ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಷಿಯಲ್ ಮೀಡಿಯಾದಲ್ಲಿ ಗುಲ್ ಎಬ್ಬಿಸಿದ ಬೆಂಗಳೂರಿನ ಸಂಚಾರಿ ಪೊಲೀಸ್!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಸಿಲಿಕಾನ್ ಸಿಟಿಯಲ್ಲಿ ಸಂಚಾರ ನಿಯಮಗಳನ್ನು ಫಾಲೋ ಮಾಡುವ ಮಂದಿ ಎಷ್ಟಿದ್ದಾರೋ ಅದಕ್ಕಿಂತ ನಿಯಮಗಳನ್ನು ಬ್ರೇಕ್ ಮಾಡುವ ಜನರು ಹೆಚ್ಚಾಗಿದ್ದಾರೆ. ಇದಕ್ಕೆ ಸಾಮಾನ್ಯ ಜನರಿಂದ ಹಿಡಿದು ಪೊಲೀಸರೂ ಹೊರತಾಗಿಲ್ಲ.

ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಪಾಲನೆ ಮಾಡುವ ವಿಷಯದಲ್ಲಿ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರುವಂತಹ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರು ಪೊಲೀಸರಿಂದ 'ಸೈಬರ್ ಗ್ರೂಮಿಂಗ್' ಜಾಗೃತಿ; ಪೋಷಕರೇ ಏನಿದು ತಿಳಿಯಿರಿ...ಬೆಂಗಳೂರು ಪೊಲೀಸರಿಂದ 'ಸೈಬರ್ ಗ್ರೂಮಿಂಗ್' ಜಾಗೃತಿ; ಪೋಷಕರೇ ಏನಿದು ತಿಳಿಯಿರಿ...

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸಪ್ಪನೊಬ್ಬ ಇಲಾಖೆಯಿಂದಲೇ ನೀಡಿರುವ ಅರ್ಧ ಹೆಲ್ಮಟ್ ಅನ್ನು ಧರಿಸಿದ ಕಾರಣಕ್ಕೆ ದಂಡ ಕಟ್ಟುವಂತಾಗಿದೆ. ಹಾಫ್ ಹೆಲ್ಮೆೆಟ್ ಧರಿಸಿದ ಸಂಚಾರಿ ಪೊಲೀಸಪ್ಪನಿಗೆ ಅದೇ ಸಂಚಾರಿ ಇಲಾಖೆಯ ಮತ್ತೊಬ್ಬ ಪೊಲೀಸ್ ದಂಡ ವಿಧಿಸಿರುವ ಚಿತ್ರವು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಇದೊಂದು ಚಿತ್ರ ಸಖತ್ ಗುಲ್ ಎಬ್ಬಿಸಿದೆ.

ಸಿಲಿಕಾನ್ ಸಿಟಿ ಸಂಚಾರಿ ಪೊಲೀಸ್ ಸುದ್ದಿ ಮಾಡಿದ್ದೇಕೆ?

ಸಿಲಿಕಾನ್ ಸಿಟಿ ಸಂಚಾರಿ ಪೊಲೀಸ್ ಸುದ್ದಿ ಮಾಡಿದ್ದೇಕೆ?

ಬೆಂಗಳೂರಿನ ಆರ್‌ಟಿ ನಗರದ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರು ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಿದ್ದ ಮತ್ತೊಬ್ಬ ಪೊಲೀಸರಿಗೆ ದಂಡ ವಿಧಿಸಿದ್ದಾರೆ. ಟ್ರಾಫಿಕ್ ನಿಯಮಾವಳಿ ವಿಭಾಗವು ನಿಷೇಧಿಸಿದ್ದ ಅರ್ಧ ಹೆಲ್ಮೆಟ್ ಧರಿಸಿದ್ದೇ ಅವರ ತಪ್ಪಾಗಿತ್ತು. ಹಾಫ್ ಹೆಲ್ಮೆಟ್ ಧರಿಸಿದ ಸಂಚಾರಿ ಪೊಲೀಸಪ್ಪನಿಗೆ ಮತ್ತೊಬ್ಬ ಪೊಲೀಸ್ ದಂಡ ಹಾಕಿದ ಘಟನೆ ನಡೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ಗುಲ್ ಎಬ್ಬಿಸಿದ ಬೆಂಗಳೂರು ಪೊಲೀಸ್!

ಸೋಷಿಯಲ್ ಮೀಡಿಯಾದಲ್ಲಿ ಗುಲ್ ಎಬ್ಬಿಸಿದ ಬೆಂಗಳೂರು ಪೊಲೀಸ್!

ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ರೂಲ್ಸ್ ಅಂದರೆ ಅದು ಎಲ್ಲರಿಗೂ ಒಂದೇ. ಇಂಥದೊಂದು ಶಿಸ್ತುಬದ್ಧ ನಿಯಮವನ್ನು ಸಾರಿ ಹೇಳುವಂತಹ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಫ್ ಹೆಲ್ಮೆಟ್ ಧರಿಸಿದ ಪೊಲೀಸಪ್ಪನಿಗೆ ಸಂಚಾರಿ ಇಲಾಖೆಯ ಮತ್ತೊಬ್ಬ ಪೊಲೀಸ್ ದಂಡ ವಿಧಿಸಿ, ರಿಸಿಪ್ಟ್ ನೀಡುತ್ತಿರುವ ಚಿತ್ರವು ಸಖತ್ ಸುದ್ದಿ ಆಗುತ್ತಿದೆ. ಈ ಚಿತ್ರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಿನ್ನ-ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಪೊಲೀಸಪ್ಪನ ಮೇಲೆ ಈ ಕೇಸನ್ನೂ ಹಾಕಿ ಎಂದು ಟ್ವೀಟ್!

ಪೊಲೀಸಪ್ಪನ ಮೇಲೆ ಈ ಕೇಸನ್ನೂ ಹಾಕಿ ಎಂದು ಟ್ವೀಟ್!

ಇದು ಕೇವಲ ಪಬ್ಲಿಸಿಟಿ ಸ್ಟಂಟ್ ಎಂದು ಅರ್ಮಾನ್ ಎಂಬುವವರು ರಿಯಾಕ್ಟ್ ಮಾಡಿದ್ದಾರೆ. ಹಾಫ್ ಹೆಲ್ಮೆಟ್‌ಗಾಗಿ ಅವರನ್ನು ಏಕೆ ಬುಕ್ ಮಾಡುತ್ತೀರಿ? ದೋಷಪೂರಿತ ನಂಬರ್ ಪ್ಲೇಟ್, ಸೈಡ್ ಮಿರರ್ ಕಾಣೆ, ಇಯರ್‌ಫೋನ್‌ ಹಾಕಿಕೊಂಡು ವಾಹನ ಚಲಾಯಿಸುವುದು ಮುಂತಾದ ಇತರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುವುದು ಕಾಣುತ್ತಿದೆ. ಈ ಹಿಂದಿನ ಚಲನ್‌ಗಳಲ್ಲಿ 3500 ರೂಪಾಯಿ ಬಾಕಿ ಇದೆ. ಬ್ರೀತ್ ಅಲೈಸರ್ ಪರೀಕ್ಷೆಯನ್ನೂ ಮಾಡಬೇಕಿತ್ತು," ಎಂದು ಟ್ವೀಟ್ ಮಾಡಿದ್ದಾರೆ.

ದಂಡ ಕಟ್ಟುವಾಗಲೂ ಪೊಲೀಸಪ್ಪನ ಮುಗುಳುನಗೆ!

ದಂಡ ಕಟ್ಟುವಾಗಲೂ ಪೊಲೀಸಪ್ಪನ ಮುಗುಳುನಗೆ!

ಬೆಂಗಳೂರಿನಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಪ್ರಯಾಣಿಕರು ಪೊಲೀಸರನ್ನು ನೋಡಿದರೆ ಶಾಕ್ ಆಗುತ್ತಾರೆ. ದಂಡ ಕಟ್ಟಬೇಕಾಗುತ್ತೆ ಎಂಬ ಆತಂಕದಲ್ಲೇ ಗಾಡಿಗಳಿಗೆ ಬ್ರೇಕ್ ಹಾಕುತ್ತಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ ದಂಡದ ರಿಸಿಪ್ಟ್ ಪಡೆಯುವಾಗಲೂ ಪೊಲೀಸಪ್ಪನು ನಗುನಗುತ್ತಾ ಸ್ವೀಕರಿಸುತ್ತಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಜನರು ತಮ್ಮದೇ ಸ್ಟೈಲಿನಲ್ಲಿ ಪ್ರಶ್ನೆ ಮಾಡಿದ್ದಾರೆ.

English summary
Viral Picture: Bengaluru traffic police fine police for travelling on scooter with half helmet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X