• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂತು 24 ವಿಮಾನ

|

ಬೆಂಗಳೂರು, ಮೇ 30 : ವಂದೇ ಭಾರತ್ ಮಿಷನ್ ಅಡಿ 24ನೇ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿಳಿದಿದೆ. ದೇಶಿಯ ವಿಮಾನ ಸೇವೆ ಆರಂಭವಾಗಿದ್ದರೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಇದುವರೆಗೂ ಆರಂಭವಾಗಿಲ್ಲ.

ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಶನಿವಾರ ಮಧ್ಯಾಹ್ನ 1.15ಕ್ಕೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನ ಆಗಮಿಸಿತು. 248 ಮಂದಿ ಅನಿವಾಸಿ ಭಾರತೀಯರು ಈ ವಿಮಾನದಲ್ಲಿದ್ದರು.

ದುಬ್ಲಿನ್‌ನಿಂದ ಬೆಂಗಳೂರಿಗೆ ಬಂದ 136 ಕನ್ನಡಿಗರು

ಮಾರ್ಚ್ 22ರ ಬಳಿಕ ಅಂತರರಾಷ್ಟ್ರೀಯ ವಿಮಾನ ಹಾರಾಟ ಸಂಪೂರ್ಣವಾಗಿ ರದ್ದುಗೊಂಡಿದೆ. ವಂದೇ ಭಾರತ್ ಮಿಷನ್ ಅಡಿ ಆಗಮಿಸುವ ವಿಮಾನ ಮತ್ತು ಬೇರೆ ದೇಶಗಳ ವಿಶೇಷ ವಿಮಾನಗಳು ಮಾತ್ರ ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿವೆ.

ಕತಾರಿನಿಂದ ಮಾತೃಭೂಮಿಗೆ ಮರಳುತ್ತಿರುವ ಕನ್ನಡಿಗರು

ಶನಿವಾರ ಫ್ರಾಂಕ್‌ಫರ್ಟ್‌ನಿಂದ 248 ಪ್ರಯಾಣಿಕರು, ಮುಂಜಾನೆ 3.15ಕ್ಕೆ ವಾಷಿಂಗ್ಟನ್‌ ಆಗಮಿಸಿದ ವಿಮಾನದಲ್ಲಿ 105 ಕನ್ನಡಿಗರು ಬೆಂಗಳೂರು ನಗರಕ್ಕೆ ಬಂದರು. ಎಲ್ಲರ ಆರೋಗ್ಯ ಪರೀಕ್ಷೆಯನ್ನು ನಡೆಸಿ ಕ್ವಾರಂಟೈನ್‌ಗಾಗಿ ಕಳುಹಿಸಲಾಗಿದೆ. ಯಾವುದೇ ಪ್ರಯಾಣಿಕರಲ್ಲಿ ಕೋವಿಡ್ - 19 ಸೋಂಕಿನ ಲಕ್ಷಣ ಕಂಡುಬಂದಿಲ್ಲ.

ರೆಡ್ ಝೋನ್ ಚೆನ್ನೈನಿಂದಲೇ ಬಂತು ಬೆಂಗಳೂರಿಗೆ ಮೊದಲ ವಿಮಾನ

ಪ್ರಯಾಣಿಕರ ಕೊರತೆ

ಪ್ರಯಾಣಿಕರ ಕೊರತೆ

ವಿಶ್ವದಲ್ಲಿ ಕೊರೊನಾ ಭೀತಿ ಆರಂಭವಾದ ಮೇಲೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕ ಸಂಖ್ಯೆ ಇಳಿಮುಖವಾಗಿತ್ತು. ಫೆಬ್ರವರಿಯಲ್ಲಿ ಶೇ 20ರಷ್ಟು, ಮಾರ್ಚ್‌ನಲ್ಲಿ ಶೇ 50ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಮುಖವಾಯಿತು. ಬಳಿಕ ವಿಮಾನಗಳ ಸಂಚಾರ ರದ್ದುಗೊಂಡಿತು.

ಹೊಸ-ಹೊಸ ಪ್ರದೇಶದಿಂದ ವಿಮಾನ

ಹೊಸ-ಹೊಸ ಪ್ರದೇಶದಿಂದ ವಿಮಾನ

ಕಳೆದ 2 ತಿಂಗಳಿನಲ್ಲಿ ಹೊಸ-ಹೊಸ ಪ್ರದೇಶದಿಂದ ಬೆಂಗಳೂರು ನಗರಕ್ಕೆ ವಿಮಾನಗಳು ಬಂದಿಳಿದಿವೆ. ಇಲ್ಲಿಯ ತನಕ ಆ ಪ್ರದೇಶಗಳಿಗೆ ಬೆಂಗಳೂರಿನಿಂದ ಯಾವುದೇ ವಿಮಾನ ಹಾರಾಟ ಇರಲಿಲ್ಲ. ವಂದೇ ಭಾರತ್ ಮಿಷನ್ ಅಡಿ ಭಾರತೀಯರನ್ನು ಹೊತ್ತ ವಿಮಾನ ಬೆಂಗಳೂರು ನಗರಕ್ಕೆ ಬಂದಿಳಿದಿವೆ. ನಗರಕ್ಕೆ ಶನಿವಾರದ ತನಕ 24 ಏರ್ ಇಂಡಿಯಾ ವಿಮಾನಗಳು ಆಗಮಿಸಿವೆ.

ಜಿಲ್ಲಾಡಳಿತದಿಂದ ಕ್ರಮ

ಜಿಲ್ಲಾಡಳಿತದಿಂದ ಕ್ರಮ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ. ಎಲ್ಲರ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಬಿಬಿಎಂಪಿ ಸಹಕಾರದಿಂದ ಅವರಿಗೆ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ತಮ್ಮ ಖರ್ಚಿನಲ್ಲಿಯೇ ಪ್ರಯಾಣಿಕರು ಕ್ವಾರಂಟೈನ್ ಆಗಬೇಕಿದೆ.

ವಿಮಾನಗಳ ಪಟ್ಟಿ

ವಿಮಾನಗಳ ಪಟ್ಟಿ

ಅಮೆರಿಕ ವಾಷಿಂಗ್ಟನ್‌, ದಕ್ಷಿಣ ಕೊರಿಯಾದ ಸಿಯೋಲ್, ಫ್ರಾನ್ಸ್‌ನ ಪ್ಯಾರಿಸ್, ದುಬ್ಲಿನ್, ಮನಿಲಾ, ಟೊರೆಂಟೊ, ಮೆಲ್ಬೋರ್ನ್ ಸೇರಿದಂತೆ ವಿವಿಧ ನಗರಗಳಿಂದ ಬೆಂಗಳೂರು ನಗರಕ್ಕೆ ವಿಮಾನಗಳು ಆಗಮಿಸಿವೆ. ಪ್ರಯಾಣಿಕರು ಕ್ವಾರಂಟೈನ್‌ಗೆ ತೆರಳಲು ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.

English summary
Under Vande Bharat Mission 24th Air India flight landed in Kempegowda international airport Bengaluru on May 30, 2020. International flight service to airport suspended after March 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X