ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧ ಪ್ರವೇಶ ಇನ್ನು ಸಲೀಸಲ್ಲ: ನೌಕರರ ವಾಹನಗಳಿಗೂ ಹೊಸ ಪಾಸ್

|
Google Oneindia Kannada News

Recommended Video

ಇನ್ಮುಂದೆ ವಿಧಾನಸೌಧ ಪ್ರವೇಶ ಅಷ್ಟು ಸುಲಭವಲ್ಲ | Oneindia Kannada

ಬೆಂಗಳೂರು, ಅ.4: ಇನ್ನು ಮುಂದೆ ವಿಧಾನಸೌಧ ಪ್ರವೇಶಿಸುವುದು ಅಷ್ಟು ಸುಲಭವಲ್ಲ, ನೌಕರರ ವಾಹನಗಳಿಗೂ ಕೂಡ ಹೊಸ ಪಾಸ್ ಖರೀದಿಸಿದ ಬಳಿಕವೇ ವಿಧಾನಸೌಧ ಪ್ರವೇಶಕ್ಕೆ ಅವಕಾಶ ದೊರೆಯಲಿದೆ.

ವಿಧಾನಸೌಧ ಪ್ರವೇಶಿಸುವ ವಾಹನಗಳಿಗೆ ವಿತರಿಸಿರುವ ಗುರುತಿನ ಪತ್ರವನ್ನು ಅಕ್ಟೋಬರ್ 5ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

ವಿಧಾನಸೌಧಕ್ಕೆ ಸಿದ್ದರಾಮಯ್ಯ ಹಠಾತ್ ಭೇಟಿಯ ರಾಜರಹಸ್ಯವೇನು? ವಿಧಾನಸೌಧಕ್ಕೆ ಸಿದ್ದರಾಮಯ್ಯ ಹಠಾತ್ ಭೇಟಿಯ ರಾಜರಹಸ್ಯವೇನು?

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದ್ದು, ವಿಧಾನಸೌಧ ಆರಣಣ ಪ್ರವೇಶಿಸುವ ವಾಹನಗಳ ಸಂಖ್ಯೆ ವಿಪರೀತವಾಗುತ್ತಿದೆ, ವಾಹನಗಳಿಗೆ ನೀಡಲಾದ ಪಾಸುಗಳ ದುರ್ಬಳಕೆಯಾಗುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Vidhana Soudha entry tougher than ever even for employees

ಇಷ್ಟು ದಿನ ವಿಧಾನಸೌಧ ಪಾಸುಗಳನ್ನು ಕೆಲವರು ನಕಲು ಮಾಡಿ ಸಿಕ್ಕಿಬಿದ್ದಿದ್ದರು, ಇದೀಗ ನಕಲಿಗೆ ಸಾಧ್ಯವಾಗದಂತಹ ಬಹುವರ್ಣಗಳ ಪಾಸುಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಕ್ಟೋಬರ್ 5ರಿಂದ ಪಾಸುಗಳ ವಿತರಣೆ ಕಾರ್ಯ ಆರಂಭವಾಗಲಿದೆ.

ಜೆಡಿಎಸ್‌ ಕಾರ್ಯಕರ್ತರು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವಂತಿಲ್ಲ!ಜೆಡಿಎಸ್‌ ಕಾರ್ಯಕರ್ತರು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವಂತಿಲ್ಲ!

ಸಿಎಂ ಕಾರ್ಯಾಲಯ, ವಿವಿಧ ಸಚಿವಾಲಯ ಸೇರಿದಂತೆ ಸಚಿವರು, ಶಾಸಕರ ಆಪ್ತ ಶಾಖೆಗಳಲ್ಲಿ ಲಭ್ಯವಿರುವ ಅರ್ಜಿ ಪಡೆದು ಅಕ್ಟೋನರ್ 10ರೊಳಗೆ ಭರ್ತಿ ಮಾಡಿಕೊಡಬೇಕು.

ಈವರೆಗೆ 4 ಚಕ್ರದ ವಾಹನಗಳಿಗೆ ಮಾತ್ರ ಪಾಸುಗಳನ್ನು ನೀಡಲಾಗುತ್ತಿತ್ತು, ಇನ್ನುಮುಂದೆ ದ್ವಿಚಕ್ರ ವಾಹನಗಳು ಕೂಡ ಕಡ್ಡಾಯವಾಗಿ ಪಾಸುಗಳನ್ನು ಪಡೆಯಬೇಕಿದೆ. ದ್ವಿಚಕ್ರ ವಾಹನ ಹೊಂದಿರುವ ಸಚಿವಾಲಯದ ಸಿಬ್ಬಂದಿಗಳೂ ಕೂಡ ಪಾಸುಗಳನ್ನು ಪಡೆಯಬೇಕು.

ವಿಧಾನಸೌಧದ ಮೇಲೆ ಉಗ್ರರ ಕಣ್ಣು: ಶಕ್ತಿ ಕೇಂದ್ರಕ್ಕೆ ಕಮಾಂಡೋ ಭದ್ರತೆ ವಿಧಾನಸೌಧದ ಮೇಲೆ ಉಗ್ರರ ಕಣ್ಣು: ಶಕ್ತಿ ಕೇಂದ್ರಕ್ಕೆ ಕಮಾಂಡೋ ಭದ್ರತೆ

ವಿಧಾನಸೌಧಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳು ಹಾಗೂ ಖಾಸಗಿ ವಾಹನಗಳ ಪ್ರೇಶಕ್ಕೆ ಯಾವ ರೀತಿಯ ಪಾಸುಗಳನ್ನು ನೀಡಲಾಗುತ್ತದೆ ಎನ್ನುವುದು ಇದುವರೆಗೂ ಸ್ಪಷ್ಟವಾಗಿಲ್ಲ.

English summary
Department of personnel and administrative reforms has issuing new entry passes for employees who are working in Vidhana Soudha from October 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X