Vande Bharat Express: ಕರ್ನಾಟಕ ವಂದೇ ಭಾರತ್ ರೈಲು ಸೇವೆ ವಿಸ್ತರಣೆ: ವಿ.ಸೋಮಣ್ಣ ಹರ್ಷ
Vande Bharat Express Train: ರಾಜ್ಯ ರಾಜಧಾನಿ ಬೆಂಗಳೂರಿನಿಂದ ತೊಗರಿ ಕಣಜ ಕಲಬುರಗಿಗೆ ಈಗಾಗಲೇ ಕೇಂದ್ರ ಸರ್ಕಾರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಅನುಮೋದನೆ ನೀಡಿದೆ. ಕಾರ್ಯಾಚರಣೆ ಸಹ ಇದೆ. ಇದೀಗ ಈ ರೈಲು ಸೇವೆ ವಿಸ್ತರಣೆ ಮಾಡಿದ್ದಕ್ಕೆ ರೈಲ್ವೆ ಖಾತೆ ಕರ್ನಾಟಕ ಸಚಿವ ವಿ.ಸೋಮಣ್ಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಬುರ್ಗಿ-ಬೆಂಗಳೂರು ನಡುವೆ ನೇರ ವೇಗದ ರೈಲು ಸಂಪರ್ಕಕ್ಕಾಗಿ ಜನತೆ ವರ್ಷಗಳಿಂದ ಮಾಡಿಕೊಂಡು ಬಂದ ಬೇಡಿಕೆ ಈಗಾಗಲೇ ಸಾಕಾರವಾಗಿದೆ. ಜನರ ಮತ್ತೊಂದು ಬೇಡಿಕೆ ಸಹ ಈಡೇರಿಕೆ ಆಗಿದೆ. ಕಲಬುರ್ಗಿಯಿಂದ ಬೆಂಗಳೂರಿನ ಎಸ್ಎಂವಿಟಿವರೆಗೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂವರೆಗೆ ವಿಸ್ತರಣೆ ಮಾಡಿ, ಮಾರ್ಗ ಬದಲಾಯಿಸಲಾಗಿದೆ. ಸಂಚಾರದ ಸಮಯವನ್ನೂ ಬದಲಾವಣೆ ಮಾಡಲಾಗಿದೆ ಎಂದು ವಿ.ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಈ ರೈಲಿನ ವಂದೇ ಭಾರತ್ ಸಂಚಾರವನ್ನು ವಿಸ್ತರಣೆ ಮಾಡಲಾಗಿದೆ. ಬಹುದಿನಗಳ ಕನಸು ನನಸಾಗಿದೆ. ಇದಕ್ಕಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸೋಮಣ್ಣ ಅಭಿನಂದನೆ ತಿಳಿಸಿದ್ದಾರೆ. ರೈಲು ಪ್ರಯಾಣಿಕರು, ಭಕ್ತರು ಈ ಸೇವೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಅವರು ಕೋರಿದ್ದಾರೆ.
ಹೊಸ ವಂದೇ ಭಾರತ್ ರೈಲು ಶ್ರೀ ಸತ್ಯ ಸಾಯಿ ಪ್ರಕಾಶ ನಿಲಯಂ ಮಾರ್ಗವಾಗಿ ಸಂಚರಿಸುವ ಕಾರಣ ರೈಲು ಪ್ರಯಾಣದ ಸಮಯ ಕಡಿಮೆಯಾಗಲಿದೆ. ಬೆಂಗಳೂರು, ಕಲಬುರಗಿ ಮಧ್ಯದ ಸ್ಥಳಗಳಿಗೆ ಸಹ ನೇರ ಮತ್ತು ವೇಗದ ಸಂಪರ್ಕ ಸಿಗಲಿದೆ. ಕಲಬುರ್ಗಿಯಿಂದ ಪ್ರತಿದಿನ ಬೆಳಗ್ಗೆ 6:10ಕ್ಕೆ ರೈಲು ಹೊರಡಲಿದೆ. ಹೋಸಪೇಟೆ, ಸತ್ಯ ಸಾಯಿ ಪ್ರಕಾಶ ನಿಲಯಂನಿಂದ ಮುಂತಾದ ಪ್ರಮುಖ ನಿಲ್ದಾಣಗಳನ್ನು ದಾಟಿ ಸಂಜೆ ವೇಳೆಗೆ ಬೆಂಗಳೂರು ತಲುಪಲಿದೆ. ಮರಳಿ ಮಧ್ಯಾಹ್ನ 2:40ಕ್ಕೆ ಹೊರಡಲಿದ್ದು, ರಾತ್ರಿ ವೇಳೆಗೆ ಕಲಬುರ್ಗಿ ತಲುಪುತ್ತದೆ.
ಕರ್ನಾಟಕ-ಬೆಂಗಳೂರು ನಡುವಿನ ನೇರ ವೇಗದ ರೈಲು ಸೇವೆ ವಿಸ್ತರಣೆ ಆಗಿದ್ದರಿಂದ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯಾಪಾರಿ ವರ್ಗ ಈ ವಂದೇ ಭಾರತ್ ಸೇವೆಯಿಂದ ಸಾಕಷ್ಟು ಪ್ರಯೋಜನವಾಗಿದೆ. ಮುಖ್ಯವಾಗಿ ಕಲಬುರ್ಗಿ-ಬೆಂಗಳೂರು ನಡುವಿನ ಪ್ರಯಾಣದ ಸಮಯ ಗಮನಾರ್ಹವಾಗಿ ಕಡಿಮೆಯಾಗಲಿದೆ.












Click it and Unblock the Notifications