ತೊಗಾಡಿಯಾ ಓಟಕ್ಕೆ ಬ್ರೇಕ್: ಬೆಂಕಿಗೆ ತುಪ್ಪ ಸುರಿಯಿತೇ ಸರಕಾರ?

ಕೋಟ್ಯಾಂತರ ಸದಸ್ಯರನ್ನು ಹೊಂದಿರುವ ಮತ್ತು ಶಿಸ್ತಿಗೆ ಹೆಸರಾಗಿರುವ RSS ಸಹ ಸಂಘಟನೆ ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಬೆಂಗಳೂರು ಪ್ರವೇಶ ನಿರ್ಬಂಧ ರಾಜಕೀಯ ಬಣ್ಣ ಪಡೆಯಲಾರಂಭಿಸಿದೆ.

ಹಿಂದೂ ಪರ ಸಂಘಟನೆಗಳು ತೊಗಾಡಿಯಾ ಅವರನ್ನು ಬೆಂಗಳೂರಿಗೆ ಕರೆದು ತಂದೇ ತರುತ್ತೇವೆ ಎಂದು ಗೃಹ ಸಚಿವಾಲಯಕ್ಕೆ ಚಾಲೆಂಜ್ ಮಾಡಿದ್ದರೆ, ಬಿಜೆಪಿ ಮುಖಂಡರು ಸರಕಾರದ ವಿರುದ್ದ ಅಸೆಂಬ್ಲಿಯೊಳಗೆ ಮತ್ತು ಹೊರಗೆ ಹರಿಯಾಯ್ದಿದ್ದಾರೆ. (ದ್ವೇಷ ಬಿತ್ತುವ ಹೇಳಿಕೆ ನೀಡಿಲ್ಲ)

ಫೆಬ್ರವರಿ ಎಂಟರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಪ್ರವೀಣ್ ತೊಗಾಡಿಯಾ ಭಾಗವಹಿಸುವ ಕಾರ್ಯಕ್ರಮವಿತ್ತು. ಸಿದ್ದಗಂಗಾ, ಪೇಜಾವರ, ಆದಿಚುಂಚನಗಿರಿ ಶ್ರೀ, ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಆದರೆ, ಫೆಬ್ರವರಿ ಐದರಿಂದ ಹತ್ತರವರೆಗೆ ತೊಗಾಡಿಯಾ ಬೆಂಗಳೂರು ಪ್ರವೇಶಕ್ಕೆ ಅವಕಾಶ ನೀಡದೇ, ಪ್ರವೇಶ ನಿರ್ಬಂಧಿಸಿ ಪೊಲೀಸ್ ಇಲಾಖೆ ನೋಟೀಸ್ ಹೊರಡಿಸಿರುವುದು ಬಹುಸಂಖ್ಯಾತ ಸಮುದಾಯದ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಧರ್ಮೋ ರಕ್ಷತಿ ರಕ್ಷಿತ: ಎನ್ನುವ ಧ್ಯೇಯ ವ್ಯಾಕ್ಯದಡಿಯಲಿ ವಿಶ್ವ ಹಿಂದೂ ಪರಿಷತ್ತಿನ ಸ್ವರ್ಣ ಮಹೋತ್ಸವ ಸಮಾರಂಭವನ್ನು, ಸಂಘಟನೆ ದೇಶದ ಏಳು ಪ್ರಮುಖ ನಗರಗಳಲ್ಲಿ ಆಯೋಜಿಸಿದೆ. ಅದರಂತೆ ಬೆಂಗಳೂರಿನಲ್ಲೂ ಕಾರ್ಯಕ್ರಮವನ್ನೂ ಇದೇ ಬರುವ ಭಾನುವಾರ (ಫೆ 8) ಆಯೋಜಿಸಲಾಗಿದೆ. (ಕ್ರಿಸ್ಮಸ್ ಹಬ್ಬದಂದು ಕ್ರೈಸ್ತ ಮಿಷನರಿಗಳಿಗೆ ಸಡ್ಡು)

ಪೊಲೀಸ್ ನಿರ್ಬಂಧದ ಬಗ್ಗೆ ಸಿಎಂ ಹಾರಿಕೆಯ ಉತ್ತರ, ಓವೈಸಿ ಬೆಂಗಳೂರು ಪ್ರವೇಶ ನಿರ್ಬಂಧ, ಮುಂದೆ ಓದಿ

ನೇರ ಮಾತಿನ ತೊಗಾಡಿಯಾ

ನೇರ ಮಾತಿನ ತೊಗಾಡಿಯಾ

ನೇರ, ಖಡಕ್ ಮಾತಿನಿಂದ ಹಿಂದೂ ವಿರೋಧಿಗಳನ್ನು ಬೆಂಡೆತ್ತುವ ತೊಗಾಡಿಯಾ ಅವರ ಭಾಷಣವೆಂದರೆ ಜನರಲ್ಲಿ ಸಂಚಲನ ಮೂಡಿಸುವುರ ಜೊತೆಗೆ, ಹಲವು ವಿವಾದವೂ ಜೊತೆಗೆ ಸಾಗುತ್ತದೆ. ಅಪ್ರತಿಮ ಸಂಘಟನಾಕಾರ ಮತ್ತು ವಾಕ್ಪಟುವಾಗಿರುವ ತೊಗಾಡಿಯಾ, ಇತ್ತೀಚಿನ ದಿನಗಳಲ್ಲಿ ವಿಎಚ್ಪಿ ಸಂಘಟನೆಯ ಕಾರ್ಯಶೈಲಿಯನ್ನೇ ಬದಲಿಸಿದವರು.

ಸ್ವರ್ಣ ಮಹೋತ್ಸವ ಸಮಾರಂಭ

ಸ್ವರ್ಣ ಮಹೋತ್ಸವ ಸಮಾರಂಭ

29.08.1964ರ ಶ್ರೀಕೃಷ್ಣ ಜನ್ಮಾಷ್ಠಮಿಯಂದು ಜನ್ಮ ತಾಳಿದ ವಿಶ್ವ ಹಿಂದೂ ಪರಿಷತ್ ಸಂಘಟನೆ ತನ್ನ ಐವತ್ತನೇ ವರ್ಷಾಚಾರಣೆಯಯನ್ನು ರಕ್ತದಾನ, ಪುಸ್ತಕ ವಿತರಣೆ, ಶೋಭಾಯಾತ್ರೆ, ಹಿಂದೂ ಸಮಾವೇಶಗಳ ಮೂಲಕ ಆಚರಿಸಿಕೊಳ್ಳುತ್ತಿದೆ. ಒಂದು ವರ್ಷದ ಈ ಕಾರ್ಯಕ್ರಮದಡಿಯಲಿ ವಿಎಚ್ಪಿಯ ಈ ಕಾರ್ಯಕ್ರಮಗಳಿಗೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ.

ಘರ್ ವಾಪಸಿ, ಲವ್ ಜಿಹಾದ್

ಘರ್ ವಾಪಸಿ, ಲವ್ ಜಿಹಾದ್

ಸ್ವರ್ಣ ಜಯಂತಿ ಸಮಾರಂಭದ ಜೊತೆ ವಿಎಚ್ಪಿ 'ಘರ್ ವಾಪ್ಸಿ' ಮತ್ತು 'ಲವ್ ಜಿಹಾದ್' ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿವಾದಕ್ಕೆ ಮೂಲ ಕಾರಣವಾಗಿರುವುದು. ಸಂಘಟನೆಯ ಘರ್ ವಾಪ್ಸಿ ಕಾರ್ಯಕ್ರಮಕ್ಕೆ ಕಳೆದ ಸಂಸತ್ತಿನ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ದ ತಿರುಗಿ ಬಿದ್ದಿದ್ದವು.

ಕೇಂದ್ರ ಸರಕಾರಕ್ಕೆ ಮುಜುಗರ

ಕೇಂದ್ರ ಸರಕಾರಕ್ಕೆ ಮುಜುಗರ

ಸಂಘಟನೆಯ ಘರ್ ವಾಪ್ಸಿ ಕಾರ್ಯಕ್ರಮ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿಗೆ ತೀವ್ರ ಮುಜುಗರವನ್ನು ತಂದೊಡ್ಡಿತ್ತು. ಬಿಜೆಪಿ ಎಚ್ಚರಿಕೆ ನಡೆವೆಯೂ ಈ ಕಾರ್ಯಕ್ರಮ ನಿರಾಂತಕವಾಗಿ ಸಾಗುತ್ತಿದೆ. ಭಾನುವಾರ (ಫೆ 8) ನಡೆಯಲಿರುವ ಹಿಂದೂ ಸಮಾವೇಶದ ನಂತರ ಕರ್ನಾಟಕದಲ್ಲೂ ಘರ್ ವಾಪ್ಸಿ ಕಾರ್ಯಕ್ರಮವನ್ನು ಸಂಘಟನೆ ಅಯೋಜಿಸಲು ನಿರ್ಧರಿಸಿದೆ. ಕಳೆದ ಭಾನುವಾರ (ಫೆ1) ಗುಲ್ಬರ್ಗದಲ್ಲಿ ಸುಮಾರು 471 ಕುಟುಂಬಗಳಲ್ಲಿ ಘರ್ ವಾಪ್ಸಿ ನಡೆಸಲಾಗಿದೆ ಎಂದು ವಿಎಚ್ಪಿ ಹೇಳಿಕೊಂಡಿದೆ.

ಸಿದ್ದು ಏನಂತಾರೆ

ಸಿದ್ದು ಏನಂತಾರೆ

ತೊಗಾಡಿಯಾ ನಿರ್ಬಂಧದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಹಾರಿಕೆಯ ಉತ್ತರವನ್ನು ನೀಡಿದ್ದಾರೆ. ಈ ಬಗ್ಗೆ ನನಗೆ ಮಾಹಿತಿಯಿಲ್ಲ, ಪೊಲೀಸರ ಬಳಿ ಮಾತನಾಡಿ ಆಮೇಲೆ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆಂದಿದ್ದಾರೆ.

ಖಾಕಿ ಆಕ್ಷೇಪಕ್ಕೆ ಭಜರಂಗದಳ ಆಕ್ರೋಶ

ಖಾಕಿ ಆಕ್ಷೇಪಕ್ಕೆ ಭಜರಂಗದಳ ಆಕ್ರೋಶ

ಪೊಲೀಸರ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಭಜರಂಗದಳ ರಾಜ್ಯ ಘಟಕದ ಸೂರ್ಯನಾರಾಯಣ ರಾವ್, ತೊಗಾಡಿಯಾ ಅವರನ್ನು ನಾವು ಬೆಂಗಳೂರಿಗೆ ಕರೆದು ತರುತ್ತೇವೆ. ಪೊಲೀಸರ ಕ್ರಮದ ವಿರುದ್ದ ಈಗಾಗಲೇ ಕೋರ್ಟ್ ಮೆಟ್ಟಲೇರಿದ್ದೇವೆ. ನ್ಯಾಯಾಲಯದಿಂದ ನಮಗೆ ನ್ಯಾಯ ಸಿಗಲಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆ ಕೂಡಾ ಸರಕಾರ (ಎಸ್ ಎಂ ಕೃಷ್ಣ ಸರಕಾರ) ತೊಗಾಡಿಯಾಗೆ ನಿರ್ಬಂಧ ಹೇರಿತ್ತು. ಆದರೆ ಕೋರ್ಟ್ ಸರಕಾರದ ಕ್ರಮಕ್ಕೆ ತಡೆಯೊಡ್ದಿತ್ತು. ರಾಜ್ಯ ಭಜರಂಗದಳ ಘಟಕ ಬೆಂಗಳೂರಿನ ಟೌನ್ ಹಾಲ್ ವೃತ್ತದಲ್ಲಿ ಬುಧವಾರ (ಫೆ 4) ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಿದೆ.

ಓವೈಸಿಗೂ ನಿರ್ಭಂದ ಹೇರಿದ್ದೇವೆ

ಓವೈಸಿಗೂ ನಿರ್ಭಂದ ಹೇರಿದ್ದೇವೆ

ವಿಎಚ್ಪಿ ಕಾರ್ಯಕ್ರಮವೆಂದರೆ ಅಲ್ಲಿ ಗೊಂದಲವಿರುತ್ತದೆ. ಅದಕ್ಕೆ ಪೂರಕವಾದ ಉದಾಹರಣೆಗಳೂ ನಮ್ಮಲ್ಲಿವೆ. ಇದರಲ್ಲಿ ರಾಜಕೀಯ ಏನೂ ಇಲ್ಲ, ಓವೈಸಿ ಸಭೆಗೂ ನಾವು ಅನುಮತಿ ನೀಡಿಲ್ಲ ಎಂದು ನಗರ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಇಲಾಖೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+