ಚೆಕ್ ಬೌನ್ಸ್ ಕೇಸ್ : ಪೂಜಾ ಗಾಂಧಿ ತಂದೆ ವಿರುದ್ಧ ಅರೆಸ್ಟ್ ವಾರೆಂಟ್

ಬೆಂಗಳೂರು, ಸೆ. 21: ಚೆಕ್‌ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಮ್ ರಾಜಕಾರಣಿ ಪೂಜಾ ಗಾಂಧಿ ಅವರ ತಂದೆ ಪವನ್‌ ಗಾಂಧಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಈ ಹಿಂದೆ ಪೂಜಾ ಗಾಂಧಿ ವಿರುದ್ಧ ಕೂಡಾ ಚೆಕ್ ಬೌನ್ಸ್ ಕೇಸ್ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪವನ್ ಗಾಂಧಿ ವಿರುದ್ಧ ಬೆಂಗಳೂರಿನ 27ನೇ ಎಸಿಎಂಎಂ ಕೋರ್ಟ್ ನಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಗುರುವಾರದಂದು ಪವನ್‌ ಗಾಂಧಿಯನ್ನು ಬಂಧಿಸಿ ಕರೆತರುವಂತೆ ವಾರೆಂಟ್‌ ಜಾರಿಗೊಳಿಸಿದೆ.

Warrant against actress Pooja Gandhi's Father

ಏನಿದು ಪ್ರಕರಣ?: ಆದೀಶ್ವರ್‌ಎಲೆಕ್ಟ್ರಾನಿಕ್‌ ಶೋರೊಂಗೆ ಭೇಟಿ ನೀಡಿದ್ದ ಪವನ್‌, ಉಡುಗೊರೆಯ ವಸ್ತುಗಳನ್ನು ಖರೀದಿಸಿ 8 ಲಕ್ಷ ಮೌಲ್ಯದ ಚೆಕ್‌ನ್ನು ನೀಡಿದ್ದರು. ಆದರೆ ಬ್ಯಾಂಕ್‌ ಅಕೌಂಟ್‌ನಲ್ಲಿ ಹಣವಿಲ್ಲದ ಕಾರಣದಿಂದಾಗಿ ಚೆಕ್‌ ಬೌನ್ಸ್‌ ಆಗಿತ್ತು. ಈ ಬಗ್ಗೆ ಪ್ರಶ್ನಿಸಲು ಆದೀಶ್ವರ್‌ ಶೋರೂಂನ ಸಿಬ್ಬಂದಿ ಪವನ್‌ ಗಾಂಧಿಗೆ ಫೋನ್‌ ಮಾಡಿದ್ದಾರೆ. ಆದರೆ, ಪೂಜಾಗಾಂಧಿ ಮನೆಯವರು ಕರೆ ಸ್ವೀಕರಿಸಿಲ್ಲ.

ಬನಶಂಕರಿಯ ಅಪಾರ್ಟ್‌ಮೆಂಟ್‌ ಬಳಿ ವಿಚಾರಿಸಿದಾಗ, ಪವನ್‌ಗಾಂಧಿ ಮೂರು ತಿಂಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದಾದ ಬಳಿಕ, ಅನಿವಾರ್ಯವಾಗಿ ಶೋರೂಂ ಆಡಳಿತ ಮಂಡಳಿಯು ಕೋರ್ಟ್‌ ಮೊರೆ ಹೋಗಿದೆ.

ಪ್ರಕರಣ ದಾಖಲಿಸಿಕೊಂಡಿದ್ದ ಮಹಾಲಕ್ಷ್ಮಿ ಲೇಔಟ್‌ ಪೊಲೀಸರು ಮೂರು ಬಾರಿ ವಾರೆಂಟ್‌ ಹಿಡಿದು, ಬನಶಂಕರಿಯ ಅಪಾರ್ಟ್ಮೆಂಟ್ ಗೆ ಹೋಗಿ ಬಂದಿದ್ದಾರೆ. ಈಗ ಕೋರ್ಟ್ ಆದೇಶದಂತೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪವನ್ ಗಾಂಧಿ ಅವರು ಸಂಸಾರ ಸಮೇತ ಮುಂಬೈಗೆ ಶಿಫ್ಟ್ ಆಗಿರುವ ಸಾಧ್ಯತೆ ಕಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+