ಬೆಂಗಳೂರು ಎದೆ ನಡುಗಿಸಿದ ಶಬ್ಧ ಸೋನಿಕ್ ಬೂಮ್?

ಬೆಂಗಳೂರು, ಮೇ 20: ಇಂದು ಮಧ್ಯಾಹ್ನ ಬೆಂಗಳೂರಿನ ಕೆಲವು ಕಡೆಗೆ ಕೇಳಿ ಬಂದ ಭಯಾನಕ ಶಬ್ದದಿಂದ ಬೆಂಗಳೂರಿಗರು ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರಿಗೆ ಭೂಕಂಪನವಾಯಿತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ, ಭೂಕಂಪನದ ಬಗ್ಗೆ ಯಾವುದೇ ಕಂಪನಗಳು ದಾಖಲಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‍ಎನ್‍ಡಿಎಂಸಿ) ಸ್ಪಷ್ಟಪಡಿಸಿದೆ. ಇತ್ತ ಬೆಂಗಳೂರು ಪೊಲೀಸ್‌ಗೂ ಜನ ಫೋನ್ ಮಾಡಿ ಭೂಕಂಪನದ ಅನುಭವ ಹಂಚಿಕೊಂಡಿದ್ದಾರೆ.

ಆದರೆ, ಬೆಂಗಳೂರಿನಲ್ಲಿ ಇಂದು ಹೊರಹೊಮ್ಮಿದ ಭಯಾನಕ ಶಬ್ದ ಸೋನಿಕ್ ಭೂಮ್ ಎನ್ನಲಾಗಿದೆ. ಹಾಗಾದರೆ ಸೋನಿಕ್ ಬೂಮ್ ಎಂದರೇನು, ಯಾಕೆ ಅದರಿಂದ ಅಷ್ಟು ಶಬ್ದ ಹೊರ ಹೊಮ್ಮುತ್ತದೆ ಎಂಬ ಬಗ್ಗೆ ಕುತೂಹಲಕರ ಮಾಹಿತಿ ಇಲ್ಲಿದೆ....

ಏನಿದು ಸೋನಿಕ್ ಬೂಮ್?

ಏನಿದು ಸೋನಿಕ್ ಬೂಮ್?

ಸೋನಿಕ್ ಬೂಮ್ ಎಂದರೆ ಗಾಳಿಯ ವೇಗಕ್ಕಿಂತಲೂ ಹೊರಡುವ ಯಾವುದೋ ಒಂದು ದ್ವನಿ ಅಥವಾ ಶಬ್ದದ ಕಂಪನ. ಗಾಳಿಯ ವೇಗವನ್ನೂ ಮೀರಿ ಹೊರ ಹೊಮ್ಮುವ ದ್ವನಿ ಕಂಪನಕ್ಕೆ ಸೋನಿಕ್ ಬೂಮ್ ಎನ್ನಲಾಗುತ್ತದೆ.

ಎಲ್ಲಿ ಬಳಕೆಯಾಗುತ್ತದೆ?

ಸೋನಿಕ್ ಬೂಮ್ ಸೂಪರ್ ಸಾನಿಕ್ ವಿಮಾನಗಳು ಅಂದರೆ ಯುದ್ಧ ವಿಮಾನಗಳಲ್ಲಿ ಬಳಕೆಯಾಗುತ್ತದೆ. ಈ ಸೂಪರ್‌ಸಾನಿಕ್ ವಿಮಾನಗಳು ಕೆಲ ಸಂದರ್ಭಗಳಲ್ಲಿ ಹಾರಾಡುವ ವೇಗ ಸೋನಿಕ್ ಬೂಮ್ ಆಗಿ ಹೊರ ಹೊಮ್ಮುತ್ತದೆ. ಈ ದ್ವನಿ ಕಂಪನ ಅಪಾರವಾಗಿರುತ್ತದೆ. ಒಂದು ರೀತಿ ಭೂಕಂಪನದ ಅನುಭವವನ್ನು ತೆರದಿಡುತ್ತದೆ. ಕೇಳಲು ಅತ್ಯಂತ ಭಯಾನಕವಾಗಿರುತ್ತದೆ.

ಸುಖೋಯ್ ಯುದ್ಧವಿಮಾನದಿಂದ ಆಗಿರುವ ಸೋನಿಕ್ ಬೂಮ್

ಸುಖೋಯ್ ಯುದ್ಧವಿಮಾನದಿಂದ ಆಗಿರುವ ಸೋನಿಕ್ ಬೂಮ್

ಎದೆ ನಡುಗಿಸಿದ ಈ ಶಬ್ಧದ ಮೂಲ ಎಲ್ಲಿಯದ್ದು ಎನ್ನುವುದು ಪತ್ತೆಯಾಗಿಲ್ಲ. ಈ ಬಗ್ಗೆ ಜನ ಸಾಮಾಜಿಕ ಜಾಲತಾಣದಲ್ಲಿ ತಮ್ಮದೆಯಾದ ಅಭಿಪ್ರಾಯಗಳನ್ನು ಹಾಕಿ ಪೋಸ್ಟ್ ಮಾಡುತ್ತಿದ್ದಾರೆ. ಇದು ಸುಖೋಯ್ ಯುದ್ಧವಿಮಾನದಿಂದ ಆಗಿರುವ ಸೋನಿಕ್ ಬೂಮ್ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಕೆಲ ಸುದ್ದಿವಾಹಿನಿಗಳು ವರದಿ ಮಾಡಿವೆ.

ಎಲ್ಲೆಲ್ಲಿ ಶಬ್ದ?

ಎಲ್ಲೆಲ್ಲಿ ಶಬ್ದ?

ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಎಚ್‍ಎಎಲ್, ಇಸ್ರೋ ಲೇಔಟ್, ವಸಂತಪುರ, ಬನಶಂಕರಿ, ಸೇರಿದಂತೆ ಹಲವೆಡೆ ಈ ಶಬ್ಧ ಕೇಳಿಬಂದಿತ್ತು. ಇದು ಭೂಕಂಪನವಲ್ಲ. ಗೌರಿಬಿದನೂರಿನ ಭೂಕಂಪನ ಮಾಪಕ ಕಚೇರಿಯಲ್ಲೂ ಮಾಹಿತಿ ತೆಗೆದುಕೊಂಡಿದ್ದೇವೆ. ಭೂಕಂಪನದ ತೀವೃತೆ ಯಾವುದೂ ದಾಖಲಾಗಿಲ್ಲ. ಭೂಗರ್ಭದ ಧ್ವನಿಯೋ ಅಥವಾ ಯಾವುದು ಎನ್ನುವುದರ ಬಗ್ಗೆ ನಾವು ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‍ಎನ್‍ಡಿಎಂಸಿ) ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+