ಚೆನ್ನೈ ಟ್ರೆಂಡ್ ಫಾಲೋ ಮಾಡ್ತಿದ್ಯಾ ಬೆಂಗಳೂರು!
ಬೆಂಗಳೂರು ಅಂದ್ರೆ ಸ್ವರ್ಗ. ಬೆಂಗಳೂರಿನ ವೆದರ್ ಇಲ್ಲಿನ ಸೌಲಭ್ಯಕ್ಕೆ ಫಿದಾ ಆಗದೆ ಇರುವವರು ಇಲ್ಲ. ಆದರೆ, ಸ್ವರ್ಗದಂತಿರುವ ಬೆಂಗಳೂರು ಮಳೆ ಬಂದಾಗ ಮಾತ್ರ ನರಕ ಸದೃಶ್ಯವಾಗುತ್ತದೆ. ಇಂದಿಗೂ ಬೆಂಗಳೂರಲ್ಲಿ ಮಳೆ ಬಂದರೆ, ಸಾಕಾಪ್ಪ ಸಾಕು ಅಂತ ಆಗೋದು ತಪ್ಪಿಲ್ಲ. ಅದೇ ತರ ದಕ್ಷಿಣ ಭಾರತದಲ್ಲಿ ಬೆಂಗಳೂರು ಫೇಮಸ್ ಸಿಟಿ, ಚೆನ್ನೈ ಸಹ ತನ್ನದೇ ಕಾರಣಕ್ಕೆ ಫೇಮಸ್ ಆಗಿದೆ. ಇದೀಗ ಚೆನ್ನೈನ ಟ್ರೆಂಡ್‌ವೊಂದನ್ನು ಬೆಂಗಳೂರು ಫಾಲೋ ಮಾಡ್ತಿದೆ.
ಬೆಂಗಳೂರು ಸಿಲಿಕಾನ್ ಸಿಟಿ ದಕ್ಷಿಣ ಭಾರತದಲ್ಲಿ ಯಾವುದೇ ಟ್ರೆಂಡ್ಸ್ ಶುರುವಾದರೂ ಅದು ಬೆಂಗಳೂರಿನಿಂದಲೇ ಎನ್ನುವಷ್ಟು ಫೇಮಸ್ ಆಗಿದೆ. ಆದರೆ, ಈಗ ಬೆಂಗಳೂರು ಮಳೆ ಅನಾಹುತ ಜೋರಾಗಿದ್ದು, ಚೆನ್ನೈ ಮಂದಿ ಮಾಡಿದ ಟ್ರೆಂಡ್‌ವೊಂದನ್ನು ಫಾಲೋ ಮಾಡ್ತಿದೆ. ಆದರೆ, ಈ ಟ್ರೆಂಡ್ ಶುರುವಾಗಿದ್ದು ಮಳೆಯ ಕಾರಣಕ್ಕೆ. ಚೆನ್ನೈನ ಟ್ರೆಂಡ್‌ಗೂ ಬೆಂಗಳೂರಿನ ಟ್ರೆಂಡ್‌ಗೂ ವ್ಯತ್ಯಾಸ ಇದೆಯಾದ್ರೂ, ಮ್ಯಾಟರ್ ಮಾತ್ರ ಒಂದೇ. ಎರಡು ಸಿಟಿಗಳಲ್ಲಿ ಟ್ರೆಂಡ್ ಆಗಿರೋದು ಏನು. ಯಾವ ಕಾರಣಕ್ಕೆ ಜನ ಫಾಲೋ ಮಾಡ್ತಿದ್ದಾರೆ ಅನ್ನೋದು ಇಲ್ಲಿದೆ ನೋಡಿ.

ಬೆಂಗಳೂರು ಭಾರತದಲ್ಲಿ ಮಾತ್ರವಲ್ಲ. ದೇಶದಲ್ಲೇ ಫೇಮಸ್ ಸಿಟಿಗಳಲ್ಲಿ ಒಂದು. ಇಲ್ಲಿ ಯಾವುದೇ ವಿಷಯ ಟ್ರೆಂಡ್ ಆದರೂ ಅದು ದೇಶದಾದ್ಯಂತ ಸುದ್ದಿಯಾಗುತ್ತೆ. ಬೆಂಗಳೂರಲ್ಲಿ ಸಮಸ್ಯೆ ಆದರೂ ಸಹ ಅಷ್ಟೇ ಅದೂ ಕೂಡ ಫುಲ್ ಟ್ರೆಂಡ್ ಸೃಷ್ಟಿ ಮಾಡುತ್ತೆ. ಬುಧವಾರವೂ ಇದೇ ಆಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೇಲೆ ಕಾರು ನಿಲ್ಲಿಸಿರುವ ಐಟಿ ಜನ ಸರಸರನೆ ನಡೆದು ಹೋಗಿದ್ದಾರೆ. ಇದೇ ತರ ಒಂದು ವಾರದ ಹಿಂದಷ್ಟೇ ಚೆನ್ನೈನಲ್ಲೂ ಫ್ಲೈಓವರ್ ಮೇಲೆ ಕಾರು ನಿಲ್ಲಿಸುವುದು ಟ್ರೆಂಡ್ ಆಗಿತ್ತು.
ಬೆಂಗಳೂರಲ್ಲಿ ಧಾರಾಕಾರ ಮಳೆ ಆಗ್ತಿದೆ. ಇನ್ನೊಂದು ವಾರಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಈ ನಡುವೆ ಚೆನ್ನೈನಲ್ಲೂ ಧಾರಾಕಾರ ಮಳೆಯಾಗಿತ್ತು. ಚೆನ್ನೈನಲ್ಲಿ ಧಾರಾಕಾರ ಮಳೆಯಾದಾಗ ಫ್ಲೈಓವರ್‌ನ ಎರಡೂ ಬದಿಗಳಲ್ಲಿ ಕಾರ್‌ಗಳ ಮಾಲೀಕರು ಕಾರು ನಿಲ್ಲಿಸಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿತ್ತು.
ಚೆನ್ನೈನಲ್ಲಿ ಮಳೆ ಬಂದರೆ ಮೊದಲು ಕಾರುಗಳಿಗೆ ಹಾನಿಯಾಗುತ್ತೆ. ಮಳೆ ನೀರಲ್ಲಿ ಕಾರು ಮುಳುಗಿ ಕಾರುಗಳಿಗೆ ಹಾನಿಯಾಗುತ್ತಿದ್ದವು. ಅದನ್ನು ತಪ್ಪಿಸುವ ಉದ್ದೇಶದಿಂದ ಫ್ಲೈಓವರ್‌ಗಳ ಲೆಫ್ಟ್ ಹಾಗೂ ರೈಟ್‌ಸೈಡ್‌ನಲ್ಲಿ ಕಾರು ನಿಲ್ಲಿಸಿದ್ದ ವಾಹನ ಸವಾರರು ಬೊಂಬಾಟ್ ಪ್ಲಾನ್ ಮಾಡಿದ್ರು. ಇದೀಗ ಬುಧವಾರ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನ ಮೇಲೆ ವಾಹನ ಸವಾರರು ಕಾರುಗಳನ್ನು ಬಿಟ್ಟು ಹೋಗಿದ್ದಾರೆ.
ಬೆಂಗಳೂರಿನ ಜನ ಮಾಡಿರುವುದು ಬೇರೆ ಕಾರಣಕ್ಕೆ. ಬೆಂಗಳೂರಲ್ಲಿ ನೆನ್ನೆ ಸಂಜೆ ಸಾಕಷ್ಟು ಟ್ರಾಫಿಕ್ ಜಾಮ್ ಇತ್ತು. ಆ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಜನ ಹಿಂಗೆ ಮಾಡಿದ್ದಾರೆ. ಎರಡೂ ಟ್ರೆಂಡ್‌ಗೂ ವ್ಯತ್ಯಾಸವಿದೆಯಾದರೂ, ಎರಡೂ ನಗರಗಳಲ್ಲಿ ಫ್ಲೈಓವರ್‌ನ ಮೇಲೆ ಕಾರು ಬಿಟ್ಟು ಹೋಗುವುದು ಮಾತ್ರ ಕಾಮನ್ ಟ್ರೆಂಡ್ ಆಗಿದೆ.












Click it and Unblock the Notifications