• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಬೆಂಗಳೂರಿನಲ್ಲಿ BMTC ಸೈಡ್ ಹೊಡೆದರೆ ಬೀಳುತ್ತಾ ಗೂಸಾ?

|
   BMTC : ಬೈಕ್ ಸವಾರನಿಗೆ ಚಾಲಕನಿಂದ ಹಲ್ಲೆ:ವಿಡಿಯೋ ವೈರಲ್ | BMTC | ONEINDIA KANNADA

   ಬೆಂಗಳೂರು, ಜನವರಿ.31: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ನ್ನು ಸೈಡ್ ಹಾಕಿದ್ರೆ ವಾಹನ ಸವಾರರಿಗೆ ಹಿಗ್ಗಾಮುಗ್ಗಾ ಗೂಸಾ ಬೀಳುತ್ತಾ. ಈ ಮಾತು ಸತ್ಯ ಎನ್ನುವುದಕ್ಕೆ ಇತ್ತೀಚಿಗೆ ಬೆಂಗಳೂರಿನಲ್ಲೇ ನಡೆದ ಒಂದೇ ಒಂದು ಘಟನೆ ಸಾಕ್ಷಿಯಾಗುತ್ತದೆ.

   ಕಳೆದ ಜನವರಿ.30 ಗುರುವಾರ ನಡುರಸ್ತೆಯಲ್ಲೇ ಬೈಕ್ ಸವಾರನ ಮೇಲೆ ಬಿಎಂಟಿಸಿ ಚಾಲಕನೊಬ್ಬ ಹಿಡಿದು ಥಳಿಸಿರುವ ಘಟನೆ ಬೆಂಗಳೂರಿನ ಮಹದೇವಪುರದ ಬಳಿ ನಡೆದಿದೆ. ಚಾಲಕ ತೋರಿದ ದುರ್ವರ್ತನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

   ಮೆಟ್ರೋ ಆಯ್ತು ಈಗ ಬಿಎಂಟಿಸಿ ವಿರುದ್ಧ ಕನ್ನಡಿಗರ ಹೋರಾಟದ ಧ್ವನಿ

   ಸಿಲ್ಕ್ ಬೋರ್ಡ್ ನಿಂದ ಹೆಬ್ಬಾಳ ಮಾರ್ಗವಾಗ ಸಂಚರಿಸುತ್ತಿದ್ದ KA 57 F822 ಸಂಖ್ಯೆಯ ಬಿಎಂಟಿಸಿ ವೋಲ್ವೋ ಬಸ್ ನ್ನು ಬೈಕ್ ಸವಾರನೊಬ್ಬ ಹಿಂದಕ್ಕೆ ಹಾಕಿದ್ದಾರೆ. ಲೈನ್ ಕ್ರಾಸ್ ಮಾಡಿದ ಎಂಬ ಕಾರಣಕ್ಕೆ ನಡುರಸ್ತೆಯಲ್ಲೇ ಬೈಕ್ ಸವಾರನ ಮೇಲೆ ಬಸ್ ಚಾಲಕ ಹಲ್ಲೆ ನಡೆಸಿದ್ದಾನೆ.

   ವಿಡಿಯೋ ಚಿತ್ರೀಕರಿಸಿದ ಬಸ್ ಪ್ರಯಾಣಿಕ ಹಮೀದ್

   ಮಹದೇವಪುರ ಬಳಿ KA53 EF 7538 ಬೈಕ್ ಸವಾರನ ಮೇಲೆ ಬಿಎಂಟಿಸಿ ವೋಲ್ವೋ ಬಸ್ ಚಾಲಕ ಹಲ್ಲೆ ನಡೆಸಿರುವ ದೃಶ್ಯವನ್ನು ಬಸ್ ನಲ್ಲೇ ಕುಳಿತಿದ್ದ ಹಮೀದ್ ಎಂಬ ವ್ಯಕ್ತಿಯು ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

   ನೀನ್ಯಾರೋ ಎಂದು ಆವಾಜ್ ಹಾಕಿದ ಚಾಲಕ

   ನೀನ್ಯಾರೋ ಎಂದು ಆವಾಜ್ ಹಾಕಿದ ಚಾಲಕ

   ಇನ್ನು, ನಡುಬೀದಿಯಲ್ಲೇ ಸಾರ್ವಜನಿಕವಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು ತಪ್ಪಲ್ಲವೇ ಎಂದು ಪ್ರಶ್ನೆ ಮಾಡಿದ್ದಕ್ಕೆ ಪ್ರಯಾಣಿಕ ಹಮೀದ್ ಗೆ ಬಸ್ ಚಾಲಕ ಆವಾಜ್ ಹಾಕಿದ್ದಾನೆ. ಅದನ್ನೆಲ್ಲ ಕೇಳೋದಕ್ಕೆ ನೀನ್ಯಾರೋ, ಕನ್ನಡದಲ್ಲಿ ಮಾತಾಡೋ ಮೊದಲು ಎಂದು ದರ್ಪ ತೋರಿದ್ದಾನೆ. ಈ ದೃಶ್ಯ ಕೂಡಾ ವಿಡಿಯೋದಲ್ಲಿ ಸೆರೆಯಾಗಿದೆ.

   ಚಾಲಕನ ವಿರುದ್ಧ ತನಿಖೆಗೆ ಆದೇಶಿಸಿದ ಸಿ.ಶಿಖಾ

   ಚಾಲಕನ ವಿರುದ್ಧ ತನಿಖೆಗೆ ಆದೇಶಿಸಿದ ಸಿ.ಶಿಖಾ

   ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ಬಿಎಂಟಿಸಿ ಬಸ್ ಚಾಲಕನನ್ನು ಸಂತೋಷ್ ಬಡಿಗೇರ್ ಎಂದು ಗುರುತಿಸಲಾಗಿದ್ದು, ಯಶವಂತಪುರ ಡಿಪೋ ವ್ಯಾಪ್ತಿಯ ನೌಕರ ಎಂದು ತಿಳಿದು ಬಂದಿದೆ. ಟ್ರೈನಿ ಡ್ರೈವರ್ ಆಗಿರುವ ಸಂತೋಷ್ ನನ್ನು ಅಮಾನತುಗೊಳಿಸಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಬಿಎಂಟಿಸಿ ಕಾರ್ಯನಿರ್ವಾಹಕ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

   ಸಿಲಿಕಾನ್ ಸಿಟಿಯಲ್ಲಿ ಸುರಕ್ಷಿತ ಸಂಚಾರಕ್ಕೆ ಕ್ರಮ ಯಾವಾಗ?

   ಸಿಲಿಕಾನ್ ಸಿಟಿಯಲ್ಲಿ ಸುರಕ್ಷಿತ ಸಂಚಾರಕ್ಕೆ ಕ್ರಮ ಯಾವಾಗ?

   ಬೆಂಗಳೂರಿನಲ್ಲಿ ಸುರಕ್ಷಿತ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳಬೇಕಿದೆ. ನಡುರಸ್ತೆಯಲ್ಲೇ ಬಿಎಂಟಿಸಿ ಚಾಲಕನೊಬ್ಬ ಬೈಕ್ ಸವಾರ ಮೇಲೆ ಈ ರೀತಿಯಾಗಿ ಹಲ್ಲೆ ನಡೆಸುತ್ತಾನೆ. ಹೀಗೆ ಆದರೆ, ರಾಜ್ಯ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆಯ ಗತಿಯೇನು. ಈ ಬಗ್ಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಹಮೀದ್ ಮನವಿ ಮಾಡಿಕೊಂಡಿದ್ದಾರೆ.

   English summary
   Video Viral: BMTC Volvo Bus Driver Onset The Twe-Wheeler Rider In Bangalore.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X