Water Crisis: ಕಾವೇರಿ ಐದನೇ ಹಂತದ ಯೋಜನೆ ಯಾವಾಗ ಕಾರ್ಯಾರಂಭ? ಮಾಹಿತಿ ಇಲ್ಲಿದೆ

ಬೆಂಗಳೂರು, ಏಪ್ರಿಲ್. 14: ರಾಜ್ಯ ರಾಜಧಾನಿ ಬೆಂಗಳೂರು ಇತ್ತೀಚಿಗೆ ಇತಿಹಾಸದಲ್ಲೇ ಅತ್ಯಂತ ಭೀಕರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಪರಿಸ್ಥಿತಿಯನ್ನು ನಿಭಾಯಿಸಲು ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ.

ನಿರ್ಮಾಣ ಕಾಮಗಾರಿಗಳು, ವಾಹನ ಶುಚಿಗೊಳಿಸುವಿಕೆ ಮತ್ತು ತೋಟಗಾರಿಕೆಗಾಗಿ ಕುಡಿಯುವ ನೀರಿನ ಬಳಕೆಯನ್ನು ನಿಷೇಧಿಸುವುದರಿಂದ ಹಿಡಿದು ಬೃಹತ್ ಗ್ರಾಹಕರಿಗೆ ನೀರಿನ ಸರಬರಾಜನ್ನು ಶೇಕಡಾ 20 ರಷ್ಟು ಕಡಿಮೆ ಮಾಡಿದೆ. ನೀರರಿನ ಬಿಕ್ಕಟ್ಟನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಬಿಡಬ್ಲ್ಯೂಎಸ್‌ಎಸ್‌ಬಿ ಹುಡುಕುತ್ತಿದೆ.

When will Cauvery Stage V project will commissioned

ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ಈ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಭವಿಷ್ಯದಲ್ಲಿ ಇದನ್ನು ತಡೆಯಲು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಡೆಕ್ಕನ್ ಹೆರಾಲ್ಡ್ ಜೊತೆಗೆ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಪರಿಸ್ಥಿತಿ ಸುಧಾರಿಸಿದೆ. ಕೊಳೆಗೇರಿಗಳು ಮತ್ತು ತೀವ್ರ ಕೊರತೆಯಿರುವ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಕ್ರಮ ಜನರ ಜೀವನದ ಮೇಲೆ ನೇರ ಪರಿಣಾಮ ಬೀರಿದೆ. ಮಾರ್ಚ್‌ನಲ್ಲಿ, ಪ್ರತಿದಿನ ನೀರಿನ ಕೊರತೆಯ ಬಗ್ಗೆ ಸುಮಾರು 300 ದೂರುಗಳು ಬರುತ್ತಿದ್ದವು, ಈಗ ದಿನಕ್ಕೆ ಸುಮಾರು 60 ದೂರುಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಏರಿಯೇಟರ್‌ಗಳ ಅಳವಡಿಕೆ, ತೋಟಗಾರಿಕೆ ಮತ್ತು ಶುಚಿಗೊಳಿಸುವಿಕೆಗಾಗಿ ಕುಡಿಯುವ ನೀರಿನ ಬಳಕೆಯನ್ನು ತಡೆಗಟ್ಟುವುದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಜನರು ನಮ್ಮ ಗುರಿಯನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಮಾಲ್‌ಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ 60% ರಷ್ಟು ಟ್ಯಾಪ್‌ಗಳು ಈಗ ಏರಿಯೇಟರ್ ಅನ್ನು ಹಾಕಿವೆ. ಬೇರೆ ಸಂಸ್ಥೆಗಳು ಕೂಡ ಅದನ್ನು ಮಾಡುತ್ತಿವೆ. ಬಹುತೇಕ ನಿರ್ಮಾಣ ಕಂಪನಿಗಳು ಈಗ ಸಂಸ್ಕರಿಸಿದ ನೀರನ್ನೇ ಬಳಸುತ್ತಿವೆ. ಸಂಸ್ಕರಿಸಿದ ನೀರಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.

When will Cauvery Stage V project will commissioned

ಕಾವೇರಿ ಹಂತ 5 ಯೋಜನೆ

ಬಿಡಬ್ಲ್ಯೂಎಸ್‌ಎಸ್‌ಬಿಯ ಕ್ರಮಗಳ ಹೊರತಾಗಿಯೂ, ಬೆಂಗಳೂರಿನಲ್ಲಿ ಸುಮಾರು 1,200 MLD ಸಂಸ್ಕರಿಸಿದ ನೀರು ಉತ್ಪಾದನೆಯಾಗುತ್ತಿದೆ. ಅದು ವ್ಯರ್ಥವಾಗುತ್ತಿದೆ. ಶುದ್ಧೀಕರಿಸಿದ ನೀರನ್ನು ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗಾಗಿ ಬಳಸುವುದನ್ನು ಉತ್ತೇಜಿಸುತ್ತಿದ್ದೇವೆ. ಕಳೆದ ತಿಂಗಳಿನಿಂದ ಬೇಡಿಕೆಯು ತೀವ್ರವಾಗಿದೆ.

ಕಾವೇರಿ ಐದನೇ ಹಂತದ ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ರಾಮ್ ಪ್ರಸಾತ್ ಮನೋಹರ್, "ನಾವು ಯೋಜನೆಯನ್ನು ತ್ವರಿತಗೊಳಿಸಿದ್ದೇವೆ. ಮೇ ಅಂತ್ಯದೊಳಗೆ ಅದನ್ನು ಪೂರ್ಣಗೊಳಿಸುವ ವಿಶ್ವಾಸವಿದೆ. ಕೊನೆಯ ಮೈಲಿ ಸಂಪರ್ಕದಲ್ಲಿ ಕೆಲವು ಅಡಚಣೆಗಳಿವೆ. ಈಗ ಅವುಗಳನ್ನು ಪರಿಹರಿಸಿದ್ದೇವೆ. ಮೇ ಅಂತ್ಯದ ವೇಳೆಗೆ, ನಾವು ಯೋಜನೆಯನ್ನು ಭಾಗಶಃ ಕಾರ್ಯಗತಗೊಳಿಸುತ್ತೇವೆ. ಉಳಿದ ಪ್ರದೇಶಗಳನ್ನು ನಾವು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ" ಎಂದು ಹೇಳಿದ್ದಾರೆ.

ಇನ್ನು, ತೀರ್ಪಿನ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಹಣಕಾಸು ತಂಡ ಮತ್ತು ಕಾನೂನು ತಂಡವನ್ನು ಸಂಪರ್ಕಿಸುತ್ತೇವೆ. ನ್ಯಾಯಾಲಯ ಮತ್ತು ಅದರ ಆದೇಶವನ್ನು ಗೌರವಿಸುವಾಗ, ಮೇಲ್ಮನವಿ ಸಲ್ಲಿಸಲು ನಮಗೆ ಇನ್ನೂ ಅವಕಾಶವಿದೆ. ನಮ್ಮ ತಂಡದೊಂದಿಗಿನ ಚರ್ಚೆಯ ಆಧಾರದ ಮೇಲೆ ಮುಂದಿನ ನಿರ್ಧರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಬೆಂಗಳೂರು ನಗರದಲ್ಲಿ 110 ಹಳ್ಳಿಗಳ ನಿವಾಸಿಗಳು ಕಾವೇರಿ ನೀರಿಗಾಗಿ ಕಾಯುತ್ತಿದ್ದಾರೆ. 2017 ರಲ್ಲಿ ಕಾವೇರಿ ಹಂತ 5 ಯೋಜನೆಯನ್ನು ಯೋಜಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+