ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಚುಮು-ಚುಮು ಚಳಿ: ಒಂದು ದಶಕದಲ್ಲಿ ಕನಿಷ್ಠ ತಾಪಮಾನ

|
Google Oneindia Kannada News

ಬೆಂಗಳೂರು, ನವೆಂಬರ್ 22: ನವೆಂಬರ್ ತಿಂಗಳು ಬಂದರೆ ಸಾಕು ದೇಶದಲ್ಲಿ ಚುಮು-ಚುಮು ಚಳಿಯ ಅನುಭವವಾಗುತ್ತದೆ. ಉತ್ತರ ಭಾರತದಂತೆಯೇ ದಕ್ಷಣ ಭಾರತದಲ್ಲೂ ಈ ಭಾರಿ ಹೆಚ್ಚು ಚಳಿಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನೂ ಬೆಂಗಳೂರಿನಲ್ಲಿ ಸೋಮವಾರ ಒಂದು ದಶಕದಲ್ಲಿ ಕನಿಷ್ಠ ತಾಪಮಾನ ವರದಿಯಾಗಿದೆ. ಗಾರ್ಡನ್ ಸಿಟಿ ಆಗಿರುವ ನಮ್ಮ ಬೆಂಗಳೂರು ಕಳೆದ ಒಂದು ವಾರದಿಂದ ರಾತ್ರಿಗಳಲ್ಲಿ ತುಂಬಾ ಚಳಿ ಅನುಭವಕ್ಕೆ ಬರುತ್ತಿದೆ. ಸೋಮವಾರ ಮುಂಜಾನೆ ಬೆಂಗಳೂರಿನ ನಿವಾಸಿಗಳನ್ನು ಚುಮು-ಚುಮು ಚಳಿಯು ಸ್ವಾಗತಿಸಿತು.

ನಿನ್ನೆ ರಾತ್ರಿ ನಗರದ ತಾಪಮಾನವು ತುಂಬಾ ಕಡಿಮೆಯಾಗಿತ್ತು. ಹತ್ತು ವರ್ಷಗಳ ಚಳಿಗಾಲದ ದಾಖಲೆಯನ್ನು ಮುರಿಯಿತು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಭಾನುವಾರ ಉದ್ಯಾನನಗರಿಯ ಗರಿಷ್ಠ ತಾಪಮಾನ 25.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು 13.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ವರದಿಯಾಗಿದೆ.

Bengaluru weather: ಬೆಂಗಳೂರಲ್ಲಿ ನ. 20ರ ವರೆಗೆ ಚಳಿ, ಬಳಿಕ 2 ದಿನ ಮಳೆ ಸಾಧ್ಯತೆ Bengaluru weather: ಬೆಂಗಳೂರಲ್ಲಿ ನ. 20ರ ವರೆಗೆ ಚಳಿ, ಬಳಿಕ 2 ದಿನ ಮಳೆ ಸಾಧ್ಯತೆ

ಎಚ್‌ಎಎಲ್‌ ಬಳಿ ಕನಿಷ್ಠ ತಾಪಮಾನ ದಾಖಲು

ನಗರದ ಎಚ್‌ಎಎಲ್‌ನ ವಿಮಾನ ನಿಲ್ದಾಣದಲ್ಲಿ ಬಳಿ ಕನಿಷ್ಠ ತಾಪಮಾನವು 12.5 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿ ಸ್ವಲ್ಪಮಟ್ಟಿಗೆ ಹವಾಮಾನ ಇಳಿದಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರಿನಲ್ಲಿ ನವೆಂಬರ್ 21, 2012ರಂದು 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದಾಗ ಬೆಂಗಳೂರಿನಲ್ಲಿ ಕೊನೆಯ ಬಾರಿಗೆ ಪಾದರಸ ಈ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಬೆಂಗಳೂರು ನಗರದ ಸಾರ್ವಕಾಲಿಕ ದಾಖಲೆಯು 9.6 °C ಆಗಿದ್ದು ನವೆಂಬರ್ 15, 1967ರಂದು ತಾಪಮಾನವು ದಾಖಲಾಗಿತ್ತು.

Winter Seems to have Arrived in the city of Bengaluru

ಬೆಂಗಳೂರಿನಲ್ಲಿ ಇನ್ನೂ ಮಂಜು ಕವಿದ ವಾತಾವರಣ

ಬೆಂಗಳೂರಿನಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ 48 ಗಂಟೆಗಳ ಕಾಲ ಆಕಾಶವು ಸಾಮಾನ್ಯವಾಗಿ ಮೋಡವಾಗಿರುತ್ತದೆ. ಬೆಳಗ್ಗೆ ಕೆಲವೆಡೆ ಮಂಜು ಕವಿದಿರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಮತ್ತು 15 ಡಿಗ್ರಿ ಸೆಲ್ಸಿಯಸ್‌ನಲ್ಲಿ ಹವಾಮಾನದ ಸಾಧ್ಯತೆಯಿದೆ.

Winter Seems to have Arrived in the city of Bengaluru

ಭಾನುವಾರ ಬೀದರ್ ಬಳಿ ಬಯಲು ಸೀಮೆಯಲ್ಲೇ ಕನಿಷ್ಠ 8.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉತ್ತರ -ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

English summary
Winter seems to have arrived in the city of Bengaluru as dense fog covers the city on Thursday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X