ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಕೆ ನೂತನ ಪ್ರಧಾನಿ, ಅಳಿಯ ರಿಷಿ ಸುನಕ್ ಕುರಿತು ನಾರಾಯಣ ಮೂರ್ತಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 25: ಬ್ರಿಟನ್‌ ದೇಶಕ್ಕೆ ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್‌ ಅವರು ಭಾರತದ ಖ್ಯಾತ ಐಟಿ ಸಂಸ್ಥೆ ಇನ್ಫೋಸಿಸ್‌ನ ಮುಖ್ಯಸ್ಥರಾದ ನಾರಾಯಣ ಮೂರ್ತಿ ಅವರು ಅಳಿಯರಾಗಿದ್ದಾರೆ.

ತಮ್ಮ ಅಳಿಯ ರಿಷಿ ಸುನಕ್‌ ಬ್ರಿಟನ್‌ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಅವರು, ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಅವರ ಯಶಸ್ಸನ್ನು ಬಯಸುತ್ತೇವೆ ಎಂದು ತಮ್ಮ ಮೊದಲ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ ರಿಷಿ ಅವರ ಅತ್ತೆ ಸುಧಾ ಮೂರ್ತಿ ಅವರು ಕೂಡ ಅಳಿಯನಿಗೆ ಶುಭಾಶಯ ಕೋರಿದ್ದಾರೆ.

Rishi Sunak : ಬ್ರಿಟನ್‌ ಪ್ರಧಾನಿಯಾದ ಬಳಿಕ ರಿಷಿ ಸುನಕ್ ಹೇಳಿದ್ದೇನು?Rishi Sunak : ಬ್ರಿಟನ್‌ ಪ್ರಧಾನಿಯಾದ ಬಳಿಕ ರಿಷಿ ಸುನಕ್ ಹೇಳಿದ್ದೇನು?

42 ವರ್ಷದ ರಿಷಿ ಸುನಕ್, ಭಾನುವಾರ ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸುವ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. ಈಗ ಭಾರತೀಯ ಮೂಲದ ಬ್ರಿಟನ್‌ನ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಸಿದ್ಧರಾಗಿದ್ದಾರೆ. ರಿಷಿಗೆ ಅಭಿನಂದನೆಗಳು. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಅವರು ಯಶಸ್ಸನ್ನು ಬಯಸುತ್ತೇವೆ. ಯುನೈಟೆಡ್ ಕಿಂಗ್‌ಡಂನ ಜನರಿಗೆ ಅವರು ತಮ್ಮ ಕೈಲಾದಷ್ಟು ಸೇವೆ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ನಾರಾಯಣ ಮೂರ್ತಿ ಹೇಳಿದರು.

What did Narayana Murthy say about the new Prime Minister of UK, son-in-law Rishi Sunak?

ಫಾರ್ಮಸಿಸ್ಟ್‌ ತಾಯಿ ಮತ್ತು ವೈದ್ಯ ತಂದೆಯ ಮಗ ರಿಷಿ ಸುನಕ್ ಇಂಗ್ಲೆಂಡ್‌ನ ಅತ್ಯಂತ ಪ್ರಸಿದ್ಧ ಶಾಲೆಗಳಲ್ಲಿ ಒಂದಾದ ವಿಂಚೆಸ್ಟರ್ ಮತ್ತು ನಂತರ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಪಡೆದರು. ಅವರು ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್‌ನಲ್ಲಿ ಮೂರು ವರ್ಷಗಳನ್ನು ಕಳೆದರು. ನಂತರ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್‌ನಿಂದ ಎಂಬಿಎ ಪಡೆದರು.

What did Narayana Murthy say about the new Prime Minister of UK, son-in-law Rishi Sunak?

ಅಲ್ಲಿ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯನ್ನು ಭೇಟಿಯಾದರು. ಅವರು 2009 ರಲ್ಲಿ ಅಕ್ಷತಾ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಿಷಿ ಸುನಕ್ ಅವರು ಮಂಗಳವಾರ ಈ ವರ್ಷ ಬ್ರಿಟನ್‌ನ ಮೂರನೇ ಪ್ರಧಾನ ಮಂತ್ರಿಯಾಗಿ ನೇಮಿಸಲ್ಪಡುತ್ತಾರೆ. ಕೇವಲ ಏಳು ವಾರಗಳ ನಂತರ ಪ್ರಧಾನಿಯಾಗಿದ್ದ ಲಿಜ್ ಟ್ರಸ್ ಬದಲಿಗೆ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

English summary
Rishi Sunak, who has been elected as the new Prime Minister of Britain, is the son-in-law of Narayan Murthy, the head of India's famous IT company Infosys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X