ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕ್ಟೋರಿಯಾ ಆಸ್ಪತ್ರೆಗೆ ಡಿಕೆ ಶಿವಕುಮಾರ್ ದಿಢೀರ್ ಭೇಟಿ

By Nayana
|
Google Oneindia Kannada News

Recommended Video

ವಿಕ್ಟೋರಿಯಾ ಆಸ್ಪತ್ರೆಗೆ ಧಿಡೀರ್ ಭೇಟಿ ಕೊಟ್ಟ ಡಿ ಕೆ ಶಿವಕುಮಾರ್ | Oneindia kannda

ಬೆಂಗಳೂರು, ಜೂನ್ 15: ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ನಂತರ ರಕ್ತದೊತ್ತಡ ಪರೀಕ್ಷೆ ಮಾಡಿಕೊಂಡರು.

ಸಂದರ್ಭದಲ್ಲಿ ಗ್ಯಾಂಗ್ರಿನ್ ಆದ ರೋಗಿಯ ಚಿಕಿತ್ಸೆಗೆ ವೈದ್ಯರು ಮೂರು ಲಕ್ಷ ಕೇಳುತ್ತಿರುವ ವಿಚಾರವನ್ನು ಸಚಿವರ ಬಳಿ ಮಹಿಳೆ ತಮ್ಮ ಅಳಲನ್ನು ತೋಡಿಕೊಂಡರು, ದಿನಕ್ಕೆ ಮೂವತ್ತು ರೂಪಾಯಿ ಬದಲಿಗೆ ಮೂರು ಲಕ್ಷ ರೂ. ಕೇಳಲು ಹೇಗೆ ಸಾಧ್ಯ ಎಂದು ಆಶ್ಚರ್ಯ ಪಟ್ಟರು.

ಯಾವುದೇ ಖಾತೆ ನಿರೀಕ್ಷಿಸಬೇಡಿ: ಡಿಕೆಶಿಗೆ ಸ್ವಾಮೀಜಿ ಸಲಹೆ ಯಾವುದೇ ಖಾತೆ ನಿರೀಕ್ಷಿಸಬೇಡಿ: ಡಿಕೆಶಿಗೆ ಸ್ವಾಮೀಜಿ ಸಲಹೆ

ಬೆಳಗ್ಗೆ 9.30ಕ್ಕೆ ಕರ್ತವ್ಯಕ್ಕೆ ಬರಬೇಕಿದ್ದ ನೋಡಲ್ ಅಧಿಕಾರಿ ಹಸೀನಾ ಬಾನು ಸಚಿವರ ಭೇಟಿ ವಿಚಾರ ತಿಳಿದು 11 ಗಂಟೆಗೆ ಕಚೇರಿಗೆ ಓಡಿಬಂದ ಘಟನೆಯೂ ಸಚಿವರೆದುರು ನಡೆಯಿತು.

Surprise visit was shocking to minister DK Shivakumar

ನಾನಿಲ್ಲಿ ತಪ್ಪು ಕಂಡುಹಿಡಿಯಲು ಬಂದಿಲ್ಲ, ಪಾಸಿಟಿವ್ ನೋಟ್‌ನಲ್ಲಿ ಬಂದಿದ್ದೇನೆ, ತಪ್ಪು ಕಂಡು ಹಿಡಿದು ಸರಿಪಡಿಸಲು ಬೇರೆ ವ್ಯಕ್ತಿಗಳನ್ನು ನೇಮಕ ಮಾಡುತ್ತೇನೆ. ಆದರೆ ಇಲ್ಲಿ ರೋಗಿಗಳ ನೋಂದಣಿ ಪ್ರಕ್ರಿಯೆಯಲ್ಲೇ ಗೊಂದಲಿವೆ.

ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರದ ವಿವಿಧ ಆರೋಗ್ಯ ಸೇವೆಗಳ ಯೋಜನೆ ಜಾರಿ ಕುರಿತು ಗೊಂದಲಗಳಿವೆ ಇದಕ್ಕೆ ಮೂರ್ನಾಲ್ಕು ದಿನದೊಳಗೆ ನಿವಾರಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.

Surprise visit was shocking to minister DK Shivakumar

ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಳಪಡುವ ಆಸ್ಪತ್ರೆಗಳಲ್ಲಿ ಕೇಂದ್ರೀಕೃತ ರೀಗಿಗಳ ನೋಂದಣಿ ಹಾಗೂ ಬಿಲ್ಲಿಂಗ್ ಘಟಕ ಆರಂಭಿಸಬೇಕೆಂದು ಆದೇಶಿಸಲಾಗಿದೆ, 75 ದಿನಗಳಲ್ಲಿ ಆದೇಶ ಜಾರಿಗೆ ಬರಬೇಕು. ವಿಕ್ಟೋರಿಯಾ ಆಸ್ಪತ್ರೆ ವಾರ್ಡ್ ಗಳನ್ನು ಲಾಡ್ಜ್ ಗಳ ರೂಪದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರುಗಳು ಬಂದಿವೆ.ಯಾವುದೇ ಕಾರಣಕ್ಕೆ ರೋಗಿಗಳ ಸೇವೆಗಲ್ಲದೆ ಬೇರೆ ಕಾರಣಕ್ಕೆ ಆಸ್ಪತ್ರೆ ದುರ್ಬಳಕೆ ಮಾಡಿದ್ರೆ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.

English summary
Medical education minister DK Shivakumar was shocked during his surprise visit to victoria hospital as there was problem with outpatient registartion itself before treatment process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X