Video Viral: ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ವೈದ್ಯೆಯಿಂದ ಅತ್ತೆ, ಮಾವನ ಮೇಲೆ ಹಲ್ಲೆ, ಕಿರುಕುಳ
ಬೆಂಗಳೂರು, ಮಾರ್ಚ್ 14: ಮಕ್ಕಳ ಮದುವೆ ಬಳಿಕ ವಯಸ್ಸಾದ ತಂದೆ ತಾಯಿಗಳಿಗೆ ಸೂಕ್ತ ಆಸರೆಯೇ ಇಲ್ಲದಂತಾಗುತ್ತದೆ. ಕಾಳಜಿ ವಹಿಸಬೇಕಾದ ಮಕ್ಕಳು-ಸೊಸೆಯಂದಿರೇ ಹಲ್ಲೆ ಮಾಡಿದರೆ, ಮನೆಯಿಂದ ನೂಕಿದರೆ ವಯಸ್ಸಾದ ಪೋಷಕರು ಎಲ್ಲಿಗೆ ಹೋಗಬೇಕು?. ಇಂತಹ ಪ್ರಕರಣಗಲೂ ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ ಖ್ಯಾತ ಆಸ್ಪತ್ರೆ ವೈದ್ಯೆಯೊಬ್ಬರು ವರ್ಷಗಳಿಂದ ತಮ್ಮತ್ತೆ ಮೇಲೆ ಪೌರುಷ, ದರ್ಪ ತೋರಿ ಹಲ್ಲೆ ಗೈದ ಘಟನೆ ನಡೆದಿದೆ.
ಹೌದು, ವೃತ್ತಿಯಲ್ಲಿ ಸರ್ಕಾರಿ ವೈದ್ಯರಾದ ಡಾ. ಪ್ರಿಯದರ್ಶಿನಿ ಎನ್. ಅವರು ತಮ್ಮ ಅತ್ತೆ-ಮಾವಂದಿರಿಗೆ ಕಿರುಕುಳ ನೀಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಕಾರಣದಿಂದಲೇ ಅವರು ಬಾಡಿಗೆ ಮನೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಎದರುಆಗಿದೆ.

ಗಂಡನ ಮನೆಯ ವಯಸ್ಸಾದ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೇ ಅತ್ತೆ ತಾಳಿ ಸಹರ ಹಿಡಿದು ಹಲ್ಲೆ ಮಾಡಿದ ಈ ವೈದ್ಯರೆ ಬೆಂಗಳೂರಿನ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಅವರ ಹಲ್ಲೆಯ ವಿಡಿಯೋ ಅನ್ನು ಕರ್ನಾಟಕ ಪೋರ್ಟ್‌ಫೋಲಿಯೋ @karnatakaportf ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.
ಈ ವಿಡಿಯೋ ಪ್ರಕಾರ, ಕಳೆದ ಹತ್ತು ವರ್ಷಗಳಿಂದ ಸರ್ಕಾರಿ ಆಸ್ಪತ್ರೆ ವೈದ್ಯ ಸೇರಿದಂತೆ ತಮ್ಮ ಸೊಸೆಯಂದಿರಿಂದ ದೌರ್ಜನ್ಯಕ್ಕೆ ಒಳಗಾಗುವುದು ಸಾಮಾಜಿಕವಾಗಿ ತೀವ್ರ ಕಳಕಳಿ ಉಂಟು ಮಾಡುತ್ತಿದೆ. ನಾಡಿನಲ್ಲಿ ಸುಶಿಕ್ಷಿತರೇ ಈ ರೀತಿ ಮಾಡುತ್ತಿರುವುದು ಬೇಸರದ ಸಂಗತಿ. ಈ ಪ್ರಕರಣದಲ್ಲಿ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಪ್ರಿಯದರ್ಶಿನಿ ಎನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಂದರೆ ಒಂದು ದಶಕಕ್ಕೂ ಹೆಚ್ಚು ಕಾಲ ತನ್ನ ಅತ್ತೆ-ಮಾವಂದಿರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸೊಸೆಯಂದಿರ ಕಾಟ ತಾಳಲಾರದೇ ದೌರ್ಜನ್ಯಕ್ಕೆ ಒಳಗಾದ ಪೋಷಕರು ತಮ್ಮ ಸ್ವಂತ ಮನೆಯನ್ನು ಬಿಟ್ಟು ಬಾಡಿಗೆ ಮನೆಯಲ್ಲಿದ್ದಾರೆ.
ಬಲವಂತವಾಗಿ ಮನೆಗೆ ನುಗ್ಗಿ ಹಲ್ಲೆ, ಗಲಾಟೆ
ಇದೇ ಪ್ರಕರಣದಲ್ಲಿ ಈ ಹಿಂದೆ ಕೋರ್ಟ್ ಅವತ್ತೆಯ ಬಾಡಿಗೆ ಮನೆಗೆ ಹೋಗುವಂತಿಲ್ಲ ಎಂದು ತಿಳಿಸಿತ್ತು. ಅದರ ನಡುವೆ ಮಾರ್ಚ್ 10 ರಂದು ರಾತ್ರಿ 8:15 ಕ್ಕೆ ಸೊಸೆಯಂದಿರು ಇಬ್ಬರು ತಮ್ಮ ಇಬ್ಬರು ಪತಿ ಜೊತೆಗೆ (ಪೋಷಕರ ಮಕ್ಕಳು) ಅವರ ಬಾಡಿಗೆ ಮನೆಗೆ ಬಲವಂತವಾಗಿ ನುಗ್ಗಿ ದಾಂಧಲೆ ಮಾಡಿದ್ದಾರೆ.ದೈಹಿಕವಾಗಿ ಹಲ್ಲೆ ನಡೆಸಿದರು.
It is deeply disturbing to see elderly parents suffering abuse at the hands of their daughters-in-law. One such horrifying case involves Dr. Priyadarshini N, a doctor at Victoria Government Hospital, who harassed her in-laws for over a decade. Her mistreatment forced them to… pic.twitter.com/FPh2IpmHq9
— Karnataka Portfolio (@karnatakaportf) March 13, 2025
ಹೃದಯ ರೋಗಿಯಾಗಿರುವ ಮತ್ತು 80 ವರ್ಷದ ಮಾವನನ್ನು ಕಾಲಿನಿಂದ ಒದ್ದು, ತುಳಿದು ದರ್ಪ ಮೆರೆದಿದ್ದಾರೆ. ಕ್ಯಾನ್ಸರ್ ನಿಂದ ಬದುಕುಳಿದ ಆಕೆಯ ಅತ್ತೆಯನ್ನು ಐದು ನಿಮಿಷಗಳಿಗೂ ಹೆಚ್ಚು ಕಾಲ ಮಂಗಳಸೂತ್ರದಿಂದ ಎಳೆದಾಡಿದ್ದಾರೆ. ಈ ಭಯಾನಕ ಕೃತ್ಯವು ಸೆರೆಯಾಗಿದೆ. ಈ ಸಂಬಂಧ ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ (ಸಂಖ್ಯೆ 0094/2025) ಪ್ರಕರಣ ದಾಖಲಾಗಿದೆ. ಆದರೆ ವಯಸ್ಸಾದ ಪೋಷಕರಿಗೆ ಸಮರ್ಪಕ ನ್ಯಾಯ ಸಿಕ್ಕಿಲ್ಲ ಎಂಬುದನ್ನು ಈ ವಿಡಿಯೋ ತಿಳಿಸುತ್ತದೆ.
ಕೇಲವ ಮಹಿಳೆಯರ ವಿರುದ್ಧದ ನಡೆದ ಕೌಟುಂಬಿಕ ಹಿಂಸಾಚಾರ ಮಾತ್ರವೇ ಅಪರಾಧವಲ್ಲ. ಇದು ದುರ್ಬಲರಾದವರ ವಿರುದ್ಧ ನಡೆದು ಅದು ಸಹ ಅಪರಾಧವೇ ಆಗಿದೆ. ವಯಸ್ಸಾದ ಪೋಷಕರು ಸೊಸೆ ಮಕ್ಕಳಿಂದ ಆರೈಕೆಗೊಳ್ಳಬೇಕು. ಅವರಿಂದ ಗೌರವ ತೆಗೆದುಕೊಳ್ಳಬೇಕಾಗಿತ್ತು. ಆದರೆ ಅವರಿಂದಲೇ ಈ ರೀತಿ ದೌರ್ಜನ್ಯಕ್ಕೆ ಒಳಗಾಗಿ ಬಳಲುತ್ತಿದ್ದಾರೆ.
ಕಠಿಣ ಕ್ರಮಕ್ಕೆ ನೆಟ್ಟಿಗರ ಒತ್ತಾಯ
ಸದ್ಯ ವೈರಲ್ ಆದ ವಿಡಿಯೋದಲ್ಲಿ ಸೆರೆಯಾದ ಕೃತ್ಯ ಸಮಾಜ ತಲೆತಗ್ಗಿಸುವಂಥದ್ದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತಮ್ಮ ಅತ್ತೆ-ಮಾವನ ಮೇಲೆ ದೌರ್ಜನ್ಯ ನಡೆಸುವ ಮಹಿಳೆಯರಿಗೆ ಇತರ ಯಾವುದೇ ದೇಶೀಯ ಹಿಂಸಾಚಾರದ ಅಪರಾಧಿಗಳಂತೆಯೇ ಕಠಿಣ ಶಿಕ್ಷೆ ನೀಡಬೇಕು. ವಯಸ್ಸಾದ ಪೋಷಕರು ಘನತೆ, ಸುರಕ್ಷತೆ ಕಾಪಾಡುವ ಜೊತೆಗೆ ಅವರಿಗೆ ನ್ಯಾಯ ಒದಗಿಸುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಸೂಕ್ತ ಕ್ರಮಕ್ಕೆ ಕೋರಿದ್ದಾರೆ.












Click it and Unblock the Notifications