ಬೆಂಗಳೂರು ಜನರಿಗೆ ಬಿಬಿಎಂಪಿಯಿಂದ ಬಿಗ್ ಆಫರ್, ಏನದು
ಬೆಂಗಳೂರಿನ ಜನರಿಗೆ ಬಿಬಿಎಂಪಿ ಹೊಸ ಆಫರ್ ಕೊಟ್ಟಿದೆ. ಈ ಆಫರ್ ನೋಡಿದರೆ ನಿಮಗೂ ಖುಷಿಯಾಗಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಹಿಂದೆಯೂ ಇಂತಹವೊಂದು ಆಫರ್ ನೀಡಿತ್ತು. ಇದೀಗ ಮತ್ತೆ ಆ ಆಫರ್ ರಿಪೀಟ್ ಮಾಡಿದೆ ಅದೇನು ಎನ್ನುವ ವಿವರ ಇಲ್ಲಿದೆ.
ಬಿಬಿಎಂಪಿಯು ಬೆಂಗಳೂರಲ್ಲಿ ಪ್ರಮುಖ ಪಾರ್ಕ್‌ಗಳು ಹಾಗೂ ವಿವಿಧ ಜಾಗಗಳನ್ನು ದತ್ತು ನೀಡಲು ಮುಂದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1280 ಪಾರ್ಕ್‌ಗಳನ್ನು ಮತ್ತು ವೃತ (ಸರ್ಕಲ್)ಗಳನ್ನು ಸಹ ಪಾಲಿಕೆಯೇ ಅಭಿವೃದ್ಧಿಪಡಿಸಿ ಅದರ ನಿರ್ವಹಣೆಯನ್ನೂ ಸಹ ನೋಡಿಕೊಳ್ಳುತ್ತಿದೆ. ಇದೀಗ ಪಾಲಿಕೆ ವ್ಯಾಪ್ತಿಯಲ್ಲಿ ನಮ್ಮ ಬೆಂಗಳೂರು ನನ್ನ ಕೊಡುಗೆ ಮತ್ತು ಸಿ.ಎಸ್.ಆರ್ ಪಾಲಿಸಿ ಯೋಜನೆಯಡಿಯಲ್ಲಿ ಪಾರ್ಕ್‌ಗಳು, ರಸ್ತೆ ವಿಭಜಕಗಳು (ಡಿವೈಡರ್ಸ್) ಮತ್ತು ಸರ್ಕಲ್‌ಗಳ ದತ್ತು ಪಡೆದುಕೊಳ್ಳುವುದಕ್ಕೆ ಆಹ್ವಾನಿಸಿದೆ.

ಬಿಬಿಎಂಪಿಯ ಈ ಪ್ರದೇಶದಲ್ಲಿ ದತ್ತು ತೆಗೆದುಕೊಳ್ಳಲು ಇಚ್ಛೆ ಪಡುವವರು ಅಥವಾ ಸಂಘ ಸಂಸ್ಥೆಗಳಿಗೆ ಹೊಸ ಆಹ್ವಾನ ನೀಡಿದೆ. ದತ್ತು ಪಡೆದುಕೊಳ್ಳಲು ನೋಂದಾಯಿಸುವ ಅವಕಾಶ ಕಲ್ಪಿಸಲಾಗಿದೆ. ಪಾಲಿಸಿಗಳ ವಿವರವನ್ನು https://www.bbmp.gov.in ವೆಬ್‌ಸೈಟ್ ಮೂಲಕ ಪಡೆಯಬಹುದು ಎಂದು ಬಿಬಿಎಂಪಿ ಹೇಳಿದೆ.
ಸಾರ್ವಜನಿಕರ ಗುಂಪು (Citizens Group) ಮತ್ತು ಸರ್ಕಾರೇತರ ಸಂಸ್ಥೆಗಳು ಪಾಲಿಕೆಯನ್ನು ಸಂಪರ್ಕಿಸಬಹುದು. ಪಾರ್ಕ್‌ಗಳು, ಸರ್ಕಲ್ ಹಾಗೂ ಮೀಡಿಯನ್ಸ್‌ಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ. ಆಸಕ್ತ Community involvement for Park Conservation Policy CIPC-2024 CSR ಅಡಿಯಲ್ಲಿ ಹಾಗೂ ನಮ್ಮ ಬೆಂಗಳೂರು - ನನ್ನ ಕೊಡುಗೆ ಅಡಿಯಲ್ಲಿ ಆಸಕ್ತ ಸಂಸ್ಥೆಗಳಿಗೆ ದತ್ತು ನೀಡುವ ಅವಕಾಶ ಕೊಡಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ 6 ವಿವಿಧ ಸಂಸ್ಥೆಗಳಿಗೆ ಈಗಾಗಲೇ ಉದ್ಯಾನವನಗಳು ಮತ್ತು ಮೀಡಿಯನ್ಸ್ ಗಳಿಗೆ ಸಂಬಧಿಸಿದಂತೆ ದತ್ತು ನೀಡಲಾಗಿದೆ. ಮತ್ತೊಮ್ಮೆ ಆಸಕ್ತ ಸಂಸ್ಥೆಗಳಿಂದ ದತ್ತು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. 15-11-2024 ರ ಸಂಜೆ 5:00ರ ಒಳಗಡೆ, ಉಪ ನಿರ್ದೇಶಕರು ತೋಟಗಾರಿಕೆ ಅವರ ಕಚೇರಿ, ಅನೆಕ್ಸ್-03 ಕಟ್ಟಡ ನೆಲಮಹಡಿ, ಕೊಠಡಿ ಸಂಖ್ಯೆ 09, ಬಿಬಿಎಂಪಿ ಕೇಂದ್ರ ಕಚೇರಿಗೆ ಮನವಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ್ ರವರ ದೂರವಾಣಿ ಸಂಖ್ಯೆ: 9535015189 ಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದೆಂದು ಎಂದು ಬಿಬಿಎಂಪಿ ಹೇಳಿದೆ.
ಬಿಬಿಎಂಪಿಯ ದತ್ತು ಯೋಜನೆ: ಬಿಬಿಎಂಪಿಯ ಈ ದತ್ತು ಯೋಜನೆಯು ಹೊಸ ಪರಿಕಲ್ಪನೆಯನ್ನು ಹೊಂದಿದೆ. ರಾಜ್ಯದಲ್ಲಿ ಈ ಮಾದರಿಯ ದತ್ತು ಯೋಜನೆಯನ್ನು ಪರಿಚಯಿಸಿದ ಪ್ರಮುಖ ಪಾಲಿಕೆ ಬಿಬಿಎಂಪಿಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಈ ಯೋಜನೆಯು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ. ನೀವು ಸಹ ಬಿಬಿಎಂಪಿಯ ಈ ಹೊಸ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.












Click it and Unblock the Notifications