ಕಂಬದ ಮೇಲೊಂದು ಗಿಡವ ನೆಟ್ಟು.. ಏನಿದು 'ವರ್ಟಿಕಲ್ ಗಾರ್ಡನ್'?
ಬೆಂಗಳೂರು, ಮಾರ್ಚ್ 21: ಸಾಮಾನ್ಯವಾಗಿ ನೆಲದ ಮೇಲೆ ಉದ್ಯಾನಗಳನ್ನು ನಿರ್ಮಿಸುವುದು ರೂಢಿ. ಆದರೆ ಕಂಬದ ಅಂಚುಗಳಲ್ಲಿ ಗಿಡ ನೆಡುವುದನ್ನು ಎಂದಾದರೂ ನೋಡಿದ್ದೀರಾ?
ಇಲ್ಲಾ ಅಲ್ವಾ? ಈ ರೀತಿ ಕಂಬಗಳ ಸುತ್ತಾ ಗಿಡಗಳನ್ನು ನೆಡುವುದಕ್ಕೆ ವರ್ಟಿಕಲ್ ಗಾರ್ಡನ್ ಎಂದು ಕರೆಯುತ್ತಾರೆ. ಭೂಮಿಗೆ ಲಂಬವಾಗಿ ಕಂಬಗಳ ಸುತ್ತಾ ಇದನ್ನು ಬೆಳೆಯುತ್ತಾರೆ. ವಿದೇಶಗಳಲ್ಲಿ ಇದೆಲ್ಲಾ ಸಾಮಾನ್ಯವಾದರೂ ಭಾರತೀಯರು ಅದರಲ್ಲೂ ಬೆಂಗಳೂರಿಗರ ಪಾಲಿಗೆ ಈ ವರ್ಟಿಕಲ್ ಗಾರ್ಡನ್ ಹೊಸದು.[ವಸತಿ ಪ್ರದೇಶ ವಾಣಿಜ್ಯೀಕರಣ, ಎಚ್ಎಎಲ್ ನಿವಾಸಿಗಳಿಂದ ಮತ್ತೆ ಪ್ರತಿಭಟನೆ]
ಹಾಗಂಥ ವರ್ಟಿಕಲ್ ಗಾರ್ಡನ್ ಸುಮ್ಮನೆ ಖುಷಿಗೆ, ವಿಚಿತ್ರವಾಗಿ ಗಿಡ ನೆಡಬೇಕು ಎನ್ನುವ ಹುಚ್ಚಿಗೆ ಮಾಡುವುದೂ ಅಲ್ಲ. ವರ್ಟಿಕಲ್ ಗಾರ್ಡನ್ ನಿರ್ಮಿಸುವುದರಿಂದ ಹಲವಾರು ಲಾಭಗಳು, ಉಪಯೋಗಗಳಿವೆ. ಈ ಕಾರಣಕ್ಕೆ ವರ್ಟಿಕಲ್ ಗಾರ್ಡನನ್ನು ನಿರ್ಮಿಸಲಾಗುತ್ತದೆ. ಉದ್ಯಾನ ನಗರಿಯ ಈ ವರ್ಟಿಕಲ್ ಗಾರ್ಡನ್ ಕಥೆ ಇಲ್ಲಿದೆ.[ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-1]

ಎಲ್ಲಿದೆ?
ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಈ ವರ್ಟಿಕಲ್ ಗಾರ್ಡನ್ ಕಾಣಬಹುದು. ಇಲ್ಲಿನ ಫ್ಲೈ ಓವರ್ ನ ಒಂದು ಕಂಬದ ಮೇಲೆ ವರ್ಟಿಕಲ್ ಗಾರ್ಡನ್ ನಿರ್ಮಿಸಲಾಗಿದೆ. ಕಳೆದ ಶುಕ್ರವಾರ ಈ ವರ್ಟಿಕಲ್ ಗಾರ್ಡನನ್ನು ಸೇಟ್ರೀಸ್ (SayTrees) ಎನ್ನುವ ಸರಕಾರೇತರ ಸಂಸ್ಥೆಯೊಂದು ಪ್ರತಿಷ್ಠಾಪಿಸಿದೆ.[ಬಿಡಿಎ ಸೈಟು, ನಲ್ಲಿಯಲ್ಲಿ ನೀರು, ಬಿಟಿಎಂಸಿ ಬಸ್ ಬಜೆಟ್ ನಲ್ಲಿ ಗಿಟ್ಟಿದ್ದೇನು?]

ಸೇಟ್ರೀಸ್
ಸೇಟ್ರೀಸ್ ಪರಿಸರ ರಕ್ಷಣೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಸರಕಾರೇತರ ಸಂಸ್ಥೆಯಾಗಿದೆ. "ಹಲವು ವರ್ಷಗಳಿಂದ ನಾವು ಗಿಡಗಳನ್ನು ನೆಡುತ್ತಾ ಬಂದಿದ್ದೇವೆ. ಈ ಬಾರಿ ನಗರದ ಕೇಂದ್ರ ಭಾಗದಲ್ಲಿ ಹಸಿರನ್ನು ಹೆಚ್ಚಿಸಲು ಮುಂದಾಗಿದ್ದೇವೆ ಎಂದು 'ದಿ ನ್ಯೂಸ್ ಮಿನಿಟ್' ಗೆ ಸೀಟ್ರೀಸ್ ನ ದುರ್ಗೇಶ್ ಅಗ್ರಹಾರಿ ಪ್ರತಿಕ್ರಿಯೆ ನೀಡಿದ್ದಾರೆ.

ವರ್ಟಿಕಲ್ ಗಾರ್ಡನ್ ವೈಶಿಷ್ಠ್ಯ
ಹೊಸೂರು ರಸ್ತೆಯಲ್ಲಿರುವ ಈ ವರ್ಟಿಕಲ್ ಗಾರ್ಡನ್ ನಲ್ಲಿ ಸುಮಾರು 3500 ಗಿಡಗಳಿವೆ. ಇದರಲ್ಲಿ 10 ಬೇರೆ ಬೇರೆ ತಳಿಯ ಗಿಡಗಳೂ ಇವೆ. ಈ ಗಿಡಗಳಿಂದ ಪರಿಸರಕ್ಕೆ ಬೇರ ಬೇರೆ ರೀತಿಯ ಉಪಯೋಗಗಳಿವೆ. ಇದರಲ್ಲಿ ಕೆಲವು ಗಿಡಗಳು ವಾತಾವರಣದ ಉಷ್ಣಾಂಶವನ್ನು ಕಡಿಮೆ ಮಾಡುವ ಗುಣ ಹೊಂದಿವೆ. ಇನ್ನು ಕೆಲವು ಗಿಡಗಳು ವಾತಾವರಣದಲ್ಲಿರುವ ಕಲುಷಿತ ಅಂಶವನ್ನು ಹೀರಿಕೊಳ್ಳುವ ಕೆಲಸ ನಿರ್ವಹಿಸುತ್ತವೆ.

ನಿರ್ವಹಣೆ ಹೇಗೆ?
ಸದ್ಯ ಈ ವರ್ಟಿಕಲ್ ಗಾರ್ಡನನ್ನು ಸೇಟ್ರೀಸ್ ಸಂಸ್ಥೆಯೇ ನಿರ್ವಹಣೆ ಮಾಡುತ್ತದೆ. ಗಿಡಗಳ ನೀರುಣಿಸಲು ಅಟೋಮ್ಯಾಟಿಕ್ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ನಿರ್ವಹಣೆಯನ್ನು ಈ ಸ್ವಯಂ ಚಾಲಿತ ವ್ಯವಸ್ಥೆಯೇ ಮಾಡುತ್ತದೆ. ಇನ್ನು ಈ ಗಿಡಗಳಿಗೆ ಬೇಕಾದ ನೀರೂ ತುಂಬಾ ಕಡಿಮೆ. ಪ್ರತಿ ಗಿಡಕ್ಕೆ ದಿನಕ್ಕೆ 100 ಎಂಎಲ್ ನೀರು ಸಾಕಾಗುತ್ತದೆ.

ರಾಸಾಯನಿಕ ಮುಕ್ತ
ಇಡೀ ಗಾರ್ಡನ್ ರಾಸಾಯನಿಕ ಮುಕ್ತವಾಗಿದೆ. ಕೋಳಿ ಗೊಬ್ಬರ, ಸೆಗಣಿ ಮತ್ತು ಗಂಜಳ ಬೆರೆಸಿದ ಮಣ್ಣನ್ನು ಈ ಗಿಡ ಬೆಳೆಯಲು ಬಳಸಲಾಗಿದೆ.
ಮುಂದಿನ ದಿನಗಳಲ್ಲಿ ಹೊಸೂರು ರಸ್ತೆಯ 9 ಕಿಲೋಮೀಟರ್ ಫ್ಲೈ ಓವರಿನ ಎಲ್ಲಾ ಪಿಲ್ಲರುಗಳ ಮೇಲೆ ಈ ರೀತಿಯ ವರ್ಟಿಕಲ್ ಗಾರ್ಡನ್ ಸ್ಥಾಪಿಸಲು ಸಂಸ್ಥೆ ಆಲೋಚಿಸಿದೆ. ಜತೆಗೆ ಬೆಂಗಳೂರಿನ ಇತರ ರಸ್ತೆಗಳ ಪಿಲ್ಲರುಗಳು ಹಾಗೂ ಇತರ ನಗರಗಳಿಗೂ ಇದನ್ನು ವಿಸ್ತರಣೆ ಮಾಡುವುದು ಸೇಟ್ರೀಸ್ ಯೋಜನೆಯಾಗಿದೆ.

ಲಾಭಗಳು
ಈ ವರ್ಟಿಕಲ್ ಗಾರ್ಡನಿನ ಪ್ರಮುಖ ಲಾಭವೆಂದರೆ ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚಿನ ಗಿಡಗಳನ್ನು ಬೆಳೆಯಬಹುದು. ನಗರ ಪ್ರದೇಶಗಳು ಹೆಚ್ಚಿನ ವಾಯು ಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿವೆ. ಜತೆಗೆ ನಗರಗಳಲ್ಲಿ ಸ್ಥಳಾವಕಾಶವು ಕಡಿಮೆ. ಇಂಥಹ ಸಂದರ್ಭದಲ್ಲಿ ವರ್ಟಿಕಲ್ ಗಾರ್ಡನ್ ಸಹಾಯ ಮಾಡಲಿದೆ.
ನಗರದ ಉಷ್ಣಾಂಶ ಕಡಿಮೆ ಮಾಡಲು ಮತ್ತು ಗಾಳಿಯಲ್ಲಿರುವ ಧೂಳಿನ ಕಣಗಳನ್ನು ಹೀರಿಕೊಳ್ಳಲು ಈ ವರ್ಟಿಕಲ್ ಗಾರ್ಡನ್ ಗಳು ಸಹಾಯ ಮಾಡಲಿವೆ.
-
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ










Click it and Unblock the Notifications