ಎಫ್ ಬಿ-ವಾಟ್ಸಪ್ ಖರೀದಿ ಹಿಂದಿರುವ ಉದ್ದೇಶವೇನು?

ಬೆಂಗಳೂರು, ಫೆ.20: #Whatsapp ಎಂಬುದು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಸಕತ್ ಟ್ರೆಂಡಿಂಗ್ಆಗುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ವಾಟ್ಸಪ್ ಅನ್ನು 16 ಬಿಲಿಯನ್ ಡಾಲರ್ ನೀಡಿ ಫೇಸ್ ಬುಕ್ ಖರೀದಿಸಿದೆ ಎಂಬುದಷ್ಟೇ ಸುದ್ದಿ. ಆದರೆ, ಇದರಿಂದ ಫೇಸ್ ಬುಕ್ ಗೇನು ಲಾಭ? ಅದರಲ್ಲೂ ಫೇಸ್ ಬುಕ್ ಹುದ್ದೆ ವಂಚಿತ ಬ್ರಿಯಾನ್ ಅಕ್ಟಾನ್ ಕಂಪನಿ ಖರೀದಿಸಿದ್ದು ಏಕೆ? ಎಂಬ ಪ್ರಶ್ನೆಗಳು ಎದ್ದಿವೆ.

ಒಮ್ಮೆ ಫೇಸ್ ಬುಕ್ ಬಳಿ ಕೆಲಸ ಕೇಳಿಕೊಂಡು ಹೋಗಿ ಕೆಲಸ ಸಿಗದೇ ಆಚೆ ಹೋಗಿದ್ದ ಬ್ರಿಯಾನ್ ಅಕ್ಟಾನ್ ಅನ್ನುವ ಯುವಕ ಕೊನೆಗೆ WhatsApp ಅನ್ನುವ ಮೆಸೆಂಜರ್ ಕಂಡು ಹಿಡಿದ. ಈಗ ಆ ಕಂಪನಿಯನ್ನು ಫೇಸ್ ಬುಕ್ 16 ಬಿಲಿಯನ್ ಡಾಲರ್ ಕೊಟ್ಟು ಖರೀದಿಸಿದೆ ! ಬ್ರಿಯಾನ್ ಛಲಕ್ಕೆ ತಲೆ ಬಾಗಬೇಕು ಅನೇಕರು ಬರೆದಿದ್ದಾರೆ. ಫೇಸ್ ಬುಕ್ ಸ್ಥಾಪಕ ಮಾರ್ಕ್ ಝಕರ್ ಬರ್ಗ್ ಘೋಷಿಸಿದ್ದು ಹೀಗೆ:

ಇನ್ನು ಕೆಲವರು ಫೇಸ್ ಬುಕ್ ಸಂಸ್ಥೆ ಮಾರ್ಕ್ ಗೆ ಎಲ್ಲೋ ತಲೆ ಕೆಟ್ಟಿರಬೇಕು. ವಾಟ್ಸಪ್ ಬೇಕಿದ್ದಾರೆ ಸುಮ್ಮನೆ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಿತ್ತು ಅದರ ಬದಲು 12 ಬಿಲಿಯನ್ ಡಾಲರ್ ಷೇರು, 4 ಬಿಲಿಯನ್ ಡಾಲರ್ ನಗದು, ಇದರ ಜತೆಗೆ 3 ಬಿಲಿಯನ್ ಡಾಲರ್ ನಿರ್ಬಂಧಿತ ಷೇರು ನೀಡಿ ಕೊಳ್ಳುವುದು ಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ.

ವಿಶ್ವದಲ್ಲಿ 45 ಕೋಟಿಗೂ ಹೆಚ್ಚು ಜನರು ವಾಟ್ಸಪ್ ಸೇವೆ ಬಳಸುತ್ತಿದ್ದಾರೆ. ಮೊಬೈಲ್ ಇಂಟರ್ನೆಟ್ ಮೆಸೇಜಿಂಗ್ ಸರ್ವಿಸ್ ಕ್ಷೇತ್ರದಲ್ಲಿ ವಾಟ್ಸಪ್ ಅಗ್ರಗಣ್ಯ ಸಂಸ್ಥೆ ಎನಿಸಿದೆ. ಈಗ ಮೊಬೈಲ್ ಮೆಸೇಜಿಂಗ್ ಮೇಲೆ ಕಣ್ಣಿಟ್ಟಿರುವ ಫೇಸ್ ಬುಕ್ ಈ ಖರೀದಿಯಿಂದ ಆಗುವ ಲಾಭ ಏನು? [ಮಾಹಿತಿ ಕೃಪೆ: ಮಹೇಶ್.ಕಾಂ] ಮುಂದೆ ಓದಿ..

ವಾಟ್ಸಪ್, ಫೇಸ್ ಬುಕ್, ಟ್ವಿಟ್ಟರ್ ಮೌಲ್ಯಗಳು

ವಾಟ್ಸಪ್, ಫೇಸ್ ಬುಕ್, ಟ್ವಿಟ್ಟರ್ ಮೌಲ್ಯಗಳು

* 2009ರಲ್ಲಿ ಉಕ್ರೇನಿನಿಂದ ವಲಸೆ ಬಂದ ಕಾಲೇಜು ತ್ಯಜಿಸಿದ ಜಾನ್ ಕೌಮ್ ಹಾಗೂ ಸ್ಟಾನ್ ಫೋರ್ಡ್ ಅಲುಮ್ನಿ ಬ್ರಿಯಾನ್ ಆಕ್ಷನ್ ವಾಟ್ಸಪ್ ಸ್ಥಾಪಕರು. ಇಬ್ಬರು ಯಾಹೂ ಸಂಸ್ಥೆಯಲ್ಲಿ ಸಹದ್ಯೋಗಿಗಳಾಗಿದ್ದರು.
* ಸಂಸ್ಥೆಗಳ ಮೌಲ್ಯ: ವಾಟ್ಸಪ್ ಮೌಲ್ಯ 19 ಬಿಲಿಯನ್ ಡಾಲರ್, ಟ್ವಿಟ್ಟರ್ 30 ಬಿಲಿಯನ್ ಡಾಲರ್, ಫೇಸ್ ಬುಕ್ 170 ಬಿಲಿಯನ್ ಡಾಲರ್
* ಸಕ್ರಿಯ ಬಳಕೆದಾರರು: ವಾಟ್ಸಪ್ 450 ಮಿಲಿಯನ್(ಶೇ 70 ಸಕ್ರಿಯ ದಿನಪ್ರತಿ ಬಳಕೆ), ಟ್ವಿಟ್ಟರ್ 250 ಮಿಲಿಯನ್, ಫೇಸ್ ಬುಕ್ 1.2 ಬಿಲಿಯನ್
* ಉದ್ಯೋಗಿಗಳು: ವಾಟ್ಸಪ್ 55(32 ಇಂಜಿನಿಯರ್ಸ್), ಟ್ವಿಟ್ಟರ್ 2,300, ಫೇಸ್ ಬುಕ್ 6,300 +
* ವಾಟ್ಸಪ್ ಟ್ರಾಫಿಕ್ : 50 ಬಿಲಿಯನ್ ಸಂದೇಶ ಪ್ರತಿ ದಿನ, 600 ಮಿಲಿಯನ್ ಚಿತ್ರಗಳು, 100 ಮಿಲಿಯನ್ ವಿಡಿಯೋ ಪ್ರತಿದಿನ
* ವಾಟ್ಸಪ್ ಪ್ರತಿದಿನದ sign ups: 1 ಮಿಲಿಯನ್
* ಸಂಸ್ಥೆಗಳ per user cost ಖರೀದಿ: ಪ್ರತಿ ವಾಟ್ಸಪ್ ಬಳಕೆದಾರರು 42 ಡಾಲರ್, ಪ್ರತಿ ಇನ್ಸ್ಟಾ ಗ್ರಾಮ್ ಬಳಕೆದಾರರು 33 ಡಾಲರ್, viber 3 ಡಾಲರ್

ವಾಟ್ಸಪ್ ಫೇಸ್ ಬುಕ್ ನ ಒಂದು ಆಪ್ ಆಗಲಿದೆಯೇ?

ವಾಟ್ಸಪ್ ಫೇಸ್ ಬುಕ್ ನ ಒಂದು ಆಪ್ ಆಗಲಿದೆಯೇ?

ಬಳಕೆದಾರರಿಗೆ ಒಂದು ವರ್ಷ ತನಕ ಉಚಿತವಾಗಿ ಸಿಗುತ್ತಿರುವ ವಾಟ್ಸಪ್ ಇನ್ಮುಂದೆ ಫೇಸ್ ಬುಕ್ ಖರೀದಿ ನಂತರ ಏನಾಗಲಿದೆ? ಗೊತ್ತಿಲ್ಲ.

ಆದರೆ, ಫೇಸ್ ಬುಕ್ ಟ್ರಿಕ್ ಇರುವುದು ಇಲ್ಲೇ 16 ಬಿಲಿಯನ್ ಡಾಲರ್ ಖರ್ಚು ಮಾಡಿ ಜಾಗತಿಕವಾಗಿ ಅತಿ ದೊಡ್ಡ ಎಸ್ ಎಂಎಸ್ ಆದಾಯ ಸುಮಾರು 100 ಬಿಲಿಯನ್ ಡಾಲರ್ ಪ್ರತಿ ವರ್ಷಕ್ಕೆ ಗಳಿಸುವ ಹುನ್ನಾರ ಫೇಸ್ ಬುಕ್ ಸಂಸ್ಥೆಯದ್ದಾಗಿದೆ. ವಾಟ್ಸಪ್ ಖರೀದಿಯೊಂದಿಗೆ ಫೇಸ್ ಬುಕ್ ಗೆ ಅತಿದೊಡ್ಡ ಜನಸಮೂಹ(user base) ಸಿಗಲಿದೆ.

ಬ್ರಿಯಾನ್ ಹಾಗೂ ಜಾನ್ ಕೌಮ್ ಕನಸಿನ ಉತ್ಪನ್ನ

ಬ್ರಿಯಾನ್ ಹಾಗೂ ಜಾನ್ ಕೌಮ್ ಕನಸಿನ ಉತ್ಪನ್ನ

ಬ್ರಿಯಾನ್ ಹಾಗೂ ಜಾನ್ ಕೌಮ್ ಕನಸಿನ ಉತ್ಪನ್ನವಾದ ವಾಟ್ಸಪ್ ಮಾರಾಟವಾದ ನಂತರ ಇಬ್ಬರ ನಡೆಯೇನು? ಎಂಬುದು ಕುತೂಹಲಕಾರಿಯಾಗಿದೆ.

ಬ್ರಿಯಾನ್ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲು 2009ರಲ್ಲಿ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಿರಾಕರಿಸಿತ್ತು ಎಂಬುದು ವಿಶೇಷ. ಇದಾದ ಕೆಲವೇ ತಿಂಗಳಲ್ಲಿ ವಾಟ್ಸಪ್ ಎಂಬ ಸರಳ ಸಂದೇಶ ವಾಹಕವನ್ನು ಜಾನ್ ಜತೆ ಸೇರಿ ಬ್ರಿಯಾನ್ ಜಗತ್ತಿಗೆ ಪರಿಚಯಿಸಿದರು. ಉಚಿತವಾಗಿ ಸಂದೇಶ, ವಿಡಿಯೋ, ಆಡಿಯೋ ಹಂಚಿಕೆಗೆ ಇದು ವೇದಿಕೆಯಾಗಿ ಜನ ಮೆಚ್ಚುಗೆ ಪಡೆಯಿತು.
ಚುನಾವಣೆ ಸಂದರ್ಭ ಭಾರತದಲ್ಲಿ ವಾಟ್ಸಪ್

ಚುನಾವಣೆ ಸಂದರ್ಭ ಭಾರತದಲ್ಲಿ ವಾಟ್ಸಪ್

ಕಳೆದ ಡಿಸೆಂಬರ್ 2013ರ ಎಣಿಕೆಯಂತೆ ಭಾರತದಲ್ಲಿ ಸುಮಾರು 30 ಮಿಲಿಯನ್ ಸಕ್ರಿಯ ಬಳಕೆದಾರರು ಇದ್ದಾರೆ ಎಂದು ವಾಟ್ಸಪ್ ವ್ಯವಹಾರಿಕ ಕೇಂದ್ರದ ಮುಖ್ಯಸ್ಥ ನೀರಜ್ ಅರೋರಾ ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಾಟ್ಸಪ್ ಭಾರತದಲ್ಲಿ ಸದ್ದು ಮಾಡಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಫೇಸ್ ಬುಕ್, ಟ್ವಿಟ್ಟರ್ ನಂತೆ ವಾಟ್ಸಪ್ ಕೂಡಾ ಬಳಸುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ನೇರವಾಗಿ ಮತದಾರರಿಗೆ ಸಂದೇಶ ಕಳಿಸಲು ಬಳಕೆ ಮಾಡಲು ನಿರ್ಧರಿಸಿದ್ದಾರೆ.

ಫೇಸ್ ಬುಕ್ ಮಾರ್ಕ್ ಇದೊಂದು ಉಳಿದಿದೆ ನೋಡು

ಫೇಸ್ ಬುಕ್ ಮಾರ್ಕ್ ಇದೊಂದು ಅಪ್ಲಿಕೇಷನ್ ಉಳಿದಿದೆ ನೋಡು ಅದನ್ನು ಖರೀದಿಸು

ಟೈಮ್ ಪಾಸ್ ಅಡ್ಡಾಗಳ ಮೇಲೆ ಮಾರ್ಕ್ ಕಣ್ಣು

ಟೈಮ್ ಪಾಸ್ ಅಡ್ಡಾಗಳ ಮೇಲೆ ಮಾರ್ಕ್ ಕಣ್ಣು ಹಾಕುತ್ತ್ತಿದ್ದು, ಸಂಸತ್ತು ಕೂಡಾ ಅಪಾಯದಲ್ಲಿದೆ.

ಎಚ್ಚರಾ!ಕನಸುಗಳು ಇಲ್ಲಿ ಮಾರಾಟಕ್ಕಿವೆ

ಎಚ್ಚರಾ!ಕನಸುಗಳು ಇಲ್ಲಿ ಮಾರಾಟಕ್ಕಿವೆ ಹಣದ ಮುಂದೆ ಎಲ್ಲವೂ ಗೌಣ

ಈ ಖರೀದಿಯಿಂದ ನನ್ನ ಖಾಸಗಿತನ ಹಾಳು

ಈ ಖರೀದಿಯಿಂದ ನನ್ನ ಖಾಸಗಿತನ ಹಾಳು

ಈ ಖರೀದಿಯಿಂದ ನನ್ನ ಖಾಸಗಿತನ ಹಾಳು, ಫೇಸ್ ಬುಕ್ ನಂಬಲಾಗುವುದಿಲ್ಲ. ವಾಟ್ಸಪ್ ಖಾತೆ ಗೋತಾ!

ಫೇಸ್ ಬುಕ್ ಸುರಕ್ಷತೆಗೆ ಹೆಚ್ಚು ಗಮನ ಕೊಡಲಿ

ಫೇಸ್ ಬುಕ್ ಸುರಕ್ಷತೆಗೆ ಹೆಚ್ಚು ಗಮನ ಕೊಡಲಿ ಇಲ್ಲದಿದ್ದರೆ ವಾಟ್ಸಪ್ ಬಳಕೆದಾರರು ಮಾಯವಾಗುತ್ತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+