ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಸ್ಥಿರತೆ ಕಾಯ್ದುಕೊಂಡ ತರಕಾರಿ ಬೆಲೆ

|
Google Oneindia Kannada News

ಬೆಂಗಳೂರು, ಮೇ 30: ನಗರದಲ್ಲಿ ತರಕಾರಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಅಧಿಕ ಪ್ರಮಾಣದಲ್ಲಿ ತರಕಾರಿ, ಹಣ್ಣು ಪೂರೈಕೆಯಾಗುತ್ತಿದೆ.

Recommended Video

ಕೊರೊನ ಶಂಕಿತರ ರಕ್ತದ ಸ್ಯಾಂಪಲ್ ಕದ್ದೊಯ್ದ ಕೋತಿಗಳು | Oneindia Kannada

ನಗರದ ಮಾರುಕಟ್ಟೆಯಲ್ಲಿ ತರಕಾರಿ ಹಣ್ಣುಗಳ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ಕಳೆದ ಕೆಲ ದಿನಗಳಲ್ಲಿ ಕೆಲವೊಂದು ತರಕಾರಿಗಳ ಬೆಲೆಯಲ್ಲಿ ಹೆಚ್ಚಳ ಕಂಡಿದ್ದರೂ ಈಗ ಬೆಲೆ ಇಳಿದಿದೆ.

ಲಾಕ್ಡೌನ್ ಸಡಿಲಿಕೆ: ಗಗನಕ್ಕೇರಿದ ಹಣ್ಣು ತರಕಾರಿ ಬೆಲೆ!ಲಾಕ್ಡೌನ್ ಸಡಿಲಿಕೆ: ಗಗನಕ್ಕೇರಿದ ಹಣ್ಣು ತರಕಾರಿ ಬೆಲೆ!

ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ವ್ಯಾಪಾರಕ್ಕೆ ತೊಡಕಾಗಿದೆ. ಲಾಕ್‌ಡೌನ್ ಸಡಿಲಿಕೆ ನಂತರ ವ್ಯಾಪಾರ ವಹಿವಾಟು ಉತ್ತಮವಾಗಿದೆ. ಇದೇ ರೀತಿ ಮಳೆ ಸುರಿಯುತ್ತಿದ್ದಲ್ಲಿ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

Vegetable Prices Are Stable In Bengaluru

ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ, ಹಣ್ಣುಗಳ ಪೂರೈಕೆಯಾಗುತ್ತಿದೆ. ಇದರಿಂದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ ಚಿಲ್ಲರೆ ಮಾರುಕಟ್ಟೆಯ ಕೆಲ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಬಾರಿ ತರಕಾರಿ ಉತ್ಪಾದನೆ ಉತ್ತಮವಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜಾಗುತ್ತಿದೆ.

ರಂಜಾನ್ ಸಂದರ್ಭದಲ್ಲಿ 120 ರೂ.ಗೆ ಏರಿಕೆಯಾಗಿದ್ದ ಕೊತ್ತಂಬರಿ ಸೊಪ್ಪು ಇದೀಗ ರೂ.ಗೆ ಇಳಿದಿದೆ. ಫಾರಂ ಕೊತ್ತಂಬರಿ ಒಂದು ಕಟ್ಟು 20 ರೂ. ನಾಟಿ ಕೊತ್ತಂಬರಿ 30ರೂ.ಗೆ ಮಾರಾಟವಾಗುತ್ತಿದೆ.

ಇನ್ನೂ ಕೆಲ ಪ್ರದೇಶದಲ್ಲಿ ಗ್ರಾಹಕರು ಬಂದು ಖರೀದಿಸಿದರೆ ಸಾಕು ಎಂಬ ಚಿಂತೆಯಲ್ಲಿ ವ್ಯಾಪಾರಿಗಳಿದ್ದಾರೆ. ತರಕಾರಿ ಬೆಲೆ ಹೇಗಿದೆ

ತರಕಾರಿಯಿಂದಲೂ ಹಬ್ಬುತ್ತಿದ್ಯಾ ಕೊರೊನಾ ಸೋಂಕು?ತರಕಾರಿಯಿಂದಲೂ ಹಬ್ಬುತ್ತಿದ್ಯಾ ಕೊರೊನಾ ಸೋಂಕು?

ಬೀನ್ಸ್‌-70 ರೂ., ಕ್ಯಾರೇಟ್, ಬೆಂಡೆ, ಬದನೆಕಾಯಿ, ಸೀಮೆ ಬದನೆಕಾಯಿ ಕೆಜಿಗೆ 30 ರೂ., ಹೀರೇಕಾಯಿ ಕೆಜಿಗೆ 60 ರೂ., ಮೆಣಸಿನಕಾಯಿ ಕೆಜಿಗೆ 40 ರೂ. , ಈರುಳ್ಳಿ ಕೆಜಿಗೆ 12-14 ರೂ., ಆಲೂಗಡ್ಡೆ ಕೆಜಿಗೆ 28 ರೂಗೆ ಮಾರಾಟವಾಗುತ್ತಿದೆ.

ಇನ್ನು ಹಾಪ್‌ಕಾಮ್ಸ್‌ನಲ್ಲಿ ಕ್ಯಾರೇಟ್ ಕೆಜಿಗೆ 36 ರೂ, ಹೀರೇಕಾಯಿ 58 ರೂ., ಹುರುಳಿಕಾಯಿ ಕೆಜಿಗೆ 73 ರೂ., ಬೆಳ್ಳುಳ್ಳಿ ಕೆಜಿಗೆ 115 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ತರಕಾರಿ ಬೆಲೆ ಸ್ಥುರವಾಗಿರಲಿದೆ ಜನರು ಆತಂಕಪಡಬೇಕಿಲ್ಲ.

English summary
Vegetable price stabilization in Bengaluru. There is an increasing supply of vegetables and fruits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X