ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿಗಳಿಗೆ ಸಂಚಾರ ಸುಲಭ, ವೈಟ್‌ಫೀಲ್ಡ್ ಸಂಪರ್ಕಿಸುವ 14 ರಸ್ತೆಗಳ ಅಭಿವೃದ್ಧಿ

|
Google Oneindia Kannada News

ಬೆಂಗಳೂರು, ಮಾರ್ಚ್ 9: ವೈಟ್‌ಫೀಲ್ಡ್‌ಗೆ ಸಂಚರಿಸುವುದು ಇನ್ನು ಮುಂದೆ ಸುಲಭ, ಹೆಚ್ಚು ದೂರವಾದರೂ ಸುಲಭವಾಗಿ ತೆರಳಬಹುದಾಗಿದೆ.

ಮುಂಬರುವ ದಿನಗಳಲ್ಲಿ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವ 14 ರಸ್ತೆಗಳನ್ನು ಬೃಹತ್ ಬೆಂಗಳೂರು ಮಹಾಗರ ಪಾಲಿಕೆ(ಬಿಬಿಎಂಪಿ) ಅಭಿವೃದ್ಧಿ ಪಡಿಸುತ್ತಿದೆ.

ಹೆಬ್ಬಾಳ-ಕೆಆರ್‌ ಪುರ ರಸ್ತೆ ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷಿತವಲ್ಲ ಯಾಕೆ? ಹೆಬ್ಬಾಳ-ಕೆಆರ್‌ ಪುರ ರಸ್ತೆ ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷಿತವಲ್ಲ ಯಾಕೆ?

ಈಗಾಗಲೇ ರಸ್ತೆಗಳ ಅಭಿವೃದ್ಧಿ ಕಾರ್ಯಗಳ ಕುರಿತು ಯೋಜನಾ ವರದಿ ಸಿದ್ಧಪಡಿಸಿದೆ. ಡಿಪಿಆರ್ ಮುಂದಿಟ್ಟುಕೊಂಡು ಟೆಂಡರ್ ಆಹ್ವಾನಿಸಿದೆ. ಬಿಡ್ಡರ್‌ಗಳು ಶುಕ್ರವಾರದಿಂದಲೇ ಕಾಮಗಾರಿ ಆರಂಭಿಸಿದ್ದಾರೆ. ಯೋಜನಾ ವರದಿಯು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳುತ್ತದೆ.

White fields roads to get smoother

ಕೆಲಸದ ಆರ್ಡರ್‌ಗಳನ್ನು ನೀಡಲಾಗಿದೆ. ಅವರೊಂದು ಯೋಜನಾ ವರದಿಯನ್ನು ಸಿದ್ಧಪಡಿಸುತ್ತಾರೆ. ಲೋಕಸಭಾ ಚುನಾವಣೆಯೂ ಸನಿಹವಾಗುತ್ತಿರುವುದರಿಂದ ಬೇಗ ಬೇಗ ಕಾರ್ಯಗಳು ಆರಂಭವಾಗಬೇಕಿದೆ ಎಂದು ಮಹದೇವಪುರ ಝೋನ್‌ನ ಮುಖ್ಯ ಎಂಜಿನಿಯರ್ ಜಯಶಂಕರ್ ರೆಡ್ಡಿ ತಿಳಿಸಿದ್ದಾರೆ.

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ಚುನಾವಣೆ ಮುಗಿದ ಬಳಿಕ ಜೂನ್‌ನಲ್ಲಿ ಟೆಂಡರ್ ಆಹ್ವಾನಿಸಲಾಗುತ್ತದೆ. ಡಿಸೆಂಬರ್ ಒಳಗೆ ಅಭಿವೃದ್ಧಿ ಕಾರ್ಯಗಳು ಆರಂಭವಾಗುತ್ತವೆ. ಈ ಯೋಜನೆಯು ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ಘೋಷಿಸಲಾಗಿತ್ತು. ಆ ಪ್ರದೇಶದಲ್ಲಿ ಮೆಟ್ರೋ ಕಾರ್ಯ ನಡೆಯುತ್ತಿರುವ ಕಾರಣ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವುದು ಸ್ವಲ್ಪ ತಡವಾಗಿದೆ ಎಂದು ಅವರು ತಿಳಿಸಿದ್ದಾರೆ.

English summary
By the following year, commuters in Whitefield will see some relief in traffic along the major arterial roads in the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X