ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಕ್ಫ್ ಆಸ್ತಿ ವಿವಾದ ಸರ್ಕಾರಕ್ಕೆ ಹೈಕೋರ್ಟ್ ಮತ್ತೆ ಛಾಟಿಯೇಟು

|
Google Oneindia Kannada News

ಬೆಂಗಳೂರು, ನವೆಂಬರ್ 13: ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಕುರಿತಂತೆ ಅನ್ವರ್ ಮಾನಪ್ಪಾಡಿ ವರದಿ ವಿವಾದ ಕುರಿತಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ನಿಡಿದೆ.

ಮಂಗಳವಾರ ಅನ್ವರ್ ಮಾನಪ್ಪಾಡಿ ವರದಿ ಸಂಬಂಧ ನ್ಯಾಯಾಂಗ ನಿಂದನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರಾಜ್ಯ ಸರ್ಕಾರ ಈಗಾಗಲೇ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿ ಕುರಿತಂತೆ ಆದಷ್ಟು ಬೇಗ ಒಂದು ನಿರ್ಧಾರಕ್ಕೆ ಬರುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಬಿಬಿಎಂಪಿಗೆ ತನ್ನ ಮೂಗಿಗಿಂತ ಮೂಗುತಿ ಭಾರ!ಬಿಬಿಎಂಪಿಗೆ ತನ್ನ ಮೂಗಿಗಿಂತ ಮೂಗುತಿ ಭಾರ!

ರಾಜ್ಯದಲ್ಲಿರುವ ಸಾವಿರಾರು ಕೋಟಿ ರೂ ಮೌಲ್ಯದ ವಕ್ಫ್ ಮಂಡಳಿ ಆಸ್ತಿಯನ್ನು ಕೆಲ ಖಾಸಗಿ ವ್ಯಕ್ತಿಗಳು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅಲ್ಪ ಸಂಖ್ಯಾತ ಆಯೋಗದ ಹಿಂದಿನ ಅಧ್ಯಕ್ಷ ಅನ್ವರ್ ಮಾನಪ್ಪಾಡಿ ವರದಿ ನೀಡಿದ್ದರು.

Waqf property raw HC gives directions to State government

ಈ ವರದಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ವಕ್ಫ್ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಂದ ಮರುವಶ ಮಾಡಿಕೊಳ್ಳಬೇಕೆಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ ಎನ್ನಲಾಗಿದೆ. ಆದರೆ ಈ ವರದಿಯನ್ನು ರಾಜ್ಯ ಸರ್ಕಾರ ಈವರೆಗೆ ಬಹಿರಂಗಪಡಿಸಿಲ್ಲ, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ರಚನೆಯಾಗಿದ್ದ ಮಾನಪ್ಪಾಡಿ ಸಮಿತಿ ನೀಡಿದ ವರದಿಯನ್ನು ನಂತರ ಬಂದ ಕಾಂಗ್ರೆಸ್ ಹಾಗೂ ಈಗಿನ ಸಮ್ಮಿಶ್ರ ಸರ್ಕಾರ ಬಹಿರಂಗಪಡಿಸದಿರುವ ಹಿನ್ನೆಲೆಯಲ್ಲಿ ಈ ವರದಿಯನ್ನು ವಿಧಾನಮಂಡಲದಲ್ಲಿ ಮಂಡನೆ ಮಾಡಬೇಕೆಂದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.

ಗ್ರಂಥಾಲಯ ಇಲಾಖೆಗೆ ಕಟ್ಟಬೇಕಾದ 350 ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ ಗ್ರಂಥಾಲಯ ಇಲಾಖೆಗೆ ಕಟ್ಟಬೇಕಾದ 350 ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ

ಈ ಅರ್ಜಿ ಆಧರಿಸಿ ಹೈಕೋರ್ಟ್ ವರದಿ ಮಂಡನೆಗೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ ಸರ್ಕಾರ ವರದಿ ಮಂಡನೆ ಮಾಡುವಂತೆ ನೀಡಿದ ಕ್ರಮ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ವಿಳಂಬವಾಗಿ ರಾಜ್ಯ ಸರ್ಕಾರ ಕೋರ್ಟ್ ಎದುರು ಸಕಾಲಕ್ಕೆ ತನ್ನ ವಾದವನ್ನು ಮಂಡಿಸದೆ ಇರುವುದರಿಂದ ಅರ್ಜಿ ಹಾಗೆಯೇ ಉಳಿದಿತ್ತು.

ಬಿಬಿಎಂಪಿ ಹೊಸ ನೀತಿ: ಕಮರ್ಷಿಯಲ್ ಜಾಹೀರಾತಿಗೆ ಶಾಶ್ವತ ಬ್ರೇಕ್ ಬಿಬಿಎಂಪಿ ಹೊಸ ನೀತಿ: ಕಮರ್ಷಿಯಲ್ ಜಾಹೀರಾತಿಗೆ ಶಾಶ್ವತ ಬ್ರೇಕ್

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ನ್ಯಾಯಾಂಗ ನಿಂದನಾ ಅರ್ಜಿ ದಾಖಲಾಗಿದೆ ಈ ಅರ್ಜಿಯ ಹಿನ್ನೆಲೆಯಲ್ಲಿ ಮಂಗಳವಾರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಛಾಟಿಯೇಟು ಬೀಸಿದೆ.

English summary
The Karnataka High Court has given directions to State government to pleade as soon as possible regarding waqf property table in the state legislative session on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X