• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸನ್ನಡತೆ ಆಧಾರದ ಮೇಲೆ ಬಿಡುಗಡೆ ಬಯಸಿದ ಶಶಿಕಲಾ

|

ಬೆಂಗಳೂರು, ಡಿ.2: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅವರು ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ ನಾಲ್ಕು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿದ್ದು, 10 ಕೋಟಿ ರೂ ದಂಡವನ್ನು ಆಕೆ ನ್ಯಾಯಾಲಯಕ್ಕೆ ಕಟ್ಟಬೇಕಿತ್ತು. ಇತ್ತೀಚೆಗೆ ದಂಡವನ್ನು ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಕೋರ್ಟಿಗೆ ಪಾವತಿಸಿದ್ದಾರೆ.

ಕರುಣಾನಿಧಿ ಪುತ್ರರ ಕಾಳಗ, ಅಳಗಿರಿಯಿಂದ ಹೊಸ ಪಕ್ಷ ಉದಯ?

ಶಶಿಕಲಾ ದತ್ತು ಪುತ್ರ ವಿಎನ್ ಸುಧಾಕರನ್, ಜೆ ಇಳವರಸಿ ಹಾಗೂ ಶಿಶಿಕಲಾ ಅವರಿಗೆ 2017ರ ಫೆಬ್ರವರಿ 15ರಂದು ಜೈಲುಶಿಕ್ಷೆ ಪ್ರಕಟವಾಗಿತ್ತು. ದಂಡ ಪಾವತಿಸಿರುವುದರಿಂದ ನಿಗದಿಯಂತೆ ಜನವರಿ 27, 2021ರಂದು ಬಿಡುಗಡೆಯಾಗಬಹುದು. ಆದರೆ, ಇದಕ್ಕೂ ಮುನ್ನವೇ ಜೈಲಿನಿಂದ ಶಶಿಕಲಾ ಬಿಡುಗಡೆ ಬಯಸಿದ್ದಾರೆ.

ಶಶಿಕಲಾ ಹಾಗೂ ಅವರ ಕುಟುಂಬಸ್ಥರನ್ನು ಪಕ್ಷ ಹಾಗೂ ಸರ್ಕಾರದಿಂದ ದೂರ ಇರಿಸಲು ಎಂದೋ ನಿರ್ಧರಿಸಿ ಆಗಿದೆ. ಶಶಿಕಲಾ ಅವರು ಬಿಡುಗಡೆಯಾದ ಮಾತ್ರಕ್ಕೆ ಅವರ ಬಗ್ಗೆ ಎಐಎಡಿಎಂಕೆ ನಿಲುವು ಬದಲಾಗುವುದಿಲ್ಲ ಎಂದು ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು

10 ಕೋಟಿ ದಂಡ ಪಾವತಿಸಿ, ಬಿಡುಗಡೆಯ ಹೊಸ್ತಿಲಲ್ಲಿ ಶಶಿಕಲಾ

ಅವಧಿಗೂ ಮುನ್ನ ಬಿಡುಗಡೆ ಹೇಗೆ?

ಅವಧಿಗೂ ಮುನ್ನ ಬಿಡುಗಡೆ ಹೇಗೆ?

ಈ ಕುರಿತಂತೆ ಜೈಲಿನ ಅಧಿಕಾರಿಗಳಿಗೆ ಶಶಿಕಲಾ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಪತ್ರವನ್ನು ಉನ್ನತಾಧಿಕಾರಿಗಳ ಅವಗಹನೆಗೆ ಕಳಿಸಲಾಗಿದ್ದು, ಈ ಬಗ್ಗೆ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ಕರ್ನಾಟಕದ ಕಾರಾಗೃಹ ನಿಯಮಾವಳಿಗಳ ಪ್ರಕಾರ, ಪ್ರತಿ ತಿಂಗಳು ಸನ್ನಡತೆ ಆಧಾರ ಮೇಲೆ ಮೂರು ದಿನಗಳ ಅವಧಿ ಕಡಿತ ಸಾಧ್ಯತೆಯಿದೆ. ಶಶಿಕಲಾ ಅವರು ಸದ್ಯ 43 ತಿಂಗಳ ಜೈಲುವಾಸ ಪೂರೈಸಿದ್ದು, 135 ದಿನಗಳ ಅವಧಿ ಕಡಿತಕ್ಕೆ ಅರ್ಹರಾಗಿದ್ದಾರೆ ಎಂದು ಶಶಿಕಲಾ ಪರ ವಕೀಲ ಎನ್ ರಾಜ ಸೆಂತೂರ್ ಪಾಂಡಿಯನ್ ಹೇಳಿದ್ದಾರೆ.

ಪೆರೋಲ್ ದಿನಗಳು ಕೂಡಾ ಗಣನೆಗೆ ಬರಲಿದೆ

ಪೆರೋಲ್ ದಿನಗಳು ಕೂಡಾ ಗಣನೆಗೆ ಬರಲಿದೆ

ಶಶಿಕಲಾ ಅವರು 1997 ಹಾಗೂ 2014ರಲ್ಲಿ 35 ದಿನಗಳು, 2017ರಲ್ಲಿ 17 ದಿನಗಳ ಪೆರೋಲ್ ಪಡೆದುಕೊಂಡಿದ್ದರು. ಫೆಬ್ರವರಿ 15, 2017ರಲ್ಲಿ ಬಂದ ಕೋರ್ಟ್ ಆದೇಶದಂತೆ ಶಶಿಕಲಾ ಹಾಗೂ ಇತರರು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹ ಸೇರಿದ್ದರು. ಶಶಿಕಲಾ ಅವರು ತಮ್ಮ ಪತಿ ಎಂ.ನಟರಾಜನ್ ನಿಧನರಾದಾಗ ಪೆರೋಲ್ ಮೇಲೆ 15 ದಿನಗಳ ಕಾಲ ಜೈಲಿನಿಂದ ಹೊರಗಿದ್ದರು. ತಂಜಾವೂರಿನಲ್ಲಿ ಪತಿಯ ಅಂತ್ಯಸಂಸ್ಕಾರ ವಿಧಿ ಮುಗಿಸಿಕೊಂಡು ಜೈಲಿಗೆ ಮರಳಿದ್ದರು.

10 ಕೋಟಿ ರೂ. ದಂಡ ಪಾವತಿಸಿರುವ ಶಶಿಕಲಾ

10 ಕೋಟಿ ರೂ. ದಂಡ ಪಾವತಿಸಿರುವ ಶಶಿಕಲಾ

ಜಯಲಲಿತಾಗೆ 100 ಕೋಟಿ ರೂ., ಶಶಿಕಲಾ, ಇಳವರಸಿ, ಸುಧಾಕರನ್‌ಗೆ ತಲಾ 10 ಕೋಟಿ ರೂ. ದಂಡ ವಿಧಿಸಿದ್ದರು. ಒಂದೊಮ್ಮೆ ದಂಡ ಕಟ್ಟಲು ಸಾಧ್ಯವಾಗದಿದ್ದಲ್ಲಿ ಇನ್ನೂ ಒಂದು ವರ್ಷಗಳ ಕಾಲ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತ್ತು. ಅದರಂತೆ, ಬುಧವಾರ(ನ.18) 34ನೇ ಸಿಟಿ ಸಿವಿಎಲ್ ನ್ಯಾಯಾಲಯಕ್ಕೆ 10,00,10,000 ರುಗಳನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸಲಾಗಿದೆ, ಜೊತೆಗೆ ಆದಾಯ ತೆರಿಗೆ ಇಲಾಖೆಯಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಸಲ್ಲಿಸಲಾಗಿದೆ ಎಂದು ಶಶಿಕಲಾ ಪರ ವಕೀಲ ಎನ್ ರಾಜ ಸೆಂತೂರ್ ಪಾಂಡಿಯನ್ ತಿಳಿಸಿದ್ದಾರೆ.

  Virat Kohli 2020 ರಲ್ಲಿ ಒಂದೇ ಒಂದ ಶತಕ ಕೂಡ ಸಿಡಿಸಿಲ್ಲ | Oneindia Kannada
  ದಂಡ ವಿಧಿಸಿದ ಬಳಿಕ ಬಿಡುಗಡೆಗೆ ಅರ್ಹ

  ದಂಡ ವಿಧಿಸಿದ ಬಳಿಕ ಬಿಡುಗಡೆಗೆ ಅರ್ಹ

  2014ರ ಸೆಪ್ಟೆಂಬರ್‌ ನಲ್ಲಿ ಸ್ಪೆಷಲ್ ಟ್ರಯಲ್ ಕೋರ್ಟ್ ನ್ಯಾ. ಜಾನ್ ಮೈಕೇಲ್ ಕನ್ಹಾ ಐಪಿಸಿ ಸೆಕ್ಷನ್ 109ರಡಿ ಜೆ ಜಯಲಲಿತಾ, ಶಶಿಕಲಾ, ಸುಧಾಕರನ್, ಇಳವರಸಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು. ಶಶಿಕಲಾ ದತ್ತು ಪುತ್ರ ವಿಎನ್ ಸುಧಾಕರನ್, ಜೆ ಇಳವರಸಿ ಹಾಗೂ ಶಿಶಿಕಲಾ ಅವರಿಗೆ 2017ರ ಫೆಬ್ರವರಿ 15ರಂದು ಜೈಲುಶಿಕ್ಷೆ ಪ್ರಕಟವಾಗಿತ್ತು.

  ಈಗ 10 ಕೋಟಿ ರು ದಂಡ ಪಾವತಿಸಿದ ಬಗ್ಗೆ ನ್ಯಾಯಾಲಯದಿಂದ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಪತ್ರ ತಲುಪಿದ ಬಳಿಕ ಬಿಡುಗಡೆ ಕುರಿತ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕೃತವಾಗಿ ಮಾಹಿತಿ ಬಂದಿದೆ. ಶಶಿಕಲಾ, ವಿಎನ್ ಸುಧಾಕರನ್, ಜೆ ಇಳವರಸಿ ಅವರಿಗೂ 10ಕೋಟಿ ಪ್ಲಸ್ 10 ಸಾವಿರ ರು ದಂಡ ವಿಧಿಸಲಾಗಿದ್ದು, ಅವರು ಕೂಡಾ ದಂಡ ವಿಧಿಸಿದ ಬಳಿಕ ಬಿಡುಗಡೆಗೆ ಅರ್ಹರಾಗುತ್ತದೆ

  English summary
  Late Tamil Nadu Chief Minister J Jayalalithaa's close aide V K Sasikala, serving a four-year jail term on graft charges, has sought remission and early release from prison, official sources said on Wednesday.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X