ಮಧ್ಯಾಹ್ನ ಮೂರು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಬೆಂಗಳೂರು, ಏಪ್ರಿಲ್ 23: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2019ರ ಎರಡನೇ ಹಂತದ ಮತದಾನ ಈವರೆಗೆ ಶಾಂತಿಯುತವಾಗಿ ನಡೆದಿದ್ದು, ಮಧ್ಯಾಹ್ನ 3 ಗಂಟೆ ವೇಳೆಗೆ 48.90% ಮತದಾನವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

1 ಗಂಟೆ ವೇಳೆಗೆ 36.61% ಇದ್ದ ಮತದಾನ ನಿಧಾನವಾಗಿ ಹೆಚ್ಚಾಗುತ್ತಿದ್ದು ಮೂರು ಗಂಟೆ ವೇಳೆಗೆ 48.90% ಆಗಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ಕೆಲವು ಕಡೆ ಮಳೆ ಆಗಿದ್ದು, ಮತದಾನಕ್ಕೆ ಅಲ್ಪ ಹಿನ್ನಡೆ ಆಗಿದೆ.

ಇಂದು ಮತದಾನವಾಗುತ್ತಿರುವ 14 ಕ್ಷೇತ್ರಗಳ ಪೈಕಿ ಈವರೆಗೆ ಶಿವಮೊಗ್ಗದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಮೂರು ಗಂಟೆ ವೇಳೆಗೆ 54.88% ಮತದಾನವಾಗಿದೆ. ಉತ್ತರ ಕನ್ನಡದಲ್ಲಿ 53.48% ಮತದಾನವಾಗಿದೆ.

Voting percentage in Karnatakas second poling lok sabha constituenciestill 3 PM

ಬೀದರ್‌ನಲ್ಲಿ ಶೇ 47.04% ಮತದಾನವಾಗಿದೆ. ಕೊಪ್ಪಳದಲ್ಲಿ 51.13%, ಬಳ್ಳಾರಿಯಲ್ಲಿ 48.61%, ಹಾವೇರಿಯಲ್ಲಿ 50.24%, ಧಾರವಾಡದಲ್ಲಿ 51.28% ಮತದಾನವಾಗಿದೆ, ದಾವಣಗೆರೆಯಲ್ಲಿ 51.67% ಮತದಾನವಾಗಿದೆ.

ಚಿಕ್ಕೋಡಿಯಲ್ಲಿ 53.06%, ಬೆಳಗಾವಿಯಲ್ಲಿ 48.66%, ಬಾಗಲಕೋಟೆಯಲ್ಲಿ 52.09%, ರಾಯಚೂರಿನಲ್ಲಿ 43.02% , ವಿಜಯಪುರ 43.83% ಮತದಾನವಾಗಿದೆ ಮತ್ತು ಈ ವರೆಗೆ ಅತ್ಯಂತ ಕಡಿಮೆ ಮತದಾನವಾಗಿರುವುದು ಕಲಬುರಗಿಯಲ್ಲಿ, ಅಲ್ಲಿ ಮೂರು ಗಂಟೆ ವರೆಗೆ ಕೇವಲ 38.94% ಮಾತ್ರವೇ ಮತದಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+