Vande Bharat Express: ಬೆಂಗಳೂರು-ಹುಬ್ಬಳ್ಳಿ-ಧಾರವಾಡ ರೈಲು ಆಗಮಿಸುವ ಹೊರಡುವ ಸಮಯ ತಿಳಿಯಿರಿ
ಬೆಂಗಳೂರು, ಜೂನ್ 15: ಬೆಂಗಳೂರು-ಹುಬ್ಬಳ್ಳಿ-ಧಾರವಾಡ ಸೇರಿದಂತೆ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 26 ರಂದು ಚಾಲನೆ ನೀಡುವ ಸಾಧ್ಯತೆಯಿದೆ. ಮುಂಬೈ-ಗೋವಾ, ಪಾಟ್ನಾ-ರಾಂಚಿ, ಭೋಪಾಲ್-ಇಂಧೋರ್ ಮತ್ತು ಭೋಪಾಲ್-ಜಬಲ್ಪುರ ಮಾರ್ಗದಲ್ಲಿ ಉಳಿದ ನಾಲ್ಕು ವಂದೇ ಭಾರತ್ ರೈಲುಗಳು ಕಾರ್ಯಾರಂಭ ಮಾಡಲಿವೆ.
ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಮೂಲಗಳ ಪ್ರಕಾರ, ಕೆಎಸ್‌ಆರ್ ಬೆಂಗಳೂರು ನಗರ ಮತ್ತು ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಚಲಿಸುವ ಸಾಧ್ಯತೆಯಿದೆ. ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ನಿಲುಗಡೆ ಇರುತ್ತದೆ. ಬೆಂಗಳೂರು ಮತ್ತು ಧಾರವಾಡ ನಡುವಿನ ಸರಾಸರಿ ವೇಗ (487 ಕಿಮೀ) ಗಂಟೆಗೆ 70.54 ಕಿಮೀ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.

ವಂದೇ ಭಾರತ್ ಮೂಲಕ ಕೆಎಸ್ಆರ್ ಬೆಂಗಳೂರು ನಗರ ಮತ್ತು ಧಾರವಾಡ ನಡುವಿನ ಪ್ರಯಾಣದ ಸಮಯ 6 ಗಂಟೆ 55 ನಿಮಿಷಗಳು ಎಂದು ನಿರೀಕ್ಷಿಸಲಾಗಿದೆ. ವಂದೇ ಭಾರತ್ ರೈಲು ಕೆಎಸ್‌ಆರ್ ಬೆಂಗಳೂರು ನಗರದಿಂದ ಬೆಳಗ್ಗೆ 5:45ಕ್ಕೆ ಹೊರಟು ಮಧ್ಯಾಹ್ನ 12:40ಕ್ಕೆ ಧಾರವಾಡಕ್ಕೆ ಆಗಮಿಸುವ ಸಾಧ್ಯತೆ ಇದೆ. ಹಿಂದಿರುಗುವ ಪ್ರಯಾಣವು ಧಾರವಾಡದಿಂದ ಮಧ್ಯಾಹ್ನ 1:15 ಕ್ಕೆ ಪ್ರಾರಂಭವಾಗಿ ರಾತ್ರಿ 8:10 ಕ್ಕೆ ಕೆಎಸ್ಆರ್ ಬೆಂಗಳೂರು ನಗರವನ್ನು ತಲುಪುವ ನಿರೀಕ್ಷೆಯಿದೆ.
ಪ್ರಸ್ತುತ, ಜನ ಶತಾಬ್ದಿ ಎಕ್ಸ್‌ಪ್ರೆಸ್ (ಕೆಎಸ್‌ಆರ್ ಬೆಂಗಳೂರು ನಗರ-ಹುಬ್ಬಳ್ಳಿ), ಕೆಎಸ್‌ಆರ್ ಬೆಂಗಳೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿ ತಲುಪುತ್ತದೆ (ಪ್ರಯಾಣ ಸಮಯ ಏಳು ಗಂಟೆಗಳು). ಹಿಂದಿರುಗುವ ಪ್ರಯಾಣದಲ್ಲಿ, ಜನ ಶತಾಬ್ದಿ ರೈಲು ಹುಬ್ಬಳ್ಳಿಯಿಂದ ಮಧ್ಯಾಹ್ನ 1:40 ಕ್ಕೆ ಹೊರಟು ರಾತ್ರಿ 8:55 ಕ್ಕೆ ಕೆಎಸ್ಆರ್ ಬೆಂಗಳೂರಿಗೆ 7 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಾರ್ಯರಂಭ ಮಾಡಿದ ಮೇಲೆ ಜನಶತಾಬ್ದಿ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು - ಹೊಸಪೇಟೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಮತ್ತು ಹೊಸಪೇಟೆ - ಹರಿಹರ್ ಎಕ್ಸ್‌ಪ್ರೆಸ್‌ಗಳಂತಹ ಇತರ ರೈಲುಗಳ ಸಮಯವನ್ನು ಎಸ್‌ಡಬ್ಲ್ಯೂಆರ್ ಪರಿಷ್ಕರಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

2022 ರ ನವೆಂಬರ್‌ನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಮೊದಲನೇ ವಂದೇ ಭಾರತ್ ರೈಲನ್ನು ಪರಿಚಯಿಸಲಾಯಿತು. ಇದು ಕರ್ನಾಟಕದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದ್ದು, ಇದನ್ನು ದಕ್ಷಿಣ ರೈಲ್ವೆ ನಿರ್ವಹಿಸುತ್ತದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರು- ಧಾರವಾಡ ಸಂಪರ್ಕಿಸುವ ವಂದೇ ಭಾರತ್ ರೈಲಿನ ಉದ್ಘಾಟಣೆ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದಾರೆ.
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ದಕ್ಷಿಣ ರೈಲ್ವೆಯ ಮೊದಲ ರೈಲು ಆಗಿರುತ್ತದೆ. ಬೆಂಗಳೂರು-ಕಾಚೆಗುಡಾ ಮತ್ತು ಬೆಂಗಳೂರು-ಕೊಯಮತ್ತೂರು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲು ರೈಲ್ವೆಯು ಯೋಜನೆ ರೂಪಿಸಿದೆ.

ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ರೈಲುಗಳ ಗರಿಷ್ಠ ಅನುಮತಿ ವೇಗವನ್ನು ಪ್ರಸ್ತುತ ಗಂಟೆಗೆ 110 ಕಿಮೀಯಿಂದ 130 ಕಿಮೀಗೆ ಹೆಚ್ಚಿಸಲು ಎಸ್‌ಡಬ್ಲ್ಯೂಆರ್ ರೈಲ್ವೆ ಮಂಡಳಿಗೆ ಪ್ರಸ್ತಾಪಿಸಿದೆ. 130-160 ಕಿಮೀ ವೇಗಕ್ಕೆ ಸರಿಹೊಂದುವಂತೆ ಟ್ರ್ಯಾಕ್‌ಗಳನ್ನು ಒಮ್ಮೆ ಬಲಪಡಿಸಿದರೆ, ರೈಲುಗಳನ್ನು ಸರಾಸರಿ 110-120 ಕಿಮೀ ವೇಗದಲ್ಲಿ ನಿರ್ವಹಿಸಬಹುದು. ವಂದೇ ಭಾರತ್ ರೈಲುಗಳ ವೇಗವನ್ನು ಗಂಟೆಗೆ 130 ಕಿಲೋಮೀಟರ್‌ಗೆ ಸೀಮಿತಗೊಳಿಸಲಾಗಿದೆ.
ರೈಲಿನ ಸಮಯ ಘೋಷಿಸಿದ ರೈಲ್ವೆ ಇಲಾಖೆ
ದಕ್ಷಿಣ ರೈಲ್ವೆಯು ಬೆಂಗಳೂರು- ಧಾರವಾಡ ವಂದೇ ಭಾರತ್ ರೈಲಿನ ಸಮಯವನ್ನು ನಿಗದಿಪಡಿಸಿದೆ. ಅದು ಈ ಕೆಳಗಿನಂತಿದೆ.
Bengaluru -Dharwad , Vande Bharat Exp , Starts June 26th
Bengaluru Dep - 5.45 Am
Davangere Arr - 9.55 Am
Hubbali Jn Arr - 12.10 Am
Dharwad Arr - 12.40 Am
Dharwad Dep - 1.15 PM
Hubbali Jn Arr - 1.35 PM
Davangere Arr - 3.48 PM
Bengaluru Arr - 8.10 PM












Click it and Unblock the Notifications