Property: ಬೆಂಗಳೂರಲ್ಲಿ ಆಸ್ತಿ ಬೆಲೆ & ಮನೆ ಬಾಡಿಗೆ ಹೆಚ್ಚಳಕ್ಕೆ ಇದೇ ಕಾರಣ!
Property: ಬೆಂಗಳೂರಿನಲ್ಲಿ ದಿನೇ ದಿನೇ ಭೂಮಿ, ಮನೆ ಹಾಗೂ ಫ್ಲಾಟ್ ಸೇರಿದಂತೆ ವಿವಿಧ ಆಸ್ತಿಗಳ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಕಳೆದ ಎರಡು ಮೂರು ವರ್ಷದ ಅವಧಿಯಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಹಾಗೂ ಆಸ್ತಿಗಳ ಬೆಲೆ ಅನಿರೀಕ್ಷಿತವಾಗಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಮನೆ ಕಟ್ಟಬೇಕು ಎನ್ನುವುದು ಮಾತ್ರವಲ್ಲ ಒಂದು ಸಣ್ಣ ಜಾಗ ಖರೀದಿ ಮಾಡಬೇಕು ಎನ್ನುವುದು ಸಹ ಹಲವರಿಗೆ ಕನಸಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಹಲವು ಆಸ್ತಿದಾರರು ಮನೆಗಳ ಬಾಡಿಗೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಳ ಮಾಡಿದ್ದಾರೆ. ಯಾವ ಕಾರಣಕ್ಕೆ ಈ ರೀತಿ ಆಗುತ್ತಿದೆ ಎನ್ನುವ ವಿಷಯದ ಬಗ್ಗೆ ಇದೀಗ ಸ್ಪಷ್ಟನೆ ಸಿಕ್ಕಿದೆ.
ಬೆಂಗಳೂರು ಅಭಿವೃದ್ಧಿಯ ವೇಗದಲ್ಲಿ ಇರುವ ನಗರ. ದೊಡ್ಡ ದೊಡ್ಡ ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ನಡೆಯುತ್ತಿವೆ. ಮೆಟ್ರೋ ಯೋಜನೆ ವಿಸ್ತರಣೆ, ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೂಡಿಕೆ ಹೆಚ್ಚಳ, ಸುರಂಗ ಮಾರ್ಗಗಳ ನಿರ್ಮಾಣ ಹಾಗೂ ಎಕ್ಸ್‌ಪ್ರೆಸ್‌ವೇಗಳ ಅಭಿವೃದ್ಧಿ ಹಲವು ಅಭಿವೃದ್ಧಿ ಯೋಜನೆ ನಡೆದಿದೆ. ಆದರೆ ಬೆಂಗಳೂರಿನಲ್ಲಿ ಮನೆ ಬಾಡಿಗೆ ಹಾಗೂ ಆಸ್ತಿಗಳ ಬೆಲೆ ಹೆಚ್ಚಳಕ್ಕೆ ಅಭಿವೃದ್ಧಿ ಮಾತ್ರ ಕಾರಣವಲ್ಲ. ಬ್ರ್ಯಾಂಡ್ ಬೆಂಗಳೂರು ಎನ್ನುವ ಪರಿಕಲ್ಪನೆಯನ್ನು ಆಸ್ತಿದಾರರು ಬಳಸಿಕೊಳ್ಳುತ್ತಿದ್ದಾರೆ.

ಹೌದು ಬ್ರ್ಯಾಂಡ್ ಬೆಂಗಳೂರು ಎನ್ನುವುದು ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ರಸ್ತೆಗಳ ಗುಣಮಟ್ಟ ಸರಿ ಇಲ್ಲ. ಕಸದ ಸಮಸ್ಯೆ ಪರಿಹಾರವಾಗಿಲ್ಲ, ಕಸ ಸಂಗ್ರಹ ಸಮರ್ಪಕವಾಗಿ ಆಗದೆ ಜನ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಇದರಿಂದ ಬ್ಲಾಕ್‌ಸ್ಪಾಟ್‌ಗಳ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೇ ಮಳೆ ಬಂದರೆ ರಸ್ತೆಗಳಲ್ಲಿ ಜಲಾವೃತವಾಗಿ ರಸ್ತೆಗಳು ಅಧ್ವಾನವಾಗುತ್ತಿವೆ. ಬೆಂಗಳೂರಿನಲ್ಲಿ ಮೌಲಸೌಕರ್ಯ ಕೊರತೆ ಹೆಚ್ಚಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಬೆಂಗಳೂರಿನಲ್ಲಿ ಆಸ್ತಿಗಳ ಬೆಲೆ ಕಡಿಮೆಯಾಗುತ್ತಿಲ್ಲ. ಇದಕ್ಕೆ ಕಾರಣ ಬ್ರ್ಯಾಂಡ್ ಬೆಂಗಳೂರು ವ್ಯಾಲ್ಯೂ ಪರಿಕಲ್ಪನೆ ಹಾಗೂ ಮುಂದಿನ ದಿನಗಳಲ್ಲಿ ಭೂಮಿಯ ಬೆಲೆ ಇನ್ನಷ್ಟು ಹೆಚ್ಚಳವಾಗಲಿದೆ ಎನ್ನುವುದು.
ಕಳೆದ ಒಂದು ದಶಕದ ಅವಧಿಯಲ್ಲಿ ಬೆಂಗಳೂರು ಸಾಕಷ್ಟು ಅಭಿವೃದ್ಧಿ ಕಂಡಿದೆ. ಅಲ್ಲದೇ ವಿವಿಧ ಪ್ರದೇಶಗಳಲ್ಲಿ ಲಕ್ಷ.. ಲಕ್ಷಕ್ಕೆ ಮಾರಾಟವಾಗುತ್ತಿದ್ದ ಭೂಮಿ ಬೆಲೆ ಇದೀಗ ಬರೋಬ್ಬರಿ ಕೋಟಿಗೆ ಬೆಲೆ ಬಾಳುತ್ತಿದೆ. ಈ ಕಾರಣಕ್ಕೆ ಈಗ ಯಾರೂ ಆಸ್ತಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ ಹೆಸರಿನಲ್ಲಿ ಆಸ್ತಿ ಹಾಗೂ ಮನೆಗಳ ಬಾಡಿಗೆ ಭಾರೀ ಹೆಚ್ಚಳ ಮಾಡಲಾಗಿದೆ. ರಿಯಲ್ ಎಸ್ಟೇಟ್‌ದಾರರು ಇದೇ ವಿಷಯವನ್ನು ಇರಿಸಿಕೊಂಡು ಪ್ರಾಪರ್ಟಿ ಮೌಲ್ಯ ಹೆಚ್ಚಿಸುತ್ತಿದ್ದಾರೆ.
ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ಜಿಗಿತ ಕಾಣುತ್ತಲ್ಲೇ ಇದೆ. ಆದರೆ ಈ ನಡುವೆ ಸಣ್ಣ ಸಣ್ಣ ಅಪಾರ್ಟ್‌ಮೆಂಟ್ ಹಾಗೂ ಜಾಗಗಳನ್ನು ಖರೀದಿ ಮಾಡುವುದಕ್ಕೆ ಜನ ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಎಐನಿಂದ ಐಟಿ ಉದ್ಯಮದಲ್ಲೇ ಜಾಬ್ ಲಾಸ್ ಆಗುತ್ತಿದೆ. ಆದರೆ, ಇದರ ಹೊರತಾಗಿಯೂ ಬೇರೆ ಬೇರೆ ಕಾರಣಗಳಿಗೆ ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ಆಸ್ತಿ ಹಾಗೂ ಬಾಡಿಗೆ ಹೆಚ್ಚಾಗುತ್ತಿದೆ.
ಬಡವರಿಗೆ ಸಂಕಷ್ಟ: ಇನ್ನು ಬೆಂಗಳೂರಿನಲ್ಲಿ ಏಕಾಏಕಿ ಈ ರೀತಿ ಮನೆಗಳ ಬಾಡಿಗೆ ಹಾಗೂ ಆಸ್ತಿ ಬೆಲೆ ಹೆಚ್ಚಳವಾಗುತ್ತಿರುವುದು ಬಡವರು ಹಾಗೂ ಮಧ್ಯಮ ವರ್ಗದವರನ್ನು ಸಂಕಷ್ಟಕ್ಕೆ ದೂಡಿದೆ.












Click it and Unblock the Notifications