ಜಾರಕಿಹೊಳಿ ಸಹೋದರರು ಬಿಜೆಪಿ ಸೇರುವ ಬಗ್ಗೆ ಯಾರು ಏನಂತಾರೆ?

Recommended Video

      ಜಾರಕಿಹೊಳಿ ಸಹೋದರರು ಬಿಜೆಪಿ ಸೇರುವ ಬಗ್ಗೆ ಯಾರು ಏನಂತಾರೆ? | oneindia kannada

      ಬೆಂಗಳೂರು, ಸೆಪ್ಟೆಂಬರ್ 11: ಬೆಳಗಾವಿಯ ಜಾರಕಿಹೊಳಿ ಸಹೋದರರ ಸುತ್ತಲೂ ಗಿರಕಿಹೊಡಿಯುತ್ತಿರುವ ರಾಜ್ಯ ರಾಜಕಾರಣದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಗರಿಗೆದರಿದ ರಾಜಕೀಯ ಚಟುವಟಿಕೆಗಳು ನಡೆಯಿತು.

      ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿ ಸಚಿವರು , ಶಾಸಕರು, ಮುಖಂಡರು ಜಾರಕಿಹೊಳಿ ಸಹೋದರರ ಬಗ್ಗೆ ಚರ್ಚೆ ನಡೆಸುತ್ತಿದ್ದರು, ಈ ಮಧ್ಯೆ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರುತ್ತಾರೆ ಎನ್ನಲಾದ ಜಾರಕೊಹೊಳಿ ಸಹೋದರರ ಕುರಿತಂತೆ ಕೆಲ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

      ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಉಮೇಶ್ ಕತ್ತಿ ಸೇರಿದಂತೆ ಹಲವರು ಜಾರಕಿಹೊಳಿ ಸಹೋದರರನ್ನು ಬಿಜೆಪಿಗೆ ಕರೆತರಲು ಯಾರೂ ಪ್ರಯತ್ನಿಸುತ್ತಿಲ್ಲ ಎಂದು ಹೇಳಿದ್ದಾರೆ, ಇನ್ನೊಂದೆಡೆ ಕಾಂಗ್ರೆಸ್ ಶಾಸಕ ನಾಗೇಂದ್ರ ರಮೇಶ್ ಜಾರಕಿಹೊಳಿಯವರಿಗೆ ಕೆಲವು ಅಸಮಧಾನ ಇರುವುದು ನಿಜ ಆದರೆ ಪಕ್ಷ ಬಿಡುವುದಿಲ್ಲ ಎಂದು ಒಗಟಾಗಿ ಹೇಳಿದ್ದಾರೆ.

      ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಗಿ ಸಚಿವ ಸತೀಶ್ ಜಾರಕಿಹೊಳಿ ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಗುಸು-ಗುಸು ಆರಂಭವಾಗಿತ್ತು, ಇದೀಗ ಬಹಿರಂಗವಾಗಿಯೇ ಮಾತುಕತೆಗಳು ನಡೆಯುತ್ತಿವೆ.

      ಒಂದೆಡೆ ಜಾರಕಿಹೊಳಿ ಸಹೋದರರು ಬಿಜೆಪಿ ಸೇರಿದರೆ ಬಿಜೆಪಿ ಅವರು ಮಾಡುತ್ತಿರುವ ಮಿಷನ್‌ಗೆ ಗೆಲುವು ಸಿಕ್ಕಂತಾಗುತ್ತದೆ ಹೇಗಾದರೂ ಮಾಡಿ ಅವರನ್ನು ಕಾಂಗ್ರೆಸ್ ನಲ್ಲಿಯೇ ಉಳಿಸಿಕೊಳ್ಳಬೇಕು ಎಂಬ ಪ್ರಯತ್ನವೂ ನಡೆಯುತ್ತಿದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ರಮೇಶ್ ಜಾರಕಿಹೊಳಿಗೆ ಆಹ್ವಾನ ನೀಡಿ ಅವರ ಮನವೊಲಿಸಲು ಯತ್ನ ನಡೆಸಿದ್ದಾರೆ.

      ಇನ್ನೊಂದೆಡೆ ಸತೀಶ್ ಜಾರಕಿಹೊಳಿ ಬಿಜೆಪಿ ನಾಯಕರು ಯಾರೂ ಕೂಡ ನನ್ನನ್ನು ಸಂಪರ್ಕಿಸಿಲ್ಲ ಆದರೆ ಹದಿನೈದು ದಿನಗಳಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಹೇಳಿಕೆಯನ್ನು ನೀಡಿ ಇನ್ನಷ್ಟು ಕುತೂಹಲವನ್ನು ಮೂಡಿಸುತ್ತಿದ್ದಾರೆ. ಜತೆಗೆ ಸಚಿವ ಎಚ್‌ಡಿ ರೇವಣ್ಣ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿದ್ದಾರೆ. ಯಾರು ಏನು ಹೇಳಿದ್ದಾರೆ ಇಲ್ಲಿದೆ ಓದಿ..

       ಕಾಂಗ್ರೆಸ್ ಹೈಕಮಾಂಡ್ ಏಳು ಕೆರೆ ನೀರು ಕುಡಿಯುತ್ತಿದೆ

      ಕಾಂಗ್ರೆಸ್ ಹೈಕಮಾಂಡ್ ಏಳು ಕೆರೆ ನೀರು ಕುಡಿಯುತ್ತಿದೆ

      ಕಾಂಗ್ರೆಸ್ ಹೈಕಮಾಂಡ್ ತನ್ನೊಳಗಿನ ಅಸಮಾಧಾನ ಪರಿಹರಿಸಲಾಗದೆ ಏಳು ಕೆರೆ ನೀರು ಕುಡಿಯುತ್ತಿದೆ. ಹೀಗಿರುವಾಗ ನಮ್ಮ ಪಕ್ಷದ ಶಾಸಕರನ್ನು ಸೆಳೆದು ಏನು ಅವಕಾಶ ಕೊಡಲು ಸಾಧ್ಯ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿ ಮಾಡುತ್ತಿಲ್ಲ ಅಂತಹ ಅಗತ್ಯವೂ ಇಲ್ಲ ಎಂದು ಶಾಸಕ ಸಿಟಿ ರವಿ ಹೇಳಿದ್ದಾರೆ.

       ಆಪರೇಷನ್ ಕಮಲ ಪ್ರಯತ್ನ ನಾವು ಮಾಡುತ್ತಿಲ್ಲ

      ಆಪರೇಷನ್ ಕಮಲ ಪ್ರಯತ್ನ ನಾವು ಮಾಡುತ್ತಿಲ್ಲ

      ಆಪರೇಷನ್ ಕಮಲ ನಾವು ಮಾಡುತ್ತಿಲ್ಲ, ಅವರೇ ಒಳಗೊಳಗೆ ಕಚ್ಚಾಡುತ್ತಿದ್ದಾರೆ, ಬೆಳಗಾವಿ ಕಚ್ಚಾಟ ಇನ್ನೂ ಆರಿಲ್ಲ, ಅದು ಕಾಂಗ್ರೆಸ್ ನ ಒಳಜಗಳ, ಮಂತ್ರಿ ಶಾಸಕರ ಗುದ್ದಾಟ, ಕುಮಾರಸ್ವಾಮಿಯ ಹೇಳಿಕೆಗೆ ಯಾವುದೇ ಕಿಮ್ಮತ್ತಿಲ್ಲದಂತಾಗಿದೆ. ವಿರೋಧ ಪಕ್ಷದವರನ್ನು ದುರ್ಬಲಗೊಳಿಸುವ ಯತ್ನವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಹಾಗಾಗಿ ತಮ್ಮ ತಪ್ಪನ್ನು ಬಿಜೆಪಿಯ ಮೇಲೆ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

       ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿಲ್ಲ ಎಂದ ಉಮೇಶ್ ಕತ್ತಿ

      ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿಲ್ಲ ಎಂದ ಉಮೇಶ್ ಕತ್ತಿ

      ನಾನು ಯಾವ ಕಾಂಗ್ರೆಸ್ ನಾಯಕರನ್ನೂ ಸಂಪರ್ಕಿಸಿಲ್ಲ, ಆಪರೇಷನ್ ಕಮಲ ನಡೆಯುತ್ತಿದೆ ಎನ್ನುವುದೆಲ್ಲಾ ಸುಳ್ಳು, ನನ್ನನ್ನು ಯಾರಾದರೂ ಸಂಪರ್ಕ ಮಾಡಿದರೆ ನಾನು ನಿಮಗೆ ಹೇಳುತ್ತೇನೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ತಿಳಿಸಿದ್ದಾರೆ.

       ರಮೇಶ್ ಜಾರಕಿಹೊಳಿ ನಾವು ಒಟ್ಟಾಗಿದ್ದೇವೆ

      ರಮೇಶ್ ಜಾರಕಿಹೊಳಿ ನಾವು ಒಟ್ಟಾಗಿದ್ದೇವೆ

      ಬೆಳಗಾವಿ ರಾಜಕೀಯ ವಿಚಾರದಲ್ಲಿ ರಮೇಶ್ ಜಾರಕಿಹೊಳಿಗೆ ಒಂದಿಷ್ಟು ನೋವುಂಟಾಗಿದೆ, ಆದರೆ ಪಕ್ಷದ ವೇದಿಕೆಯಲ್ಲಿ ಅದನ್ನು ನಾಯಕರು ಬಗೆಹರಿಸುವ ವಿಶ್ವಾಸವಿಎ. ವಾಲ್ಮೀಕಿ ಸಮುದಾಯದ ವಿಚಾರ ಬಂದಾಗ ನಾವೆಲ್ಲಾ ಒಂದೇ ಎಂದು ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+