ಶಾಸಕ ಮುನಿರತ್ನಗೆ ಮತ್ತೆ ಪರೀಕ್ಷೆ, ಜೂನ್ 06ಕ್ಕೆ ಫಲಿತಾಂಶ
Recommended Video

ಬೆಂಗಳೂರು, ಮೇ 31: 'ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಮನೆಯೊಂದರಲ್ಲಿ ಸಾವಿರಾರು ವೋಟರ್ ಐಡಿ ಕಾರ್ಡ್ ಅಕ್ರಮವಾಗಿ ಸಂಗ್ರಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಶಾಸಕ ಮುನಿರತ್ನ ಅವರು ಆರೋಪಿಯಾಗಿದ್ದಾರೆ.
ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಿದ್ದು, ಜೂನ್ 06ರಂದು ಅರ್ಜಿ ವಿಚಾರಣೆ ನಡೆಯಲಿದೆ.

ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದ್ದು, ಅರ್ಜಿ ಮಾನ್ಯ ಮಾಡಿ, ವಿಚಾರಣೆ ನಡೆಸುವ ಬಗ್ಗೆ ತೀರ್ಮಾನ ಪ್ರಕಟಿಸಲಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ, ಜಾಲಹಳ್ಳಿ ಠಾಣೆ ಪೊಲೀಸರು ಹಾಗೂ ಎರಡು ಪ್ರತ್ಯೇಕ ದೂರು ದಾಖಲಿಸಿ, ಚುನಾವಣಾಧಿಕಾರಿ ಜೆ.ಆರ್.ಭಾಸ್ಕರ್, ಎನ್.ರಾಕೇಶ್ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಆದರೆ, ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದೂರು, ಪ್ರತ್ಯೇಕ ತನಿಖೆ ನಡೆಸಿರುವುದು ಸರಿಯಲ್ಲ ಎಂದು ಮುನಿರತ್ನ ಪರ ವಕೀಲರು ವಾದಿಸಿದ್ದು, ಎಫ್ ಐಆರ್ ರದ್ದುಪಡಿಸುವಂತೆ ಅರ್ಜಿ ಹಾಕಿದ್ದಾರೆ.












Click it and Unblock the Notifications