ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಭೇಟಿ ಮಾಡದೆ ಸತೀಶ್ ಜಾರಕಿಹೊಳಿ ವಾಪಸ್ ಬಂದಿದ್ದೇಕೆ?

|
Google Oneindia Kannada News

Recommended Video

ರಾಹುಲ್ ಗಾಂಧಿಯನ್ನ ಭೇಟಿ ಮಾಡದೇ ದೆಹಲಿಯಿಂದ ಸತೀಶ್ ಜಾರಕಿಹೊಳಿ ವಾಪಸಾಗಿದ್ಯಾಕೆ? | Oneindia Kannada

ಬೆಂಗಳೂರು, ಸೆಪ್ಟೆಂಬರ್ 21: ವಾರಕ್ಕೆ ಮೂರು ಬಾರಿ ಬೆಂಗಳೂರಿಗೆ ಭೇಟಿ ನೀಡುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಇಲ್ಲಿಯೇ ಸಿಗುತ್ತಾರೆ ಎಂದು ಗೊತ್ತಿದ್ದರೂ ದೆಹಲಿಗೆ ತೆರಳಿದ್ದ ಭಿನ್ನಮತೀಯ ನಾಯಕ ಸತೀಶ್ ಜಾರಕಿಹೊಳಿ ರಾಹುಲ್ ಗಾಂಧಿ ಭೇಟಿ ಮಾಡದೆ ವಾಪಸ್ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೇವಲ ವೇಣುಗೋಪಾಲ್ ಭೇಟಿಯೇ ಉದ್ದೇಶವಾಗಿದ್ದರೆ ಬೆಂಗಳೂರಿನಲ್ಲೇ ಭೇಟಿ ಮಾಡಬಹುದಿತ್ತು ಆದರೆ ದೆಹಲಿಗೆ ತೆರಳಿ ರಾಹುಲ್ ಗಾಂಧಿಯನ್ನು ಭೇಟಿ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಬಂದ ದಾರಿಗೆ ಸುಂಕವಿಲ್ಲದಂತೆ ರಾಹುಲ್ ಭೇಟಿ ಮಾಡದೆ ವಾಪಸ್ ಆಗಿದ್ದಾರೆ.

ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ಸತೀಶ್ ಜಾರಕಿಹೊಳಿ ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ಸತೀಶ್ ಜಾರಕಿಹೊಳಿ

ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರ ಪೈಕಿ ಅತ್ಯಂತ ಪ್ರಬಲ ನಾಯಕ ಎಂದೆನಿಸಕೊಂಡಂತಹ ಸತೀಶ್ ಜಾರಕಿಹೊಳಿ ಅಸಮಾಧಾನ ಒಳಗೊಳಗೆ ಕುದಿಯುತ್ತಿದೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ರಾಜಕಾರಣದ ಮೂಲಗಳ ಪ್ರಕಾರ ಸತೀಶ್ ಜಾರಕಿಹೊಳಿ ಮುಂದಿಟ್ಟಿರುವ ಬೇಡಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವುದೇ ಸತೀಶ್ ವಾಪಸ್ ಆಗಲು ಕಾರಣ ಎನ್ನಲಾಗುತ್ತಿದೆ.

ಈಗಾಗಲೇ ದಲಿತರೊಬ್ಬರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದು, ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ನಾಯಕ ಜನಾಂಗಕ್ಕೆ ಡಿಸಿಎಂ ಸ್ಥಾನ ಕೊಡಬೇಕೆಂಬುದು ಜಾರಕಿಹೊಳಿ ಸಹೋದರರ ವಾದವಾಗಿದೆ.

ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದ ಸತೀಶ್ ಜಾರಕಿಹೊಳಿ ಹಿಂದೆ ಸಚಿವ ಸ್ಥಾನ ಕಳೆದುಕೊಂಡಾಗ ಬಂಡೆದ್ದಿರಲಿಲ್ಲ.

ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್‌ನಿಂದ ಸಂಧಾನ ಸೂತ್ರ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್‌ನಿಂದ ಸಂಧಾನ ಸೂತ್ರ

ಆದರೆ ತಮ್ಮ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮನವರಿಕೆಯಾಗಿದೆ ಎಂದು ಸಾಬೀತಾಗುತ್ತಲೇ ಡಿಸಿಎಂ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಡಿಸಿಎಂ ಪಟ್ಟವನ್ನು ಮತ್ತೊಂದು ದಲಿತ ಜನಾಂಗಕ್ಕೆ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಇನ್ನಿತರೆ ಪ್ರಮುಖ ಸಮುದಾಯಗಳು ದೂರ ಸರಿಯಬಹುದು ಎಂಬ ಭಯದಿಂದ ಕಾಂಗ್ರೆಸ್ ಅಂತಹ ಸಾಹಸಕ್ಕೆ ಕೈ ಹಾಕುತ್ತಿಲ್ಲ.

ಕಾಂಗ್ರೆಸ್ ಅಸಮಾಧಾನ, ಬಿಜೆಪಿಗೆ ಲಾಭಕ್ಕಿಂತ ನಷ್ಟವಾಗಿದ್ದೇ ಹೆಚ್ಚುಕಾಂಗ್ರೆಸ್ ಅಸಮಾಧಾನ, ಬಿಜೆಪಿಗೆ ಲಾಭಕ್ಕಿಂತ ನಷ್ಟವಾಗಿದ್ದೇ ಹೆಚ್ಚು

ಇದನ್ನು ಅರ್ಥಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಜಾರಕಿಹೊಳಿ ಸಹೋದರರಿಗಿಲ್ಲ ಹೀಗಾಗಿ ಸತೀಶ್ ಜಾರಕಿಹೊಳಿ ದೆಹಲಿ ಭೇಟಿ ಕೇವಲ ಸಮಸ್ಯೆ ಇತ್ಯರ್ಥವಾಗಿದೆ ಎನ್ನುದಕ್ಕೆ ಸೂಚಕವಾಗಿಲ್ಲ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಜಾರಕಿಹೊಳಿ ಸಹೋದರರು ಸುಮ್ಮನಿರುವುದಿಲ್ಲ ಎಂಬ ಉದ್ದೇಶವನ್ನು ಹೊರಹಾಕಿದೆ.

ಬೆಂಗಳೂರಲ್ಲೇ ವೇಣುಗೋಪಾಲ್ ಇರ್ತಾರಲ್ಲ?

ಬೆಂಗಳೂರಲ್ಲೇ ವೇಣುಗೋಪಾಲ್ ಇರ್ತಾರಲ್ಲ?

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ವಾರಕ್ಕೆ ಮೂರು ಬಾರಿಗೆ ಬೆಂಗಳೂರಿಗೆ ಭೇಟಿ ನೀಡುತ್ತಾರೆ, ಆದರೂ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿ ಅವರನ್ನು ಭೇಟಿ ಮಾಡಿರುವ ಹಿಂದಿನ ಉದ್ದೇಶ ಎನ್ನುವುದು ಸ್ಪಷ್ಟವಾಗಿಲ್ಲ. ರಾಹುಲ್ ಗಾಂಧಿ ಸರ್ತೀಶ್ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಹೀಗಾಗಿ ಅವರು ರಾಹುಲ್ ಗಾಂಧಿ ಭೇಟಿ ಮಾಡಿ ವಾಪಸಾಗಿದ್ದಾರೆ, ಮೂಲ ಉದ್ದೇಶ ರಾಹುಲ್ ಗಾಂಧಿ ಭೇಟಿಯೇ ಆಗಿತ್ತು ಎಂದು ಕೆಲವು ಮೂಲಗಳು ತಿಳಿಸಿವೆ.

ಪರಿಶಿಷ್ಟ ಜಾತಿಗೆ ಡಿಸಿಎಂ ಪಟ್ಟ ಓಕೆ, ಪರಿಶಿಷ್ಟ ಪಂಗಡಕ್ಕೆ ಅಧಿಕಾರ ಇಲ್ಲ ಏಕೆ?

ಪರಿಶಿಷ್ಟ ಜಾತಿಗೆ ಡಿಸಿಎಂ ಪಟ್ಟ ಓಕೆ, ಪರಿಶಿಷ್ಟ ಪಂಗಡಕ್ಕೆ ಅಧಿಕಾರ ಇಲ್ಲ ಏಕೆ?

ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಡಿಸಿಎಂ ಪಟ್ಟವನ್ನು ಮತ್ತೊಂದು ದಲಿತ ಜನಾಂಗಕ್ಕೆ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಇನ್ನಿತರೆ ಪ್ರಮುಖ ಸಮುದಾಯಗಳು ದೂರ ಸರಿಯಬಹುದು ಎಂಬ ಭಯದಿಂದ ಕಾಂಗ್ರೆಸ್ ಅಂತಹ ಸಾಹಸಕ್ಕೆ ಕೈ ಹಾಕುತ್ತಿಲ್ಲ, ಇದನ್ನು ಜಾರಕಿಹೊಳಿ ಸಹೋದರರು ಒಪ್ಪಲು ತಯಾರಿಲ್ಲ.

ರಾಹುಲ್ ಗಾಂಧಿನೇ ಭೇಟಿ ಮಾಡಿಲ್ವಾ ಅಥವಾ ಸತೀಶ್ ಹೋಗಲಿಲ್ವಾ?

ರಾಹುಲ್ ಗಾಂಧಿನೇ ಭೇಟಿ ಮಾಡಿಲ್ವಾ ಅಥವಾ ಸತೀಶ್ ಹೋಗಲಿಲ್ವಾ?

ಸತೀಶ್ ಜಾಕಿಹೊಳಿ ದೆಹಲಿಗೆ ತೆರಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಹಿಂದಿರುಗಿದ್ದಾರೆ, ಅವರನ್ನೇ ಭೇಟಿ ಮಾಡುವುದಾಗಿದ್ದರೆ ಬೆಂಗಳೂರಿಗೆ ವಾರಕ್ಕೊಮ್ಮೆ ಬರುತ್ತಿದ್ದರು ಆದರೆ ದೆಹಲಿಗೆ ತೆರಳಿ ಭೇಟಿ ಮಾಡುವ ಅಗತ್ಯವೇನಿತ್ತು ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ ರಾಹುಲ್ ಗಾಂಧಿಯೇ ಸತೀಶ್ ಅವರನ್ನು ಭೇಟಿ ಮಾಡಲು ಒಪ್ಪಲಿಲ್ಲವೇ ಅಥವಾ ಸತೀಶ್ಸತ್ಯವಾಗಿಯೂ ರಾಹುಲ್ ಗಾಂಧಿ ಭೇಟಿ ಮಾಡಲು ಹೋಗಿರಲಿಲ್ಲವೇ? ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

 ಒಳಗೊಳಗೆ ಕುದಿಯುತ್ತಿದೆಯೇ ಅವ್ಯಕ್ತ ಅವಮಾನ?

ಒಳಗೊಳಗೆ ಕುದಿಯುತ್ತಿದೆಯೇ ಅವ್ಯಕ್ತ ಅವಮಾನ?

ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿ ವಾಪಸಾಗಿದ್ದಾರೆ, ಬಂದ ಮೇಲೆ ಎಲ್ಲಿಯೂ ತೆರಳದೆ ಮೌನ ತಾಳಿದ್ದಾರೆ, ಇದರ ಹಿಂದೆ ಅವ್ಯಕ್ತ ಅವಮಾನ ಅಡಗಿದೆಯೇ ಅಥವಾ ಕೋಪ ನಿಜವಾಗಿಯೂ ಶಮನವಾಗಿದೆಯೇ ಎನ್ನುವ ಸಂಶಯವಿದೆ.

English summary
Senior Congress leader Satish Jarkiholi has returned from Delhi despite meeting AICC president Rahul Gandhi on Thursday night. Sources said Rahul was negative on Jarkiholi brothers demand to create another deputy CM post in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X