ವರಮಹಾಲಕ್ಷ್ಮೀ ಹಬ್ಬದ ಹೆಸರಲ್ಲಿ ಗಗನಕ್ಕೇರಿದ ಹೂವು-ಹಣ್ಣಿನ ದರ
Recommended Video

ಬೆಂಗಳೂರು, ಆಗಸ್ಟ್ 23: ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನು ಒಂದು ದಿನ ಬಾಕಿ ಇದೆ, ನಗರದ ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ದರ ಗಗನಕ್ಕೇರಿದೆ. ಇನ್ನು ಸಾಲು ಸಾಲು ಹಬ್ಬಗಳು ಆಗಮಿಸುತ್ತವೆ, ಹಬ್ಬಗಳ ಸೀಸನ್ ಮುಗಿಯುವವರೆಗೂ ಬೆಲೆಗಳು ಕಡಿಮೆಯಾಗುವ ಮಾತೇ ಇಲ್ಲ.
ಹೂವು, ಹಣ್ಣುಗಳ ಪೂರೈಕೆ ಸಾಕಷ್ಟಿದ್ದರೂ ಹಬ್ಬಗಳ ನೆಪವೊಡ್ಡಿ ಬೆಲೆಯನ್ನು ಏರಿಕೆ ಮಾಡಲಾಗುತ್ತಿದೆ. ಹಬ್ಬಕ್ಕೆ ಬೇಕಾದ ಬಾಳೆಕಂಬ, ಮಾವಿನಸೊಪ್ಪು, ಕೇದಗೆ, ತಾವರೆ ಹೂವು, ಮಲ್ಲಿಗೆ ಸೇರಿದಂತೆ ಇತರೆ ಹೂವುಗಳ ಬೆಲೆ ಗಗನಕ್ಕೇರಿದೆ.
ವರಮಹಾಲಕ್ಷ್ಮೀ ಹಬ್ಬಕ್ಕೆ ಎಥೇಚ್ಛವಾಗಿ ಹೂವು, ಹಣ್ಣುಗಳ ಸರಬರಾಜು ಆಗುತ್ತಿದೆ. ಈ ವೇಳೆ ಬೀನ್ಸ್, ಟೊಮೆಟೊ, ಬಟಾಣಿ, ಸೊಪ್ಪು ಸೇರಿದಂತೆ ಕೆಲವು ತರಕಾರಿಗಳ ಬೆಲೆ ಕೊಂಚ ಇಳಿದಿದೆ.
ಹಾಪ್‌ಕಾಮ್ಸ್ ಮತ್ತು ಸಗಟು ದರದಲ್ಲಿ ಹಣ್ಣುಗಳ ಬೆಲೆ ಕೆಜಿಗೆ ಶೇ.20ರಷ್ಟು ಕಡಿಮೆಯಾಗಿದೆ. ಏಲಕ್ಕಿ ಬಾಳೆ ಕೆಜಿಗೆ 80-90, ಸೇಬು 140-180, ಸೀಬೇಕಾಯಿ 60ರೂ, ಅನಾನಸ್ ಒಂದು ಹಣ್ಣಿಗೆ 50 ರೂ. ಸೀತಾಫಲ ಕೆಜಿಗೆ 100-150ರೂ.ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಗುಲಾಬಿ ಹೂವು 160-200 ರೂ, ಸೇವಂತಿಗೆ 150-200, ಮಲ್ಲಿಗೆ 300-400ರೂ, ತಾವರೆ ಹೂವು80-100, ಚೆಂಡು ಹೂವು 40-50ರೂಗಳಿದೆ, ಕ್ಯಾರೇಟ್ ಮತ್ತು ಹಸಿಮೆಣಸಿನ ಕಾಯಿ ಮೆಲೆ ಏರಿಕೆಯಾಗಿದೆ ಕ್ಯಾರೇಟ್ ಕೆಜಿಗೆ 80 ರೂ ಹಾಗ ಹಸಿಮೆಣಸಿನಕಾಯಿ ಕೆಜಿಗೆ 58ರೂ. ಆಗಿದೆ.

ಲಕ್ಷ್ಮಿಗೆ ಪ್ರಿಯವಾದ ಮಲ್ಲಿಗೆ ಬೆಲೆ ಕೆಜಿಗೆ 1500
ವರಮಹಾಲಕ್ಷ್ಮೀ ಹಬ್ಬದ ಪ್ರಯಕ್ತ ಹೂವು, ಹಣ್ಣು ತರಕಾರಿಗಳ ಬೆಲೆ ಗಗನಕ್ಕೇರಿದೆ, ಮಲ್ಲಿಗೆ ಒಂದು ಮಾರಿಗೆ 200-250ರವರೆಗೂ ಮಾರಾಟವಾಗುತ್ತಿದೆ. ಕೆಜಿಗೆ ಒಂದೂವರೆ ಸಾವಿರ ರೂವರೆಗೆ ಮಾರಾಟ ಮಾಡಲಾಗುತ್ತಿದೆ, ಸೂಜಿಮಲ್ಲಿಗೆ, ದುಂಡುಮಲ್ಲಿಗೆ, ಮೈಸೂರು ಮಲ್ಲಿಗೆ ಹೀಗೆ ವಿವಿಧ ಬಗೆಯ ಮಲ್ಲಿಗೆ ಹೂಗಳಿಗೆ ಬೇರೆ ಬೇರೆ ದರವಿದೆ.

ಕಾಕಡಾ ಹೂವಿನ ಬೆಲೆ ಕೆಜಿಗೆ 500
ಕಾಕಡಾ ಹೂವಿನ ಬೆಲೆ 500ರೂ ತಲುಪಿದೆ, ಪರಿಮಳ ಬೀರುವ ಕೇದಿಗೆ ಒಂದು ದಿಂಡಿಗೆ 100-150 ರೂ.ಇದೆ. ಆದರೆ ಜನರ ಖರೀದಿಯ ಉತ್ಸಾಹ ಕಿಂಚಿತ್ತೂ ಕುಸಿದಿಲ್ಲ. ಶುಕ್ರವಾರದ ಹಬ್ಬಕ್ಕೆ ಸೋಮವಾರದಿಂದಲೇ ಖರೀದಿ ಆರಂಭವಾಗಿದೆ. ಲಕ್ಷ್ಮಿಯ ಅಲಂಕಾರಕ್ಕೆ ಯಥೇಚ್ಛವಾಗಿ ಹೂವು ಬಳಸುವುದರಿಂದ ಬುಧವಾರ ಕೆ.ಆರ್. ಮಾರುಕಟ್ಟೆಯಲ್ಲಿ ಸಗಟು ದರದಲ್ಲಿ ಖರೀದಿಸಲು ಜನ ನೆರೆದಿದ್ದರು.

ಯಾವ್ಯಾವ ಹಣ್ಣಿನ ದರ ಏರಿಕೆ?
ಹಣ್ಣಿನ ದರವೂ ಏರಿಕೆ ಲಕ್ಷ್ಮಿ ಹಬ್ಬಕ್ಕೆ ಹೂವು ಪ್ರಧಾನ ವಸ್ತುವಾದರೆ, ನಂತರದ ಆದ್ಯತೆ ಹಣ್ಣುಗಳಿಗೆ. ಹೀಗಾಗಿ ಹೂವು ದರ ಏರಿಕೆಯ ಜತೆಗೆ ಹಣ್ಣಿನ ದರವೂ ಏರಿಕೆಯಾಗಿದೆ. ದ್ರಾಕ್ಷಿ, ಸೇಬು, ಬಾಳೆಹಣ್ಣು, ಸೀಬೆ, ಸಪೋಟ, ಸೀತಾಫಲ ಹೀಗೆ ಎಲ್ಲಾ ಬಗೆಯ ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಕೆಆರ ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿಬಜಾರ್, ರಾಜಾಜಿನಗರ, ಚಾಮರಾಜಪೇಟೆ ಹೀಗೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಹೂವು-ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಯ ಭರಾಟೆ ಜೋರಾಗಿದೆ.

ತಮಿಳುನಾಡಿನಿಂದ ಹೂಗಳ ಸರಬರಾಜು
ಹಬ್ಬಕ್ಕೆ ಹೂವಿಗೆ ಹೆಚ್ಚು ಬೇಡಿಕೆಯಿರುವುದರಿಂದ ತಮಿಳುನಾಡಿನಿಂದ ನಗರದ ಕೆ.ಆರ್. ಮಾರುಕಟ್ಟೆಗೆ ಶೇ.75ರಷ್ಟು ಹೂವು ಬರುತ್ತಿದೆ. ಹೂವಿನ ಗುಣಮಟ್ಟ ಹಾಗೂ ಪ್ರಮಾಣದ ಮೇರೆಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ದರಗಳು ಕೊಂಚ ಏರಿಳಿಕೆಯಾಗುತ್ತವೆ.

ಹೂವಿನ ದರ ಸಗಟು ಮಾರಾಟ(ಕೆ.ಜಿ.ಗಳಲ್ಲಿ)
-ಕನಕಾಂಬರ1,500-2,000 ರೂ.
-ಮಲ್ಲಿಗೆ ಹೂವು 1500 ರೂ.
-ಕಣಿಗಲೆ 200 ರೂ.
-ಜಾಜಿ ಮಲ್ಲಿಗೆ550 ರೂ.
-ಮಳ್ಳೆ ಮಲ್ಲಿಗೆ 500 ರೂ.
-ಸೇವಂತಿಗೆ ಹೂವು200 ರಿಂದ 240 ರೂ.
-ಸುಕಂದರಾಜ್300 ರೂ.
-ಚೆಂಡು ಹೂವು100 ರೂ.
-ತಾವರೆ ಹೂವು ಒಂದಕ್ಕೆ ಚಿಕ್ಕದು 30 ರೂ. ದೊಡ್ಡದು 50 ರೂ.
-ಮೇಲ್ಪಟ್ಟು ಕೇದಗೆ -ಒಂದಕ್ಕೆ 50 ರೂ. ಮೇಲ್ಪಟ್ಟು
ಬಾಳೆಕಂಬ ಚಿಕ್ಕ ಜೋಡಿಗೆ 60 ರಿಂದ 80 ರೂ., ದೊಡ್ಡ 100 ರೂ. ಮೇಲ್ಪಟ್ಟು.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ












Click it and Unblock the Notifications