ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ- ಮೈತ್ರಿ ಸರ್ಕಾರದ ಕಾರ್ಯಗಳನ್ನು ತಾಳೆ ಹಾಕಿದ ಅನರ್ಹ ಶಾಸಕ ನಾರಾಯಣಗೌಡ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 1: ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕಾರ್ಯ ವೈಖರಿಯನ್ನು ಅನರ್ಹ ಶಾಸಕ ನಾರಾಯಣಗೌಡ ತಾಳೆ ಹಾಕಿದ್ದಾರೆ.

ಬಿಜೆಪಿಯವರು ಮಾಡುತ್ತಿರುವ ಕೆಲಸವನ್ನು ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಾಡಿದ್ದರೆ ನಾನು ಅಲ್ಲೇ ಇರುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ಸುಮಲತಾ ಪರ ಪ್ರಚಾರ: ನಟರಿಗೆ ಎಚ್ಚರಿಕೆ ನೀಡಿದ ಕೆ.ಆರ್. ಪೇಟೆ ಶಾಸಕಸುಮಲತಾ ಪರ ಪ್ರಚಾರ: ನಟರಿಗೆ ಎಚ್ಚರಿಕೆ ನೀಡಿದ ಕೆ.ಆರ್. ಪೇಟೆ ಶಾಸಕ

ಒಟ್ಟಿನಲ್ಲಿ ಅನರ್ಹ ಶಾಸಕರು ಹಿಂದಿದ್ದ ಮೈತ್ರಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ. ಬಾಂಬೆಯಲ್ಲಿ ಬಿಜಿನೆಸ್ ಮಾಡ್ತಿದ್ದವನು ಕರ್ಮ ಭೂಮಿ ಋಣ ತೀರಿಸಲು ಬಂದಿದ್ದೇನೆ.

What Disqualified MLA Narayana Gowda Says About BJP Government

ಈ ಸರ್ಕಾರದಲ್ಲಿ ನನ್ನ ಕ್ಷೇತ್ರದ ಬಹಳ ಕೆಲಸ ಆಗುತ್ತಿದೆ. ಈ ಸರ್ಕಾರದಲ್ಲಿ ಆಗುತ್ತಿರುವ ಕೆಲಸ ಶೇ.20 ಕುಮಾರಣ್ಣ ಸರ್ಕಾರದಲ್ಲಿ ಆಗಿದರೆ ನಾನು ಜೆಡಿಎಸ್ ಪಕ್ಷ ಬಿಡುತ್ತಿರಲಿಲ್ಲ ಎಂದು ತಿಳಿಸಿದರು.

ನನ್ನ ಕ್ಷೇತ್ರದವರು ಸಿಎಂ ಆಗಿದ್ದು ಖುಷಿಯಾಗಿದೆ. ನಮ್ಮ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿ ನಡೆಯುತ್ತಿದೆ. ನಮ್ಮ ಬಗ್ಗೆ ಯಾರು ತಪ್ಪಾಗಿ ಮಾತನಾಡಿಲ್ಲ. ಸಣ್ಣಪುಟ್ಟ ಸಮಸ್ಯೆಗಳು ಇರುವುದು ಸಹಜ, ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಇದೇ ವೇಳೆ ನಿಮ್ಮ ಕ್ಷೇತ್ರದಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರದ ಬಗ್ಗೆ ಕೇಳಿದಾಗ, ನನ್ನ ಕ್ಷೇತ್ರಕ್ಕೆ ವಿಜಯೇಂದ್ರ ಬರುವುದಾದರೆ ಸ್ವಾಗತ ಎಂದರು.

English summary
Disqualified MLA Narayanagowda says that What BJP Government Is Doing now, If Coalition Government done These Type of work on that Particular time I will Not Quit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X