ವೈರಲ್ ವಿಡಿಯೋ: ಸೈನಿಕರಿಗೆ ರಾಷ್ಟ್ರಧ್ವಜ ನೀಡಿ ಸೆಲ್ಯೂಟ್ ಮಾಡಿದ ಕಂದಮ್ಮ
ಬೆಂಗಳೂರು, ಆಗಸ್ಟ್ 14: ದೇಶದ ಸ್ವಾತಂತ್ಯ್ರ ಸಂಭ್ರಮದ ಅಮೃತ ಮಹೋತ್ಸವಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಈಗಾಗಲೇ ರಾಷ್ಟ್ರದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಎಲ್ಲೆಲ್ಲೂ ಹಾರಾಡುತ್ತಿರುವ ರಾಷ್ಟ್ರಧ್ವಜಗಳು ದೇಶಭಕ್ತಿಯ ಕಿಚ್ಚು ಹೊತ್ತಿಸುತ್ತಿವೆ.
ಮನೆ ಮನೆಗೂ ರಾಷ್ಟ್ರಧ್ವಜ ಕಾರ್ಯಕ್ರಮದಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತ್ರಿವರ್ಣ ಧ್ವಜವನ್ನು ಎಲ್ಲರ ಮನೆ ಮೇಲೂ ಹಾರಿಸಲು ಮನವಿ ಮಾಡಿವೆ. ಕೋಟ್ಯಾಂತರ ಭಾರತೀಯರು ತಮ್ಮ ಮನೆ ಮೇಲೆ ಧ್ವಜ ಹಾರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡು ತಮ್ಮ ದೇಶ ಪ್ರೇಮ ಮೆರೆಯುತ್ತಿದ್ದಾರೆ. ಪುಟ್ಟ ಕಂದಮ್ಮಗಳು ಕೂಡ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸುತ್ತಿವೆ.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುಟ್ಟ ಮಗುವೊಂದು ಹೆಮ್ಮೆಯ ಸೈನಿಕರಿಗೆ ರಾಷ್ಟ್ರಧ್ವಜ ನೀಡಿ ಸೆಲ್ಯೂಟ್ ಮಾಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಗ್ದ ಮಗುವಿನ ದೇಶಪ್ರೇಮಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ. ಸಿ. ಅಶ್ವತ್ಥ ನಾರಾಯಣ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಗು ಸೈನಿಕರಿಗೆ ರಾಷ್ಟ್ರಧ್ವಜ ಕೊಟ್ಟು ಗೌರವ ಸಲ್ಲಿಸುವ ವಿಡಿಯೋವನ್ನು ಹಂಚಿಕೊಂಡಿರುವ ಅವರು, "ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ, ಜೈ ಹಿಂದ್." ಎಂದು ಟ್ವೀಟ್ ಮಾಡಿದ್ದಾರೆ.
ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡುವ ಹೆಮ್ಮೆಯ ಸೈನಿಕರಿಗೆ ಮುಗ್ದ ಮಗುವೊಂದು ನೀಡಿರುವ ಗೌರವಕ್ಕೆ ನೆಟ್ಟಿಗರು ತಲೆಬಾಗಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮದ ಭಾವ ಬಿತ್ತಿದ ಪೋಷಕರಿಗೂ ಸಲಾಂ ಹೇಳಿದ್ದಾರೆ.
ನಮ್ಮ @BLRAirport ನಲ್ಲಿ ಕಂಡುಬಂದ ದೃಶ್ಯ
— Dr. Ashwathnarayan C. N. (@drashwathcn) August 14, 2022
ಜೈ ಹಿಂದ್! 🇮🇳 pic.twitter.com/zp22YChy83












Click it and Unblock the Notifications