ಬೆಂಗಳೂರಿನ ಅಧಿಕೃತ ಭಾಷೆ 'ಕನ್ನಡ ಅಲ್ಲ': ಮತ್ತ್ಯಾವುದು? ಇಲ್ಲಿದೆ ನೋಡಿ ಉತ್ತರ: Video Viral
ಬೆಂಗಳೂರು, ಮಾರ್ಚ್ 04: ಬೆಂಗಳೂರು ಎಂದರೆ ಭಾಷಿಗರ ಭೇದ ಭಾವವಿಲ್ಲದೇ ಉದ್ಯೋಗ, ಅನ್ನ, ನೆಲೆ ನೀಡುವ ಜಾಗ. ಒಂದರ್ಥದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎನ್ನಬಹುದು. ಇಲ್ಲಿಗೆ ಬೇರೆ ಬೇರೆ ರಾಜ್ಯದವರು, ಉತ್ತರ ಭಾರತದ ಕರೆಯವರು ಬಂದು ಬೇಳೆ ಬೇಸಿಯಿಕೊಂಡಿದ್ದಾರೆ. ಬೇಳೆ ಬೆಂದ ಮೇಲೆ ಒಲೆಯನ್ನೇ ಒದ್ದಂತೆ ಮಾತನಾಡಿದ ಉದಾಹರಣೆಗಳು ಸಾಕಷ್ಟಿವೆ. ಇದೀಗ ಬೆಂಗಳೂರು ಅಧಿಕೃತ ಭಾಷೆ ಯಾವುದೆಂಬ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. 'ಇದು ಅವರ ತಪ್ಪಲ್ಲ...' ಎಂಬ ಶಿರ್ಷಿಕೆಯ ಸಹ ಇದೆ. ಅಂದರೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಿದೆ ಎಂದರ್ಥವಲ್ಲವೇ!
ರಸ್ತೆ ಮಧ್ಯೆ ಮೈಕ್ ಹಿಡಿದು ಸಾರ್ವಜನಿಕರನ್ನು, ವಿದ್ಯಾರ್ಥಿಗಳನ್ನು, ಯುವತಿಯರನ್ನು ಮಾತನಾಡಿಸಿ, ಪ್ರಶ್ನೆಯೊಂದಕ್ಕೆ ಉತ್ತರ ಪಡೆಯುವ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಅದೇ ರೀತಿಯಲ್ಲಿ ಇಲ್ಲೋಬ್ಬ ಯುವಕ ಬೆಂಗಳೂರಿನ ಅಧಿಕೃತ ಭಾಷೆ ಯಾವುದೆಂದು ಕೇಳುತ್ತಾರೆ?. ಅದಕ್ಕೆ ಉತ್ತರಿಸಲು ಈ ಯುವತಿಯರು ಹೆಣಗಾಡುತ್ತಾರೆ.

ಬೆಂಗಳೂರು ಅಧಿಕೃತ ಭಾಷೆ 'ತಮಿಳು, ಹಿಂದು, ಮಲಯಾಳಂ, ಇಂಗ್ಲಿಷ್, ಸಂಸ್ಕೃತ ಎಂದೆಲ್ಲ' ಹೇಳುತ್ತಾರೆ. ಬೆಂಗಳೂರು ಅಧಿಕೃತ ಭಾಷೆ ಹೊಂದಿಲ್ಲ ಅಂತಲೂ ಹೇಳುತ್ತಾರೆ. ಒಬ್ಬರೇ ಒಬ್ಬರ ಬಾಯಿಂದ ಕನ್ನಡ ಭಾಷೆ ಬೆಂಗಳೂರು ಅಧಿಕೃತ ಭಾಷೆ ಎಂಬುದು ಬರುವುದಿಲ್ಲ.
ವಿಶ್ವದಲ್ಲೇ ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆಗೆ ಹೆಸರುವಾಸಿಯಾಗಿದೆ. ಸಿಲಿಕಾನ್ ವ್ಯಾಲಿ, ಐಟಿ ಕೇಂದ್ರ, ಮಹಾನಗರ ಎಂದೆಲ್ಲ ವಿಶೇಷಣಗಳಿಂದ ರಾಜ್ಯ ರಾಜಧಾನಿಯನ್ನು ಗುರುತಿಸುತ್ತಾರೆ. ಭಾಷೆ, ಪ್ರಾದೇಶಿಕತೆ ಭೇದವಿಲ್ಲದೇ ಅನ್ನ ನೀಡುವ ಜಾಗದ ಮಾತೃ ಭಾಷೆ ಗೊತ್ತಿಲ್ಲದವರು ಇಲ್ಲಿದ್ದಾರೆ. ''ಇದು ಅವರ ತಪ್ಪಲ್ಲ. ಬದಲಾಗಿ ನಮ್ಮ ದೇ ತಪ್ಪು'' ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಆನ್‌ಲೈನ್‌ನಲ್ಲಿ ಕನ್ನಡಿಗರಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ವಾಕ್ಸ್ ಪಾಪ್‌ನಂತೆ ಕಾಣುವ ಈ ವಿಡಿಯೋವನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ ಅಂದರೆ, ಇಲ್ಲ ಇದು ಬೆಂಗಳೂರಿನದ್ದೆ ಎಂದು ಕೇಲವರು ಹೇಳಿದ್ದಾರೆ.
ತಪ್ಪು ಅವರದಲ್ಲ... pic.twitter.com/xOFXgHPILo
— Ice Candy ಗೋಪಾಲ (@IceCandyGopalaa) March 2, 2025
ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?
ಬೆಂಗಳೂರು ಅಧಿಕೃತ ಭಾಷೆ ಕನ್ನಡ ಎಂದೂ ಎಲ್ಲಿಯೂ ಉಲ್ಲೇಖಿಸದ ಈ ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಮಿಶ್ರ ಪ್ರತಿಕ್ರಿಯೆ ಹುಟ್ಟುಹಾಕಿದೆ. ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿರುವ ಈ ವಿಡಿಯೋ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ''ಕನ್ನಡಿಗರು ತಮಿಳು, ತೆಲುಗು ಮತ್ತು ಹಿಂದಿ ಕಲಿತು ಬೇರೆಯವರನ್ನು ಗೌರವಿಸುತ್ತಾರೆ. ಅದರೆ ಅನ್ಯಭಾಷಿಗರು ಮಾತ್ರ ಈ ನೆಲವನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಅಲ್ಪಸಂಖ್ಯಾತರದ್ದೆ ಇಲ್ಲ ಹೆಚ್ಚು ಪ್ರಾಬಲ್ಯಗೊಳ್ಳುತ್ತಿದ್ದಾರೆ ಎಂದನಿಸುತ್ತದೆ. ಈ ವಿಡಿಯೋದಿಂದ ಕನ್ನಡಕ್ಕೆ ಮತ್ತೆ ಅವಮಾನವಾಗಿದೆ ಎಂದು ಅವರು ಬೇಸರ ಹೊರ ಹಾಕಿದ್ದಾರೆ.
ಬಹುತೇಕ ಮಂದಿಯು 'ಹಿಂದಿ' ರಾಷ್ಟ್ರೀಯ ಭಾಷೆ ಎಂಬ ಕಲ್ಪನೆಯಲ್ಲಿದ್ದಾರೆ. ದಕ್ಷಿಣ ಭಾರತವನ್ನು ಹೆಚ್ಚಾಗಿ 'ಮದ್ರೋಸಿಸ್' (ತಮಿಳರು) ಅಥವಾ 'ಕಮ್ಯುನಿಸ್ಟರು' (ಮಲಯಾಳರು) ಎಂದು ಗುರುತಿಸಲಾಗಿದೆ. ತೆಲುಗು ನಾಡು ಸಹ ಸಿನಿಮಾಗಳಿಂದ ಜನಪ್ರಿಯತೆ ಪಡೆದಿದೆ. ಆದರೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡಕ್ಕೆ ಮನ್ನಣೆ ಸಿಗುತ್ತಲೇ ಇಲ್ಲ ಎಂದಿದ್ದಾರೆ.
ಈ ವಿಡಿಯೋ ನೋಡಿದವ ಕನ್ನಡಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. " ಕನ್ನಡಕ್ಕೆ ಆದ, ಆಗುವ ಹಾನಿ ಸರಿಪಡಿಸಲಾಗದು. ಪ್ರಸ್ತುತ ಪೀಳಿಗೆ ನಾವು ತಲುಪುವುದು ಅಸಾಧ್ಯ. ಭಾಷೆಯನ್ನು ಸಂರಕ್ಷಿಸಲು ಹೆಮ್ಮೆಯ ಕನ್ನಡಿಗರ ಹೊಸ ಪೀಳಿಗೆಯನ್ನು ಸೃಷ್ಟಿಸುವತ್ತ ನಾವು ಶ್ರಮಿಸಬೇಕಿದೆ ಮತ್ತೊಬ್ಬರು ಹೇಳಿದ್ದಾರೆ.
ಭಾರತದಂತಹ ದೇಶಗಳಲ್ಲಿ ಕನ್ನಡ, ಕರ್ನಾಟಕ ಕಡಿಮೆ ಗುರುತಿಸಲ್ಪಟ್ಟಿದೆ. ಉತ್ತರ ಭಾರತದವರಂತೆ ದಕ್ಷಿಣ ಭಾರತದಲ್ಲಿಯೂ ಅನೇಕರಿಗೆ ಕನ್ನಡ ಬಗ್ಗೆ ಗೊತ್ತಿಲ್ಲ, ಕನ್ನಡ ಬಗ್ಗೆ ಅತಿ ಕಡಿಮೆ ಜ್ಞಾನ ಹೊಂದಿದ್ದಾರೆ. ಅನೇಕ ರಾಜ್ಯಗಳಿ ಜನರಿಗೆ ಕನ್ನಡ, ಕನ್ನಡಿಗರ ಬಗ್ಗೆ, ಈ ನೆಲದ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ.












Click it and Unblock the Notifications