ಕಾರ್ಡ್ ರೋಡ್ ಮೂಲಕ ಮೈಸೂರು ರಸ್ತೆಗೆ ಹೋಗುವವರೇ ಎಚ್ಚರ!

ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ದೀಪಾಂಜಲಿ ನಗರದ ಮೂಲಕ ಮೈಸೂರು ರಸ್ತೆ ಪ್ರವೇಶಿಸುವ ಕಡೆ ಸಂಚಾರಕ್ಕೆ ಅಡ್ಡಿಯಾಗಿದೆ. ರಂಜಾನ್ ಆಚರಣೆ ಪ್ರಯುಕ್ತ ದೀಪಾಂಜಲಿ ನಗರದ ಬಳಿ ರಸ್ತೆಗೆ ಬ್ಯಾರಿಕೇಡ್ ಗಳನ್ನು ಹಾಕಿ ಎಲ್ಲಾ ವಾಹನಗಳನ್ನು ಆರ್ ಪಿಸಿ ಲೇ ಔಟ

ಬೆಂಗಳೂರು, ಜೂನ್ 26: ರಂಜಾನ್ ಪ್ರಯುಕ್ತ 'ವೆಸ್ಟ್ ಆಫ್ ಕಾರ್ಡ್ ರೋಡ್' ರಸ್ತೆಯು ಮೈಸೂರು ರಸ್ತೆಗೆ ನೇರವಾಗಿ ಸಂಪರ್ಕಿಸುವ ಅನತಿ ದೂರದಲ್ಲಿ ಸ್ತಬ್ಧವಾಗಿದೆ. ಪೂರ್ವವಾಗಿ ಯಾವುದೇ ಸಾರ್ವಜನಿಕ ಪ್ರಕಟಣೆಯನ್ನೂ ನೀಡದೇ ಏಕಾಏಕಿಇಂಥ ನಿರ್ಣಗಳನ್ನು ಕಳುಹಿಸಿದ್ದಕ್ಕೆ

ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಮುಕ್ಕಾಲು ಭಾಗ ಪ್ರಯಾಣಿಸಿದ ನಂತರ ವಿಜಯ ನಗರದ ದಾಟಿ ಇನ್ನೇನು ದೀಪಾಂಜಲಿ ನಗರದ ಮೂಲಕ ಮೈಸೂರು ರಸ್ತೆಗೆ ಸಂಪರ್ಕ ಸಾಧಿಸುವ ಮುನ್ನವೇ ಅಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ, ಅಲ್ಲಿಂದ ಪಕ್ಕದ ಸರ್ವೀಸ್ ರಸ್ತೆಯ ಮೂಲಕ ರೈಲ್ವೇ ಪ್ಯಾರಲೆಲ್ ರಸ್ತೆಗೆ (ಆರ್ ಪಿಸಿ ಲೇಔಟ್ ಮೂಲಕ) ಹೋಗುವಂತೆ ಸೂಚನೆ ನೀಡಲಾಗಿದೆ.

West of Chord road cuts its lead near Deepanjali Nagar due to Ramzan celebrations

ಸ್ವಲ್ಪ ತಾಳಿ. ಇಷ್ಟಕ್ಕೆ ಮುಗಿಯಲಿಲ್ಲ. ಎಲ್ಲಾ ವಾಹನಗಳೂ ಇದೇ ಪ್ಯಾರಲೆಲ್ ರಸ್ತೆ ಮೂಲಕ ಸಾಗುತ್ತಿರುವುದರಿಂದ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗುತ್ತಿದೆ. ಅಲ್ಲಿಂದ ಕೊಂಚ ಮುಂದಕ್ಕೆ ಬಂದರೆ, ಎರಡು ರೈಲ್ವೇ ಅಂಡರ್ ಪಾಸ್ ಸಿಗುತ್ತದಾದರೂ, ಅವೆಲ್ಲವೂ ಸೈಕಲ್ ಹೋಗದಷ್ಟು ಜಾಮ್!

ಚಾಮರಾಜಪೇಟೆ ಕಡೆಗೆ ಬರುವವರು ಹೀಗೆ ಸಂದಿಗೊಂದಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ತೂರಿಕೊಂಡು ಬರಬೇಕಿದೆ. ಆದರೆ, ಯಾವ ಸಂದುಗಳಲ್ಲಿ ತೂರಿದರೂ ಬೈಕುಗಳ, ಕಾರುಗಳಿಂದ ಗಿಜಿಗಿಜಿ.

ಒಂದು ವೇಳೆ ನೀವು ಚಾಮರಾಜ ಪೇಟೆ ಕಡೆಗೋ ಅಥವಾ ಮಾರ್ಕೆಟ್ ಕಡೆಗೋ ಹೋಗುವವರಾಗಿದ್ದರೆ ನೀವು ಅನಿವಾರ್ಯವಾಗಿ ಗೌರಿ ಪಾಳ್ಯ ಕಡೆಗೋ ಅಥವಾ ಕೆಎಚ್ ರಂಗನಾಥ್ ಬಡಾವಣೆ ಕಡೆಗೋ ಬಂದು ಓಲ್ಡ್ ಬಿನ್ನಿ ಮಿಲ್ ರಸ್ತೆಗೆ ಆಗಮಿಸಿ, ಅಲ್ಲಿಂದ ತಿರುವು ಪಡೆದು ಚಾಮರಾಜ ಪೇಟೆಗೆ ಬರಬೇಕು.

ಇಲ್ಲೂ ಒಂದು ಸಮಸ್ಯೆಯಿದೆ. ಆದರೆ, ಈ ಪ್ರಕಾರವಾಗಿ ಚಾಮರಾಜ ಪೇಟೆ ಕಡೆಗೆ ಬರುವವರಿಗೆ ಈದ್ಗಾ ಮೈದಾನದಲ್ಲಿ ಬಳಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಡೈವರ್ಷನ್ ನೀಡಲಾಗಿದೆ. ಆದ್ದರಿಂದ ನೀವು ಸಕಲ ರೀತಿಯಲ್ಲಿ ಸುತ್ತು ಹಾಕಿಕೊಂಡು ಉಮಾ ಥಿಯೇಟರ್ ಬಳಿ ಬರುವಷ್ಟರಲ್ಲಿ ಸಾಕಪ್ಪಾ ಸಾಕು ಎನ್ನುವಂತಾಗಿದೆ.

ನಿಮ್ಮ ಪರಿಸ್ಥಿತಿ ಹೀಗಾಗಬಾರದೆಂದರೆ, ಈ ಕೆಳಗಿನಂತೆ ಮಾಡಿ.

- ವಿಜಯ ನಗರ ಮಾರ್ಗದ ಮೂಲಕ ಮೈಸೂರು ರಸ್ತೆಯನ್ನು ಸೇರಿಕೊಂಡು ರಾಜರಾಜೇಶ್ವರಿ ನಗರ ಅಥವಾ ಮೈಸೂರು ಕಡೆಗೆ ಹೋಗಬಯಸುವವರು ವಿಜಯ ನಗರದ ಮಾರುತಿ ಮಂದಿರ ದಾಟಿದ ನಂತರವೇ ಸಿಗುವ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಆದ ಮೇಲೆ ದೊರೆಯುವ ಬಂಟರ ಭವನದ ಬಲ ತಿರುವಿನ ಸಿಗ್ನಲ್ ನಿಂದ ನೇರವಾಗಿ ಚಂದ್ರಾ ಲೇಔಟ್ ಕಡೆಗೆ ಹೋಗಿ ಬೆಂಗಳೂರು ವಿವಿ ಕಡೆಯಿಂದ ಅಥವಾ ಕೆಂಗೇರಿ ಕಡೆಯಿಂದ ಮೈಸೂರು ರಸ್ತೆಗೆ ಹೋಗುವುದು ಒಳಿತು.

- ಇನ್ನು, ಚಾಮರಾಜಪೇಟೆಗೆ ಬರುವವರು, ಪ್ರಸನ್ನ ಟಾಕೀಸ್ ಬರುವ ಮುನ್ನವೇ ಸೂಕ್ತ ರಸ್ತೆಗಳಲ್ಲಿ ತಿರುವುಗಳನ್ನು ತೆಗೆದುಕೊಂಡು ಚಾಮರಾಜಪೇಟೆ ಅಥವಾ ಮಾರ್ಕೆಟ್ ಗೆ ಹೋಗುವುದೊಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+