ಇನ್‌ಸ್ಟಾದಲ್ಲಿ ಬಂದೇ ಬಿಡ್ತು ದರ್ಶನ್ ವೈಯುಕ್ತಿಕ ಸಂದೇಶ... ಏನದು
ನಟ ದರ್ಶನ್ ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅಂದರ್ ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್, ದಿನವೂ ಯಾತನೆ ಪಡುತ್ತಿದ್ದಾರೆ. ಐಶಾರಮಿ ಜೀವನವನ್ನು ನಡೆಸಿದ್ದ ಸ್ಟಾರ್ ನಟ ಸಾಮಾನ್ಯ ಜೀವನ ಶೈಲಿಯನ್ನು ಜೀವನವನ್ನು ನಡೆಸುತ್ತಿದ್ದಾರೆ. ನಟ ಎಂದ ಮಾತ್ರಕ್ಕೆ ಇವರಿಗೆ ಯಾವುದೇ ರೀತಿಯ ಹೆಚ್ಚಿನ ಸೌಲಭ್ಯಗಳನ್ನು ಜೈಲಿನಲ್ಲಿ ನೀಡಲಾಗಿಲ್ಲ ಎಂದು ತಿಳಿದು ಬಂದಿದೆ.
ದರ್ಶನ್ ಜೈಲಿಗೆ ಹೋದಾಗ, ಅವರ ಪತ್ನಿ ಹಾಗೂ ಅವರ ಮಗ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಭೇಟಿ ಆಗಿ ಬಂದಿದ್ದಾರೆ. ಅಲ್ಲದೆ ಇದೇ ವೇಳೆ ನಟ ದರ್ಶನ್ ತಮ್ಮ ಮಗನನ್ನು ಅಪ್ಪಿ ಕಣ್ಣೀರು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆನ್ನಲ್ಲೆ ದರ್ಶನ್ ಅಭಿಮಾನಿಗಳು ತಮಗೆ ಡಿ ಬಾಸ್ ಏನು ಸಂದೇಶ ಕಳಿಸಿಯೇ ಇಲ್ವಾ ಎಂಬ ಚಡಪಡಿಕೆ ಇತ್ತು. ಈಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

ದರ್ಶನ್ ಅವರ ಪತ್ನಿ ತಮ್ಮ ಇನ್‌ಸ್ಟಾಗ್ರಾಮನಲ್ಲಿ ಅಭಿಮಾನಿಗಳಿಗೆ ದರ್ಶನ್ ಸಂದೇಶವನ್ನು ರವಾನಿಸಿದ್ದಾರೆ. ಈ ಸಂದೇಶದಿಂದ ನಿಜಕ್ಕೂ ದರ್ಶನ್ ಅಭಿಮಾನಿಗಳಿಗೆ ಕೊಂಚ ರಿಲೀಫ್ ಸಿಕ್ಕಿರುತ್ತದೆ. ದರ್ಶನ್ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ "ಸೆಲೆಬ್ರಿಟಿಗಳನ್ನು" ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.
ನನಗೆ, ನಿಮಗೆ, ನಮ್ಮೆಲ್ಲರಿಗೆ ಇದೊಂದು ಪರೀಕ್ಷೆಯ ಸಮಯ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ ಎಂಬ ವಿಶ್ವಸವಿದೆ ಎಂದು ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications