Vijayalakshmi Darshan: ಪತಿ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ತಂದಿದ್ದೇನು ಗೊತ್ತಾ?-ಜೈಲು ಸಿಬ್ಬಂದಿ ಹೇಳಿದ್ದೇನು?
Vijayalakshmi Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ನಡುವೆಯೇ ಇದೀಗ ದರ್ಶನ್ ನೋಡಲು ಜೈಲಿಗೆ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಹಾಗೂ ಅಕ್ಕನ ಮಗ ಚಂದನ್ ಆಗಮಿಸಿದ್ದು, ಈ ವೇಳೆ ಇವರಿಗೆ ಚೆಕ್‌ಪೋಸ್ಟ್ ಸಿಬ್ಬಂದಿ ಕೆಲವೊಂದಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ತೆರೆಮರೆಯಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು ಇಂದು ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಅಕ್ಕನ ಮಗ ಚಂದನ್ ದರ್ಶನ್ ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು.

ಪತಿ ದರ್ಶನ್‌ನನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರ ಜೈಲಿಗೆ 3ನೇ ಬಾರಿ ಭೇಟಿ ನೀಡಿದ್ದು, ಈ ವೇಳೆ ಬೆಡ್‌ಶೀಟ್, ಬಟ್ಟೆಯ ಜೊತೆ ಡ್ರೈ ಪ್ರೂಟ್ಸ್, ಸ್ನಾಕ್ಸ್, ಹಣ್ಣುಗಳನ್ನು ದರ್ಶನ್‌ಗೆ ತಂದಿದ್ದರು. ಆದರೆ ಜೈಲಿನ ಚೆಕ್‌ಪೋಸ್ಟ್ ಬಳಿಯೇ ಹಣ್ಣುಗಳನ್ನಷ್ಟೇ ತನ್ನಿ, ಬೇರೆ ಪದಾರ್ಥಗಳಿಗೆ ಅವಕಾಶವಿಲ್ಲ ಎಂದು ಸಿಬ್ಬಂದಿ ತಡೆದಿದ್ದಾರೆ.
ನಂತರ ಸಿಕ್ಕ ಸಮಯದಲ್ಲಿ ದರ್ಶನ್ ಬಳಿ ಪತ್ನಿ, ಮಗ ಮತ್ತು ಅಕ್ಕನ ಮಗ ಚಂದನ್ ಮಾತನಾಡಿ ವಾಪಾಸ್ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯವರೆಗೂ ಪತಿ ದರ್ಶನ್‌ನನ್ನು ಪತ್ನಿ ವಿಜಯಲಕ್ಷ್ಮಿ ಅವರು ಮೂರನೇ ಭೇಟಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಮೊದಲು ಭೇಟಿ ನೀಡಿದಾಗ ಪತ್ನಿ, ಮಗನನ್ನು ನೋಡಿ ತಬ್ಬಿಕೊಂಡು ದರ್ಶನ್ ಕಣ್ಣೀರಿಟ್ಟಿದ್ದರು ಎಂದು ತಿಳಿದುಬಂದಿತ್ತು.
ವಿಶೇಷ ಪೂಜೆ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್‌ನನ್ನು ಜಾಮೀನಿನ ಮೇಲೆ ಜೈಲಿನಿಂದ ಹೊರತರಲು ಪತ್ನಿ ವಿಜಯಲಕ್ಷ್ಮಿ ಅವರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಇದೀಗ ಫವಲ್ ಫುಲ್ ದೇವತೆ ಮೊರೆ ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿಕ ಕೊಲೆ ಪ್ರಕರಣದ ತನಿಖೆ ಇದೀಗ ಚುರುಕು ಪಡೆದಿದ್ದು, ಇದರ ಬೆನ್ನಲ್ಲೇ ಜೈಲು ಪಾಲಾಗಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನ ಬಂಡೆ ಮಾಂಕಾಳಮ್ಮ ದೇವರೆ ಮೊರೆ ಹೋಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನೂ ಕಾನೂನು ತಜ್ಞರ ಪ್ರಕಾರ, ದರ್ಶನ್ ಸದ್ಯ ಬಿಡುಗುಡೆಯಂತೂ ದೂರದ ಮಾತು ಅಂತಿದ್ದು, ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.
ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಶಾಸಕರೊಬ್ಬರ ಕಾರು ಚಾಲಕ ಈಗಾಗಲೇ ವಿಚಾರಣೆಗೆ ಹಾಜರಾಗಿದ್ದಾನೆ. ಮತ್ತೊಂದೆಡೆ ಜೈಲು ಸೇರಿರುವ ಪತಿಗಾಗಿ ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂನಲ್ಲಿರುವ ಬಂಡೆ ಮಹಾಕಾಳಿ ದೇಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications