ಬೆಂಗಳೂರು ಜನರಿಗೆ ಮತ್ತೊಂದು ಶಾಕ್! ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ
ಬೆಂಗಳೂರು, ಮೇ 8: ರಾಜಧಾನಿ ಬೆಂಗಳೂರಿನ ಜನತೆಗೆ ಮತ್ತೊಂದು ಕಹಿ ಸುದ್ದಿ ಸಿಗುತ್ತಿದೆ. ಕೋವಿಡ್ ನಾಲ್ಕನೇ ಅಲೆಯ ಭೀತಿಯ ನಡುವೆಯು ತೈಲಬೆಲೆ ಗಗನಕಕ್ಕೆರಿದೆ, ಅಡುಗೆ ಎಣ್ಣೆ ಬೆಲೆ ಏರಿಕೆಯಲ್ಲಿ ತನ್ನ ನಾಗಲೋಟ ಮುಂದುವರೆಸಿದೆ, ಗ್ಯಾಸ್ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ವಿದ್ಯುತ್ ಬರೆ ಸಹ ಬಿದ್ದಿದೆ. ಇದರ ನಡುವೆ ಬೆಂಗಳೂರು ಮಹಾ ಜನತೆಗೆ ಬೆಂಗಳೂರು ಜಲಮಂಡಳಿ ಸಹ ನೀರಿನ ದರ ಹೆಚ್ಚಿಸಲು ಮುಂದಾಗಿದೆ.
ಸಿಲಿಕಾನ್ ಸಿಟಿಯ ಜನರು ಕೋವಿಡ್ ನಲ್ಲಿ ಜೀವನವನ್ನು ನಡೆಸುವುದೇ ಕಷ್ಟವೆಂದು ಮನೆಗಳನ್ನು ಖಾಲಿ ಮಾಡಿಕೊಂಡು ತಮ್ಮ ತಮ್ಮ ಹಳ್ಳಿಗಳನ್ನು ಸೇರಿಕೊಂಡಿದ್ದರು. ಕೋವಿಡ್ ಮುಗಿಯಿತು ಜನಜೀವನ ಸಹಜ ಸ್ಥಿತಿಗೆೆ ಬರುತ್ತಿದೆ ಎನ್ನುವಾಗಲೇ ನಾಲ್ಕನೇ ಅಲೆಯ ಭೀತಿ ಕೂಡ ಶುರುವಾಗಿದೆ. ಇವೆಲ್ಲದರ ನಡುವೆ ಅಗತ್ಯವಾಗಿರುವ ವಸ್ತುಗಳ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಜೀವನಾಡಿಯಾಗಿರುವ ನೀರಿನ ಬೆಲೆಯನ್ನು ಏರಿಸಬೇಕೆಂದು ಬಿಡಬ್ಲ್ಯುಎಸ್‌ಎಸ್‌ಬಿ ಸರ್ಕಾರದ ಮುಂದೆ ತನ್ನ ಪ್ರಸ್ತಾವನೆಯನ್ನು ಸಲ್ಲಿಸಿರುವುದು ಬೆಂಗಳೂರು ಜನರಿಗೆ ಶಾಕ್ ನೀಡಿದೆ.

ವಾಣಿಜ್ಯ ಬಳಕೆ ನೀರಿನ ದರವನ್ನು ಶೇ 8% ಹೆಚ್ಚಳ..?
ಗೃಹ ಬಳಕೆ ನೀರಿನ ದರವನ್ನು ಶೇ 3 ರಿಂದ 8ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ತನ್ನ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹಾಗೆಯೇ ವಾಣಿಜ್ಯ ಕಾರಣಕ್ಕೆ ಬಳಸುವ ನೀರಿನ ಬೆಲೆಯನ್ನು 5 ರಿಂದ 8 ರಷ್ಟು ಏರಿಕೆ ಮಾಡಲು ಕೋರಿಕೊಳ್ಳಲಾಗಿದೆ. ಈಗಾಗಲೇ ವಿದ್ಯುತ್ ಬೆಲೆ ಏರಿಕೆಯಾಗಿದ್ದು, ಪ್ರತಿ ಯೂನಿಟ್ ದರಕ್ಕೆ ಅನುಗುಣವಾಗಿ ಜಲಮಮಂಡಳಿ ತನಗೆ ಎಷ್ಟು ಹೊರೆಯಾಗುತ್ತಿದೆ ಎಂಬುದರ ವಿವರ ಸಮೇತ ನೀರಿನ ದರದ ಏರಿಕೆಯ ಪ್ರಸ್ತಾವನೆಯನನ್ನು ಸಲ್ಲಿಸಿದೆ. ಇದರೊಂದಿಗೆ ಕೈಗಾರಿಕಾ ಬಳಕೆ ಹಾಗೂ ಈಜುಕೊಳಗಳ ಬಳಕೆಗಳ ದರದಲ್ಲಿ ಹೆಚ್ಚುವರಿ ದರ ನಿಗದಿಪಡಿಸುವ ಸಾಧ್ಯತೆಗಳಿವೆ.

ಈಗಿರುವ ಗೃಹ ಬಳಕೆಯ ನೀರಿನ ದರ ಎಷ್ಟು..?
* 1,000 Ltr : ₹7 (0 to 8,000 Ltr ವರೆಗೆ)
* 1,000 Ltr : ₹11 (8,001 to 25,000 Ltr ವರೆಗೆ)
*1,000 Ltr : ₹26 (25,001 to 50,000 Ltr ವರೆಗೆ)
*1,000 Ltr : ₹45 (50,000 ಮೇಲ್ಪಟ್ಟಂತೆ Ltrಗೆ)

ಈಗಿರುವ ವಾಣಿಜ್ಯ ಬಳಕೆಯ ನೀರಿನದ ದರ ಎಷ್ಟು..?
*1,000 Ltr : ₹50 (0 to 10,000 Ltr ವರೆಗೆ)
*1,000 Ltr : ₹57 (10,001 to 25,000 Ltr ವರೆಗೆ)
*1,000 Ltr : ₹65 (25,001 to 50,000 Ltr ವರೆಗೆ)
*1,000 Ltr : ₹76 (50,001 to 75,000 Ltr ವರೆಗೆ)
*1,000 Ltr : ₹86 (75,000 ಮೇಲ್ಪಟ್ಟಂತೆ Ltrಗೆ)
ಇದರ ಜೊತಗೆ ಕೈಗಾರಿಕಾ ಬಳಕೆಯ ನೀರಿನದ ದರ : 1,000 Ltrಗೆ 90 ರೂಪಾಯಿಗಿದ್ದು, ಈಜುಕೊಳಕ್ಕೆ ಬಳಕೆಯ ನೀರಿನ ದರ : 1,000 Ltrಗೆ 90ರೂಪಾಯಿ ಇದೆ.

ಕೈಗಾರಿಕಾ ಬಳಕೆ ಮೇಲೆ ಶೇ8 ದರ ಏರಿಕೆಯಾದರೆ?
*ಪ್ರತಿ ಸಾವಿರ ಲೀಟರ್ ಗೆ ₹7 ದರ, ಈ ದರಕ್ಕೆ 5% ಏರಿಕೆಯಾದರೆ ₹7.35 ಆಗಲಿದೆ : 35 ಪೈಸೆ ಹೆಚ್ಚಳ
*ಮೊದಲ ಹಂತದ 8 ಸಾವಿರ ಲೀಟರ್ ಗೆ ₹56, ಇದಕ್ಕೆ 5% ಏರಿಕೆಯಾದರೆ ₹58.80 ಆಗಲಿದೆ : ₹2.80 ಹೆಚ್ಚಳ
*ಕೈಗಾರಿಕೆಗೆ ಪ್ರತಿ ಸಾವಿರ ಲೀಟರ್ ಗೆ ₹90 ದರ, ಈ ದರಕ್ಕೆ 8% ಏರಿಕೆಯಾದರೆ 97.20 ಆಗಲಿದೆ : ₹7.20 ಹೆಚ್ಚಳವಾಗಲಿದೆ.

ದರ ಏರಿಕೆ ಪ್ರಸ್ತಾವನೆ ಬಗ್ಗೆ ಪ್ರಧಾನ ಎಂಜಿನಿಯರ್ ಸ್ಪಷ್ಟನೆ
""ಬೆಂಗಳೂರು ಜಲಮಂಡಳಿ 2013ರಲ್ಲಿ ಕೊನೆಯ ಬಾರಿಗೆ ದರ ಏರಿಕೆ ಮಾಡಿತ್ತು. ಅದಾಗಿ 9 ವರ್ಷಗಳಾಯಿತು. ಇದೀಗ ದರ ಏರಿಸುವ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಸಾವಿರ ಲೀಟರ್ ಗೆ 5% ಹಾಗೂ ಕೈಗಾರಿಕಾ ಬಳಕೆಗೆ 8% ದರ ಏರಿಕೆಗೆ ಪ್ರಸ್ತಾವನೆ ಮಾಡಿದ್ದೇವೆ. ಮುಂದಿನ ವಾರ ಸರ್ಕಾರ ಈ ಬಗ್ಗೆ ತಮ್ಮ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ,'' ಎಂದು ಬೆಂಗಳೂರು ಜಲಮಂಡಳಿ ಮುಖ್ಯ ಎಂಜಿನಿಯರ್ ಬಿ. ಸುರೇಶ್ ಹೇಳಿದರು.
Recommended Video












Click it and Unblock the Notifications