ವಿಶ್ವ ತಂಬಾಕು ರಹಿತ ದಿನ ಜಾಗೃತಿಗಾಗಿ ವಾಕಥಾನ್
ಬೆಂಗಳೂರು, ಮೇ 30: ವಿಶ್ವ ತಂಬಾಕು ರಹಿತ ದಿನವನ್ನು ಮೇ 31ರಂದು ಆಚರಿಸಲಾಗುತ್ತದೆ. ತಂಬಾಕು ಜಾಗೃತಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಾಕಥಾನ್ ಆಯೋಜಿಸಿದೆ.
ಈ ವರ್ಷದ 'ವಿಶ್ವ ತಂಬಾಕು ರಹಿತ ದಿನ' ಅಂಗವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಂಬಾಕು ನಿಯಂತ್ರಣ ಕೋಶವು, ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ ಸಂಘ ಸಂಸ್ಥೆಗಳ ಜತೆಗೂಡಿ ನಗರದಲ್ಲಿ ವಾಕಥಾನ್ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬೆಳಗ್ಗೆ 10ಕ್ಕೆ ವಾಕಥಾನ್‌ಗೆ ಚಾಲನೆ ದೊರೆಯಲಿದ್ದು, 11 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನಗರದ ಆನಂದ್ ರಾವ್ ಸರ್ಕಲ್‌ನಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನಾಲಯದ ಆವರಣದಿಂದ ಆರಂಭವಾಗುವ ಈ ವಾಕಥಾನ್ ಸ್ವತಂತ್ರ ಉದ್ಯಾನದಲ್ಲಿ ಅಂತ್ಯಗೊಳ್ಳಲಿದೆ. ವಾಕಥಾನ್ ನಂತರ ವಿವಿಧ ಕಾರ್ಯಕ್ರಮಗಳನ್ನು ಸ್ವಾತಂತ್ರ್ಯ ಉದ್ಯಾನದ ಒಳಗಡೆ ಹಮ್ಮಿ ಕೊಳ್ಳಲಾಗಿದೆ.

ವಾಕಥಾನ್‌ನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಭಂದಿ ವರ್ಗ, ಕಾರ್ಡಿಯಾಲಜಿಸ್ಟ್ ಅಸೋಸಿಯೆಷನ್‍ನ ಪದಾಧಿಕಾರಿಗಳು ಹಾಗು ಸದಸ್ಯರು, ಸಾರ್ವಜನಿಕ ಆರೋಗ್ಯ ತಜ್ಞರು, ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗು ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ.












Click it and Unblock the Notifications