Actor Darshan Wife and Brother: ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಭೇಟಿಯಾದ ಈ ಮೂವರು: ಏನೆಲ್ಲಾ ಮಾತಾಡಿದ್ರು?
Actor Darshan Wife and Brother: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ & ಪಟಲಾಂ ಗ್ಯಾಂಗ್ ಜೈಲು ಸೇರಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿ ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ನಡುವೆಯೇ ನಟ ದರ್ಶನ್‌ನ್ನು ಹೊರ ತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಈವರೆಗೂ ಪತ್ನಿ ವಿಜಯಲಕ್ಷ್ಮಿ ಪತಿ ದರ್ಶನ್ ನೋಡಲು ಜೈಲಿಗೆ ನಾಲ್ಕನೇ ಬಾರಿ ಭೇಟಿ ನೀಡಿದ್ದಾರೆ. ಮೊದಲ ಬಾರಿಗೆ ಮಗನ ಜೊತೆ ಭೇಟಿ ನೀಡಿದಾಗ, ಮಗ ವಿನೀಶ್‌ನನ್ನು ತಬ್ಬಿಕೊಂಡು ದರ್ಶನ್ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿತ್ತು.

ಇತ್ತೀಚೆಗಷ್ಟೇ ಅಂದರೆ ಕಳೆದ ವಾರ ಮಗ ವಿನೀಶ್, ಪತ್ನಿ ವಿಜಯಲಕ್ಷ್ಮಿ, ಅಕ್ಕನ ಮಗ ಚಂದನ್ ದರ್ಶನ್‌ನನ್ನು ನೋಡಲು ಜೈಲಿಗೆ ಬಂದಿದ್ದರು. ಜೈಲು ನಿಯಮದ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಇನ್ನು ಇಂದು ದರ್ಶನ್‌ನನ್ನು ನೋಡಲು 4ನೇ ಬಾರಿ ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಬಂದಿದ್ದಾರೆ. ಅಲ್ಲದೆ, ಅತ್ತಿಗೆ ಜೊತೆ ತಮ್ಮ ದಿನಕರ್ ತೂಗುದೀಪ್ ಸಹ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಹೆಚ್ಚಿನ ಕಾಳಜಿ ವಹಿಸಿ ಪ್ರಕರಣದ ಹೋರಾಟ ಜವಾಬ್ದಾರಿಯನ್ನು ಪತ್ನಿ ವಿಜಯಲಕ್ಷ್ಮಿ ವಹಿಸಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಚರ್ಚೆ ನಡೆಸಲು ಮತ್ತು ದರ್ಶನ್‌ನನ್ನು ನೋಡಲು ವಿಜಯಲಕ್ಷ್ಮಿ ಮತ್ತು ದಿನಕರ್ ಜೊತೆ ಅಕ್ಕನ ಮಗ ಚಂದನ್ ಸಹ ಭೇಟಿ ನೀಡಿದ್ದಾರೆ. ಅವಕಾಶ ಇರುವ ಸಮಯದಲ್ಲೇ ಕುಟುಂಬಸ್ಥರ ಜೊತೆ ನಟ ದರ್ಶನ್ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ಭಜನೆ ಮೊರೆಹೋದ ದರ್ಶನ್: ಜೈಲಿನಲ್ಲಿ ಸೈಲೆಂಟ್ ಆಗಿದ್ದ ನಟ ದರ್ಶನ್‌ಗೆ ಇತ್ತೀಚೆಗಷ್ಟೇ ಹೊಸ ಸ್ನೇಹಿತ ಸಿಕ್ಕಿದ್ದು, ಇದೀಗ ಮತ್ತೊಬ್ಬ ಸ್ನೇಹಿತ ಸಿಕ್ಕಂತಾಗಿದೆ. ಇದರಿಂದ ಅವರ ಮುಖದಲ್ಲಿ ತುಸು ನಗು ಮೂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ನಟ ದರ್ಶನ್ & ಗ್ಯಾಂಗ್ ಹತ್ಯೆಗೈದಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು. ಇನ್ನು ಈ ಪ್ರಕರಣದಲ್ಲಿ ಜೈಲು ಸೇರಿದಾಗಿನಿಂದ ನಟ ದರ್ಶನ್ ಯಾರ ಬಳಿಯೂ ಮಾತನಾಡದೇ ಸುಮ್ಮನೆ ಕುಳಿತುಕೊಳ್ಳುತ್ತಿದ್ದರು. ಈ ನಡುವೆಯೇ ಅವರು ಪುಸ್ತಕಗಳನ್ನು ತರಿಸಿ ಓದುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದು, ಈ ಅಭ್ಯಾಸ ಆದಾಗಿನಿಂದ ಅವರು ಜೈಲಿನ ಸಿಬ್ಬಂದಿ ಜೊತೆ ನಗು-ನಗುತ್ತಾ ಮಾತನಾಡುತ್ತಿದ್ದಾರೆ ಎಂದು ತಿಳಿದುಬಂದಿತ್ತು.
ಈ ಮೂಲಕ ಜೈಲಿನಲ್ಲಿ ಸೈಲೆಂಟ್ ಆಗಿದ್ದ ನಟ ದರ್ಶನ್‌ನನ್ನು ತನ್ನೆಡೆಗೆ ಸೆಳೆಯುವ ಮೂಲಕ ಪುಸ್ತಕಗಳೇ ಉತ್ತಮ ಸ್ನೇಹಿತನಂತೆ ಆಗಿವೆ. ಹೀಗೆ ಪುಸ್ತಕ ಹಿಡಿದಾಗಿನಿಂದ ಅವರಲ್ಲಿ ಬದಲಾವಣೆಗಳು ಕಾಣುತ್ತಿವೆ. ಮುಂದೆ ಅವರು ಇದರಿಂದ ಬದಲಾದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ನಟ ದರ್ಶನ್ ಪುಸ್ತಕ ಓದುವುದರ ಜೊತೆಗೆ ಭಜನೆ ಕಡೆ ಗಮನ ಹರಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗ್ಗೆ ವೇಳೆಗೆ ಬೇಗ ಎದ್ದು ಜೈಲಿನಲ್ಲಿಯೇ ವ್ಯಾಯಾಮ ಮಾಡಿ, ಡಿಪ್ಸ್ ಹೊಡೆದು ಫಿಟ್‌ನೆಸ್‌ಗೆ ಒತ್ತು ನೀಡುತ್ತಿದ್ದಾರೆ. ಇನ್ನು ನಟ ದರ್ಶನ್ ಜೈಲಿನಲ್ಲಿ ಯಾರ ಬಳಿಯೂ ಹೆಚ್ಚಾಗಿ ಮಾತನಾಡುತ್ತಿಲ್ಲ, ಬೆರೆಯುತ್ತಿಲ್ಲ. ಬದಲಾಗಿ ಪುಸ್ತಕ ಓದುತ್ತಿದ್ದಾರೆ. ಜೊತೆಗೆ ಇದೀಗ ಸಂಜೆಯಾಗುತ್ತಿದ್ದಂತೆ ಭಜನೆ ಕಡೆ ಗಮನ ಹರಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಎಲ್ಲಾ ಹವ್ಯಾಸಗಳನ್ನು ಗಮನಿಸಿದರೆ, ಅವರು ಮುಂದಿನ ದಿನಗಳಲ್ಲಿ ತುಂಬಾ ಬದಲಾವಣೆ ಆದರೂ ಯಾವುದೇ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications