೆಸಿದ್ದಾಳೆ. ಯುವತಿಯನ್ನು ಉತ್ತರ ಭಾರತದವಳು ಎಂದು ಗುರುತಿಸಲಾಗಿದೆ.
ಭಾನುವಾರ ರಜೆ ಇದ್ದ ಕಾರಣ ಸ್ನೇಹಿತರ ಜೊತೆ ಕುಡಿದು ಬಂದ ಆಕೆ ಬಳಿಕ ರಸ್ತೆಯಲ್ಲಿ ಸ್ನೇಹಿತನೊಂದಿಗೆ ತೂರಾಡುತ್ತಿದ್ದಳು. ಸಾರ್ವಜನಿಕರು ಯುವತಿಯನ್ನು ಪ್ರಶ್ನಿಸಿದಾಗ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.

ಅಲ್ಲದೆ ಪ್ರಶ್ನಿಸಲು ಬಂದವರ ಮೇಲೆ ಹಲ್ಲೆ ನಡೆಸಿದ್ದಾಳೆ. ಹಲ್ಲೆ ತಡೆಯಲು ಯತ್ನಿಸಿದ ಸ್ನೇಹಿತನ ಮೇಲೂ ಹಲ್ಲೆಗೆ ಮುಂದಾಗಿದ್ದಾಳೆ. ಸಾರ್ವಜನಿಕರು ಯುವತಿಯ ರಂಪಾಟವನ್ನು ವಿಡಿಯೋ ಚಿತ್ರಿಸಿದ್ದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಸ್ಥಳಕ್ಕೆ ಬಂದು ಸಾರ್ವಜನಿಕರ ಹೇಳಿಕೆ ಪಡೆದುಕೊಂಡಿದ್ದಾರೆ.












Click it and Unblock the Notifications