ಯಮ ಬರ್ತಾನೆ, ನಿಮ್ಮ ಬೈಕ್ ಹಿಂದೆ ಕೂರ್ತಾನೆ, ಹೆಲ್ಮೆಟ್ ಹಾಕ್ತೀರಾ ಇಲ್ವಾ?
Recommended Video

ಬೆಂಗಳೂರು, ಜು.18: ಯಮ ಬರ್ತಾನೆ, ನಿಮ್ಮ ಬೈಕ್ ಹಿಂದೆ ಬರ್ತಾನೆ, ಹೆಲ್ಮೆಟ್ ಹಾಕ್ತೀರಾ ಇಲ್ವಾ, ನನ್ನ ಜತೆ ಬರ್ತೀರಾ ಅಂತ ವಾರ್ನಿಂಗ್ ಕೊಡ್ತಾನೆ, ಒಂದು ಹೆಲ್ಮೆಟ್ ಧರಿಸದಿದ್ದರೆ ಏನೆಲ್ಲಾ ಅನಾಹುತವಾಗುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಯಮನ ಕಾನ್ಸೆಪ್ಟ್ ಇಟ್ಟುಕೊಂಡು ನಗರಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ.
ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ತಿಳಿ ಹೇಳಲು ಸಂಚಾರ ಪೊಲೀಸರು ಯಮಧರ್ಮನನ್ನೇ ಧರೆಗಿಳಿಸಿದ್ದರು. ಕಳೆದ ವಾರವಷ್ಟೇ ಹಲಸೂರು ಗೇಟ್ ಸಂಚಾರ ಪೊಲೀಸರು ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ತಿಳಿಹೇಳಲು ಯಮ ಧರ್ಮರಾಜನನ್ನು ಭೂಮಿಗಿಳಿಸಿದ್ದರು.
ಈಗ ಹೈಗ್ರೌಂಡ್ಸ್ ಸಂಚಾರ ಪೊಲೀಸರ ಸರದಿ. ಹೈಗ್ರೌಂಡ್ಸ್ ಸಂಚಾರ ಠಾಣಾ ವ್ಯಾಪ್ತಿಯ ರೇಸ್ ಕೋರ್ಸ್ ರಸ್ತೆಯಲ್ಲಿ ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಯಮನಿಂದ ಎಚ್ಚರಿಕೆ ಕೊಡಿಸಿದರು. ಇದೀಗ ಟ್ರಿನಿಟಿ ವೃತ್ತಕ್ಕೆ ಯಮರಾಜ ಕಾಲಿಟ್ಟಿದ್ದಾನೆ.
'ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಿ, ಇಲ್ಲವಾದರೆ ನನ್ನ ಜತೆ ನಡೆಯಿರಿ, ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ, ಸ್ವತಃ ಯಮ. ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸರು ಕೈಗೊಂಡಿರುವ ಹೊಸ ಉಪಾಯವಿದು. ಯಮನ ವೇಷಧರಿಸಿದ ವ್ಯಕ್ತಿ ಒಂದು ಕೈಯಲ್ಲಿ ಯಮಪಾಷ ಮತ್ತೊಂದು ಹೆಲ್ಮೆಟ್ ಹಿಡಿದು ಹೆಲ್ಮೆಟ್ ಹಾಕದಿದ್ದರೆ ಯಮಪಾಷವೇ ಗಟ್ಟಿ ಎನ್ನುತ್ತಾ ಜಾಗೃತಿ ಮೂಡಿಸುತ್ತಿದ್ದಾನೆ. ಅವನಿಗೆ ಬಿಳಿ ಸಮವಸ್ತ್ರ ತೊಟ್ಟ ಟ್ರಾಫಿಕ್ ಪೊಲೀಸರ ಬೆಂಬಲ.
|
ಹೆಲ್ಮೆಟ್ ಬಗ್ಗೆ ಜಾಗೃತಿಗೆ ಮೂಡಿಸಲು ಟ್ರಿನಿಟಿ ವೃತ್ತಕ್ಕೆ ಬಂದ ಯಮ
ಹೆಲ್ಮೆಟ್ ಕುರಿತು ಜಾಗೇರಿ ಮೂಡಿಸಲು ರಂಗಭೂಮಿ ಕಲಾವಿದರೊಬ್ಬರು ಯಮನ ವೇಚ ತೊಟ್ಟು, ಹೆಲ್ಮೆಟ್ ಧರಿಸಲಿರುವ ಸವಾರರಿಗೆ ಎಚ್ಚರಿಕೆ ನೀಡಿದರು, ಹೆಲ್ಮೆಟ್ ಧರಿಸದಿದ್ದರೆ ಸಾವು ಖಚಿತ ಎಂದು ಮನವರಿಗೆ ಮಾಡಿಕೊಟ್ಟರು.
|
ಬೈಕ್ ಸವಾರನಿಗೆ ಹೆಲ್ಮೆಟ್ ಹಾಕಿಸಲು ರಸ್ತೆಗಿಳಿದ ಯಮ
ಇನ್ನು ಚಾಲುಕ್ಯ ವೃತ್ತದಲ್ಲೂ ಕೂಡ ಇದೇ ರೀತಿ ಜಾಗೃತಿ ಅಭಿಯಾನವನ್ನು ನಡೆಸಲಾಯಿತು. ಟ್ರಾಫಿಕ್ ನಿಯಮ ಉಲ್ಲಂಘನೆ ನಿಮ್ಮ ಜೀವಕ್ಕೇ ಆಪತ್ತನ್ನು ತಂದೊಡ್ಡಬಹುದು ಎಂದು ಸಂದೇಶ ಸಾರಲು ರಂಗಭೂಮಿ ಕಲಾವಿದರೊಬ್ಬರು ಯಮನ ವೇಶ ಧರಿಸಿ ರಸ್ತೆಗಳಲ್ಲಿ ಓಡಾಡಿ ಜಾಗೃತಿ ಮೂಡಿಸಿದರು.
ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ವಿನೂತನ ಪ್ರಯತ್ನವೊಂದನ್ನು ಮಾಡಿದ್ದಾರೆ. ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡೊರಿಗೆ ಯಮನಿಂದ ವಾರ್ನಿಂಗ್ ಎಂಬ ವಿಶೇಷ ಅಭಿಯಾನವನ್ನು ಪೊಲೀಸರು ಕೈಗೊಂಡಿದ್ದಾರೆ.ಪ್ರಾಣ ಉಳೀಬೇಕು ಅಂದ್ರೆ ಹೆಲ್ಮೆಟ್ ಹಾಕ್ಬೇಕು. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಯಮನೇ ಬೆನ್ನ ಹಿಂದೆ ಕೂತಿರ್ತಾನೆ. ಆ ಮರಣ ದೇವ ರೋಡ್‍ನಲ್ಲಿ ಹೋಗೋರನ್ನು ತಡೆದು ಅವರ ಬೈಕ್, ಸ್ಕೂಟರ್ ಹತ್ತುತ್ತಾನೆ ಅಂತ ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ.
|
ಪೊಲೀಸರು ಹೆಲ್ಮೆಟ್ ಧರಿಸಿ ಎಂದು ಯಾಕೆ ಹೇಳುತ್ತಾರೆ
ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ,ಮೊಕ್ಕದ್ದಮೆ ದಾಖಲಿಸಿಕೊಂಡು ದಂಡ ವಿಧಿಸಿದರೂ ಸಹ ಹೆಲ್ಮೆಟ್ ಧರಿಸದೇ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಿದ್ದರೂ ದಹ ದ್ವಿಚಕ್ರ ವಾಹನ ಸವಾರರು ಈ ನಿಯಮ ಪಾಲಿಸುತ್ತಿಲ್ಲವಾದ್ದರಿಂದ ಸಂಚಾರ ಪೊಲೀಸರು ಈ ಮೂಲಕ ಜಾಗೃತಿ ಮೂಡಿಸಿದ್ದಾರೆ.
ಈ ಕುರಿತು ವಿಟಿಯೋವಂನ್ನು ಪೊಲೀಸರು ಟ್ವಿಟ್ಟರ್‌ನಲ್ಲಿ ಹಾಕಿದ್ದು, ಈ ವಿಡಿಯೋ ನೋಡಿದರೆ ಯಾಕೆ ಹೆಲ್ಮೆಟ್ ಧರಿಸಬೇಕು ಎಂದು ಅರ್ಥವಾಗುತ್ತದೆ. ಹೆಲ್ಮೆಟ್ ಮಹತ್ವ ಏನೆಂದು ತಿಳಿಯುತ್ತದೆ.

ಹೆಲ್ಮೆಟ್ ಧರಿಸದಿರುವವರಿಗೆ ಯಮನ ಸ್ವಾಗತ
ಜು.10ರಂದು ಹಲಸೂರು ಪೊಲೀಸರು ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವ ಯಮ ವೇಷಧಾರಿಯಿಂದ ಗುಲಾಬಿ ಹೂ ನೀಡಿ ಸ್ವಾಗತಿಸುವ ಮೂಲಕ ಸಂಚಾರ ನಿಯಮವನ್ನು ಉಲ್ಲಂಘಿಸಬೇಡಿ ಎಂದು ತಿಳಿ ಹೇಳಿದರು.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications