• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಆಪತ್ಬಾಂಧವವಾದ ಜಿಲ್ಲಾಡಳಿತ!

|

ಬೆಂಗಳೂರು, ಮಾ. 29: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಇದರಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದು, ತಮ್ಮ ತವರಿನತ್ತ ಹೋಗುತ್ತಿರುವುದು ಸಾಮಾನ್ಯವಾಗಿದೆ. ಆದರೆ ಮುಂಜಾಗ್ರತೆಗಾಗಿ ರಾಜ್ಯಗಳ ಗಡಿಯನ್ನು ಬಂದ್ ಮಾಡಲಾಗಿದೆ. ಜೊತೆಗೆ ಜಿಲ್ಲಾ ಮಟ್ಟದಲ್ಲೂ ಗಡಿಗಳನ್ನು ಬಂದ್ ಮಾಡಲಾಗಿದೆ. ಹೀಗೆ ಬಂದ್ ಮಾಡಲಾಗಿರುವ ಗಡಿಗಳಲ್ಲಿ ತಮ್ಮ ತವರಿನತ್ತ ಹೋಗುತ್ತಿರುವ ಜನರನ್ನು ತಡೆದು ನಿಲ್ಲಿಸಿ ಹಿಂದಕ್ಕೆ ಕಳಿಸಲಾಗುತ್ತಿದೆ.

ಅತ್ತ ತವರಿಗೂ ಹೋಗಲಾಗದ, ಇತ್ತ ನೆಲೆಯೂ ಇಲ್ಲದ ಅತಂತ್ರ ಸ್ಥಿತಿಯಲ್ಲಿ ಕೂಲಿ ಕಾರ್ಮಿಕ ಜನರಿದ್ದಾರೆ. ಬೇರೆ ದೇಶಗಳಿಂದ ನಮ್ಮ ದೇಶದವರನ್ನು ಕರೆದುಕೊಂಡು ಬಂದಂತೆ, ನಮಗೂ ತವರಿಗೆ ಹೋಗಲು ಅವಕಾಶ ಮಾಡಿಕೊಡಿ ಎಂಬ ಒಂದೇ ಹಠವನ್ನು ಹಿಡಿದು ಕುಳಿತಿದ್ದ ಉತ್ತರ ಭಾರತದ ಸುಮಾರು 3 ಸಾವಿರ ಕೂಲಿ ಕಾರ್ಮಿಕರಿಗೆ ವಿಜಯಪುರ ಜಿಲ್ಲಾಡಳಿತ ಆಪತ್ಬಾಂಧವವಾಗಿದೆ.

ಬೆಂಗಳೂರಿನಿಂದ ಹೊರಟಿದ್ದ 3 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು

ಬೆಂಗಳೂರಿನಿಂದ ಹೊರಟಿದ್ದ 3 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 3000 ಜನ ತಮ್ಮ ತವರಾದ ಉತ್ತರ ಭಾರತದ ನಾನಾ ರಾಜ್ಯಗಳಿಗೆ ತೆರಳುತ್ತಿದ್ದರು. ಇವರು ಸಂಚರಿಸುತ್ತಿದ್ದ ಕಂಟೇನರ್, ಗೂಡ್ಸ್ ವಾಹನಗಳು ಮತ್ತು ಕಾರು, ಜೀಪುಗಳನ್ನು ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಮಹಾರಾಷ್ಟ್ರದ ಸೋಲಾಪುರ ಪೊಲೀಸರು ತಡೆದು ಲಾಠಿಚಾರ್ಜ್ ಮಾಡಿ ವಾಪಸ್ ಕಳುಹಿಸಿದ್ದರು. ಹೀಗಾಗಿ ಇವರು ಕರ್ನಾಟಕದ ಗಡಿ ಗ್ರಾಮ ಧೂಳಖೇಡದಲ್ಲಿಯೇ ತಮ್ಮ ಮಕ್ಕಳು, ಮಹಿಳೆಯರು, ಹಿರಿಯರೊಂದಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 13ರಲ್ಲಿಯೇ ಕುಳಿತಿದ್ದರು. ಕೊರೊನಾ ಬಗ್ಗೆ ಮೊದಲೇ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಗ್ರಾಮದ ಜನರಲ್ಲಿಯೂ ಈ ಘಟನೆ ಆತಂಕ ತಂದಿತ್ತು.

ಲಾಕ್ ಡೌನ್ ಉಲ್ಲಂಘನೆ: ವಿನೂತನ ಶಿಕ್ಷೆ ನೀಡುತ್ತಿರುವ ಪೊಲೀಸರು

ಮಕ್ಕಳು, ಮಹಿಳೆಯರೇ ಹೆಚ್ಚಾಗಿದ್ದ ಕೂಲಿ ಕಾರ್ಮಿಕರು

ಮಕ್ಕಳು, ಮಹಿಳೆಯರೇ ಹೆಚ್ಚಾಗಿದ್ದ ಕೂಲಿ ಕಾರ್ಮಿಕರು

ಸಾವಿರಾರು ಸಂಖ್ಯೆಯಲ್ಲಿದ್ದ ಕೂಲಿ ಕಾರ್ಮಿಕರು ಅಲ್ಲಿ ಇರಲು ಒಪ್ಪಲಿಲ್ಲ. ಆತ್ತ ಕಡೆ ಒಳಗಡೆ ಬಿಡಲು ಮಹಾರಾಷ್ಟ್ರ ಒಪ್ಪುತ್ತಿಲ್ಲ. ಈ ಜನರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಬೇಕೆಂದರೆ ಅವರಲ್ಲಿ ಮಹಿಳೆಯರು ಮತ್ತು ಮಕ್ಕಳು, ಹಿರಿಯ ನಾಗರಿಕರೂ ಇದ್ದರು. ಪರಿಸ್ಥಿತಿ ಹೀಗಿರವಾಗ ವಿಜಯಪುರ ಜಿಲ್ಲಾಡಳಿತಕ್ಕೆ ಇದೊಂದು ಗಂಭೀರ ಸಮಸ್ಯೆಯಾಯಿತು. ಆ 3000 ಸಾವಿರ ಜನರಿಗೆ ಮೊದಲಿಗೆ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಯಿತು. ಆ ಸಂದರ್ಭದಲ್ಲಿ ರಾತ್ರಿ ಆರೋಗ್ಯ ತಪಾಸಣೆ ವೇಳೆ ಇಂಡಿ ತಾಲೂಕು ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ ಅವರು ದಿಢೀರನೆ ಅಸ್ವಸ್ಥರಾದ ಘಟನೆಯೂ ನಡೆಯಿತು. ಮಧುಮೇಹದಿಂದ ಬಳಲುತ್ತಿದ್ದ ಅವರನ್ನು ಇಂಡಿಗೆ ಚಿಕಿತ್ಸೆಗೆ ಕಳುಹಿಸಿ ಕೊಡಲಾಯಿತು.

ಜಿಲ್ಲಾಡಳಿತದಿಂದ ಕೂಲಿ ಕಾರ್ಮಿಕರ ತಾತ್ಕಾಲಿಕ ಮನವೊಲಿಕೆ

ಜಿಲ್ಲಾಡಳಿತದಿಂದ ಕೂಲಿ ಕಾರ್ಮಿಕರ ತಾತ್ಕಾಲಿಕ ಮನವೊಲಿಕೆ

ಶುಕ್ರವಾರ ರಾತ್ರಿ ಈ ಬಗ್ಗೆ ಮಾಹಿತಿ ತಿಳಿದ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಮತ್ತು ತಂಡ ಆ 3000 ಜನರಿಗೆ ಧೂಳಖೇಡ ಗ್ರಾಮದ ಬಳಿ ಶಾಲೆಯಲ್ಲಿ ಉಳಿಯಲು ಅವಕಾಶ ಕಲ್ಪಿಸಿತ್ತು. ಅಲ್ಲದೇ, ಭಾರತ ಲಾಕ್​ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ಸೂಚನೆಯಂತೆ ಇವರೆಲ್ಲರಿಗೂ ನಾನಾ ಕಡೆ ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಲು ಮುಂದಾಗಿತ್ತು. ಆದರೂ 3000 ಸಾವಿರ ಜನ ಮಾತ್ರ ತಾವು ತಮ್ಮೂರಿಗೆ ಹೋಗಿಯೇ ಸಿದ್ಧ ಎಂದು ಪಟ್ಟು ಹಿಡಿದರರು. ಶನಿವಾರ ಸಂಜೆಯಿಂದ ಧೂಳಖೇಡದಲ್ಲಿಯೇ ಠಿಕಾಣಿ ಹೂಡಿದ ಡಿಸಿ ವೈ.ಎಸ್. ಪಾಟೀಲ, ಎಸ್ಪಿ ಅನುಪಮ ಅಗರವಾಲ ಮತ್ತು ಜಿ.ಪಂ. ಸಿಇಓ ಗೋವಿಂದ ರೆಡ್ಡಿ ಅವರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರು. ವಿಜಯಪುರ ಜಿಲ್ಲಾಧಿಕಾರಿಗಳು ಈ ಮಾಹಿತಿಯನ್ನು ಸರಕಾರದ ಗಮನಕ್ಕೆ ತಂದರೂ ಮಹಾರಾಷ್ಟ್ರದವರು ಒಪ್ಪಲಿಲ್ಲ.

ಸಂಕಷ್ಟದ ಸಂದರ್ಭದಲ್ಲಿ ನೋ ಎಂಟ್ರಿ ಎಂದ ಮಹಾರಾಷ್ಟ್ರ!

ಸಂಕಷ್ಟದ ಸಂದರ್ಭದಲ್ಲಿ ನೋ ಎಂಟ್ರಿ ಎಂದ ಮಹಾರಾಷ್ಟ್ರ!

ಆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿ ಕೊಡಲು ಕೊನೆಗೆ ನಾನಾ ಹಂತಗಳಲ್ಲಿ ಮಾತುಕತೆಯಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರಕಾರಗಳ ಮಟ್ಟದಲ್ಲಿ ಮಾತುಕತೆ ನಡೆಯಿತು. ಆ ಮಾತುಕತೆ ಫಲಪ್ರದವಾದ ತಕ್ಷಣವೇ ಶನಿವಾರ ಮಧ್ಯರಾತ್ರಿ 2 ಗಂಟೆಗೆ ವಿಜಯಪುರದಿಂದ ಸುಮಾರು 70ಕ್ಕೂ ಹೆಚ್ಚು ಸರಕಾರಿ ಬಸ್ಸುಗಳನ್ನು ಮತ್ತು ಆ ಬಸ್ಸುಗಳಲ್ಲಿ 3,000 ಜನರಿಗೆ ಬೇಕಾದ ಬಿಸ್ಕೆಟ್ ಮತ್ತು ಇತರ ಅವಶ್ಯಕ ಸಾಮಗ್ರಿಗಳನ್ನು ಕೊಟ್ಟು ಧೂಳಖೇಡಕ್ಕೆ ಕಳುಹಿಸಿದರು. ಅಲ್ಲದೇ, ಬೆಳಗ್ಗೆ 11 ಗಂಟೆಯ ಸುಮಾರಿಗೆ ಎಲ್ಲ ಬಸ್ಸುಗಳಲ್ಲಿ ರಾಜಸ್ಥಾನಕ್ಕೆ ಸೇರಿದ 2,200 ಜನ ಮತ್ತು ಇತರ ರಾಜ್ಯಗಳಿಗೆ ಸೇರಿದ 800 ಜನರನ್ನು ಅವರವರ ಊರುಗಳಿಗೆ ತಲುಪುವಂತೆ ಕಳುಹಿಸಿಕೊಟ್ಟರು.

ಈ ಮಧ್ಯೆ ಮಹಾರಾಷ್ಟ್ರ ಆ ಕಾರ್ಮಿಕರಲ್ಲಿ ಯಾರೂ ತಮ್ಮ ರಾಜ್ಯದಲ್ಲಿ ಕೆಳಗಿಳಿಯಬಾರದು ಎಂದು ಕಟ್ಟಪ್ಪಣೆ ವಿಧಿಸಿತ್ತು. ಆದರೆ, 3,000 ಜನರ ಪೈಕಿ ಸುಮಾರು ಜನ ಮಹಾರಾಷ್ಟ್ರದವರಾಗಿದ್ದರೆಂಬುದು ಗಮನಾರ್ಹ. ತನ್ನ ರಾಜ್ಯದ ಜನರಿದ್ದರೂ ಮಹಾರಾಷ್ಟ್ರ ಸರ್ಕಾರ ಹೀಗೆ ಮಾಡಿತ್ತು.

ವಿಜಯಪುರ ಜಿಲ್ಲಾಡಳಿತದ ಮಾನವೀಯತೆಗೆ ಜನರ ಸಲಾಂ!

ವಿಜಯಪುರ ಜಿಲ್ಲಾಡಳಿತದ ಮಾನವೀಯತೆಗೆ ಜನರ ಸಲಾಂ!

ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ನೇತೃತ್ವದ ಜಿಲ್ಲಾಡಳಿತ ಕರ್ನಾಟಕದ ಗಡಿಯಲ್ಲಿ ಸಿಲುಕಿದ್ದ 3000 ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪುವಂತೆ ಮಾಡಿದ್ದು ಮಾತ್ರ ಬಸವನಾಡಿನ ಅಧಿಕಾರಿಗಳ ಮಾನವೀಯತೆಗೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್ಪಿ ಅನುಪಮ ಅಗರವಾಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮತ್ತು ಅವರ ತಂಡಗಳಿಗೆ ಉತ್ತರ ಭಾರತದ ಕೂಲಿ ಕಾರ್ಮಿಕರೂ ಸೇರಿದಂತೆ ಗಡಿಭಾಗದಲ್ಲಿ ಆತಂಕದಲ್ಲಿದ್ದ ರಾಜ್ಯದ ಜನರು ಧನ್ಯವಾದ ಹೇಳಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಇದ್ದುದ್ದರಿಂದ ವಿಜಯಪುರ ಜಿಲ್ಲಾಡಳಿತ

English summary
The Vijayapur district has helped thousands of mercenary migrants from Bangalore to their hometowns. Mercenary workers have been sent on KSRTC buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more