ಟ್ರೇಡ್ ಮಾರ್ಕ್ ಬಳಕೆ: ಶಿವಮೊಗ್ಗದ ಹೋಟೆಲ್ ವಿರುದ್ಧ ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಗೆಲುವು
ಬೆಂಗಳೂರು, ಏಪ್ರಿಲ್. 10: ಸಿಲಿಕಾನ್ ಸಿಟಿಯ ಖ್ಯಾತ ರೆಸ್ಟೋರೆಂಟ್ ವಿದ್ಯಾರ್ಥಿ ಭವನವು ಶಿವಮೊಗ್ಗದ ಮತ್ತೊಂದು ರೆಸ್ಟೋರೆಂಟ್ ವಿರುದ್ಧ ಇದೇ ರೀತಿಯ ಹೆಸರು ಮತ್ತು ಶೈಲಿಯನ್ನು ಬಳಸಿ ಗ್ರಾಹಕರಲ್ಲಿ ಗೊಂದಲ ಮೂಡಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯದ ಮೊಕದ್ದಮೆಯನ್ನು ಗೆದ್ದಿದೆ.
"ಶಿವಮೊಗ್ಗದಲ್ಲಿ ಬೆಂಗಳೂರು ಫುಡ್ ಟ್ರೆಂಡ್" ಎಂಬ ಒಂದೇ ರೀತಿಯ ಹೆಸರು ಮತ್ತು ಪಂಚ್ ಲೈನ್ ಅನ್ನು ಬಳಸಿಕೊಂಡು ಗ್ರಾಹಕರನ್ನು ದಾರಿ ತಪ್ಪಿಸುವ ಮೂಲಕ ಶಿವಮೊಗ್ಗ ರೆಸ್ಟೋರೆಂಟ್ ತಮ್ಮ ಟ್ರೇಡ್ ಮಾರ್ಕ್ ಅನ್ನು ಉಲ್ಲಂಘಿಸಿದೆ ಎಂದು ಬೆಂಗಳೂರು ಮೂಲದ ರೆಸ್ಟೋರೆಂಟ್ ವಿದ್ಯಾರ್ಥಿ ಭವನವು ಆರೋಪಿಸಿತ್ತು. ಈ ಹಿನ್ನೆಲೆ ಪ್ರಕರಣ ದಾಖಲಾಗಿತ್ತು.

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಬೆಂಗಳೂರು ನ್ಯಾಯಾಲಯವು ವಿದ್ಯಾರ್ಥಿ ಭವನದ ಟ್ರೇಡ್‌ಮಾರ್ಕ್ ಅನ್ನು ಬಳಸದಂತೆ ಶಿವಮೊಗ್ಗ ರೆಸ್ಟೋರೆಂಟ್‌ಗೆ ಶಾಶ್ವತ ತಡೆಯಾಜ್ಞೆ ನೀಡಿದೆ. ಈ ಹಿಂದೆ ಇದಕ್ಕೆ ಸಂಬಂಧಿಸಿದಂತೆ ಉಲ್ಲಂಘಿಸುವ ಎಲ್ಲಾ ವಸ್ತುಗಳನ್ನು ನಾಶಪಡಿಸಲು ಆದೇಶಿಸಿದೆ. ಆದರೆ, ನ್ಯಾಯಾಲಯವು ಹಾನಿಯ ಮನವಿಯನ್ನು ಪುರಸ್ಕರಿಸಲಿಲ್ಲ.
ವಿದ್ಯಾರ್ಥಿ ಭವನದ ಪರ ಅರ್ಜಿದಾರರು ತಾವು ಶಿವಮೊಗ್ಗದಲ್ಲಿ ಯಾವುದೇ ರೆಸ್ಟೋರೆಂಟ್ ವ್ಯವಹಾರವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿ ಭವನವು ಒಂದು ಟ್ರೆಂಡ್ ಮಾರ್ಕ್ ಸಸ್ಯಾಹಾರಿ ರೆಸ್ಟೋರೆಂಟ್ ಆಗಿದ್ದು, ಇದು 80 ವರ್ಷಗಳಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ರೆಸ್ಟೋರೆಂಟ್ ತನ್ನ ರುಚಿಕರವಾದ ಮಸಾಲೆ ದೋಸೆ ಮತ್ತು ಹಳೆಯ ಕಾಲದ ಹೋಟೆಲ್ ಮೋಡಿಗೆ ಹೆಸರುವಾಸಿಯಾಗಿದೆ.
ಇದು ಬೆಂಗಳೂರಿನ ಅತ್ಯುತ್ತಮ ರೆಸ್ಟೋರೆಂಟ್ ಅಲ್ಲ, ಆದರೆ ಒಂದು ಭಾವನೆ! ನನ್ನ ಮಾತುಗಳ ಹಿಂದಿನ ಭಾವನೆಗಳನ್ನು ಮತ್ತು ಅದರ ಎಲ್ಲಾ ನಿಷ್ಠಾವಂತ ಪೋಷಕರ ಭಾವನೆಗಳನ್ನು ಅಳೆಯಲು ಒಬ್ಬರು ಈ 'ಆಹಾರದ ದೇವಾಲಯ'ಕ್ಕೆ ಭೇಟಿ ನೀಡಬೇಕು.

ಬೆಂಗಳೂರಿನಲ್ಲಿ ರುಚಿಕರವಾದ ದೋಸೆ, ಇಡ್ಲಿ, ವಡೆ ಮತ್ತು ಭಾತ್‌ಗಳಿಗೆ ಜನಪ್ರಿಯವಾದ ಅನೇಕ ರೆಸ್ಟೋರೆಂಟ್‌ಗಳಿವೆ. ಆದರೂ ಈ ವಿದ್ಯಾರ್ಥಿ ಭವನದಲ್ಲಿ ಟಿಂಡಿ ತಿನ್ನಲು ಜನರು ಸರತಿ ಸಾಲಿನಲ್ಲಿ ನಿಂಲುತ್ತಾರೆ. ವಿದ್ಯಾರ್ಥಿ ಭವನವು ದಶಕಗಳಿಂದ ದಕ್ಷಿಣ ಭಾರತದ ಖಾದ್ಯಗಳನ್ನು ಪೂರೈಸುತ್ತಿರುವ ಅಂತಹ ಹಳೆಯ ರೆಸ್ಟೋರೆಂಟ್ ಆಗಿದೆ. ಹಾಗೆಂದು ಇದೇನೂ ಬೆಂಗಳೂರಿನ ಅತ್ಯುತ್ತಮ ರೆಸ್ಟೋರೆಂಟ್ ಅಲ್ಲ.
ಹೌದು, ಸಿಲಿಕಾನ್ ಸಿಟಿಯಲ್ಲಿ ಅತ್ಯುತ್ತಮ ರೆಸ್ಟೋರೆಂಟ್‌ಗಳು ನೂರಾರಿವೆ. ಆದರೆ ವಿದ್ತಾರ್ಥಿ ಭವನ ಎಂಬುದು ಎಂದು ಭಾವನಾತ್ಮಕತೆ. ವಿದ್ಯಾರ್ಥಿ ಭವನ ರೆಸ್ಟೋರೆಂಟ್ ಬಸವನಗುಡಿಯ ಹಳೆಯ ಮತ್ತು ಪ್ರಸಿದ್ಧ ಗಾಂಧಿ ಬಜಾರ್‌ನಲ್ಲಿದೆ. 1943 ರಲ್ಲಿ, ಶ್ರೀ ವೆಂಕಟ್ರಮಣ ಉರಾಳ್ ಎಂಬುವವರು ಈ ಹೋಟೆಲ್ ಪ್ರಾರಂಭಿಸಿದರು.
ಇವರ ನಂತರ ಅವರ ಸಹೋದರ, ಪರಮೇಶ್ವರ ಉರಾಳ್ ಇದನ್ನು ಮುನ್ನೆರಸಿದರು. ವಿದ್ಯಾರ್ಥಿ ಭವನ, ಹೆಸರೇ ಸೂಚಿಸುವಂತೆ ನ್ಯಾಷನಲ್ ಹೈಸ್ಕೂಲ್ ಮತ್ತು ಆಚಾರ್ಯ ಪಾಠಶಾಲೆ ವಿದ್ಯಾರ್ಥಿಗಳ ಬೇಡಿಕೆಗಳನ್ನು ಪೂರೈಸಲು ಸ್ಥಾಪಿಸಲಾಯಿತು. 1954 ರಲ್ಲಿ ವಿದ್ಯಾರ್ಥಿ ಭವನವನ್ನು ರಾಮಕೃಷ್ಣ ಅಡಿಗ ವಹಿಸಿಕೊಂಡರು. ಕಳೆದ 68 ವರ್ಷಗಳಿಂದ, ಅಡಿಗ ಕುಟುಂಬವು ಈ ಪ್ರಸಿದ್ಧ ರೆಸ್ಟೋರೆಂಟ್‌ನ ಪರಂಪರೆಯನ್ನು ಮುಂದುವರೆಸುತ್ತಿದೆ. ಪಾಕವಿಧಾನಗಳು ಮತ್ತು ಆಹಾರದ ರುಚಿಯನ್ನು ಹಾಗೇ ಉಳಿಸಿಕೊಂಡಿದೆ.
ಇಂದಿಗೂ ಹಿರಿಯರ ಅಚ್ಚು ಮೆಚ್ಚಿನ ಜಾಗವಾಗಿ, ಹೊಸಬರಿಗೆ ಹಳೆಯ ರುಚಿಯನ್ನು ನೀಡುತ್ತಿರುವ ವಿದ್ಯಾರ್ಥಿ ಭವನಕ್ಕೆ ರಾಜಕಾರಣಿಗಳು, ಸಿನಿಮಾ ನಟ ನಟಿಯರು ಮತ್ತು ರಂಗಭೂಮಿ ಕಲಾವಿದರ ಅಚ್ಚು ಮೆಚ್ಚಿನ ಜಾಗವಾಗಿದೆ.












Click it and Unblock the Notifications