ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ OYO ರೂಮ್‌ಗಳಿಗೆ ಭಾರೀ ಡಿಮ್ಯಾಂಡ್
ಈಗಾಗಲೇ ಐಟಿ ಸಿಟಿ ಬೆಂಗಳೂರಿನಲ್ಲಿ 2024ರ ಹೊಸವರ್ಷದ ಹಿಂದಿನ ದಿನ ಅಂದರೆ ಡಿಸೆಂಬರ್ 31, 2023 ಈ ಒಂದೇ ದಿನ ದಾಖಲೆ ಮಟ್ಟದಲ್ಲಿ ಓಯೋ ರೂಮ್‌ಗಳು ಬುಕ್ಕಿಂಗ್ ಆಗಿದ್ದು, ಅಷ್ಟೇ ಪ್ರಮಾಣದಲ್ಲಿ ಕಾಂಡೋಮ್‌ಗಳನ್ನು ಬಳಕೆ ಮಾಡಿದ್ದರು ಎನ್ನುವ ವರದಿಯಾಗಿತ್ತು. ಹಾಗೆಯೇ ಇದೀಗ ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ OYO ರೂಮ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅದರಲ್ಲೂ ರಾಜ್ಯದಲ್ಲಿ ಯಾವ ನಗರದಲ್ಲಿ ಓಯೋ ರೂಮ್‌ಗಳಿಗೆ ಭಾರೀ ಬೇಡಿಕೆಯಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಯುವಪೀಳಿಗೆಯವರೇ ಹೆಚ್ಚಾಗಿ ಬೆಂಗಳೂರಿಗೆ ಉದ್ಯೋಗ ಅರಸಿ ಬರುತ್ತಿದ್ದಾರೆ. ಇನ್ನು ಪ್ರಮುಖ ದಿನಾಚರಣೆಗಳು ಬಂದವೆಂದರೆ ಸಾಕು ಈ ಐಟಿ ಸಿಟಿಯಲ್ಲಿ ಅದ್ಧೂರಿಯಾಗಿ ಪಾರ್ಟಿ ಮಾಡುವ ಮೂಲಕ ಆಚರಣೆ ಮಾಡುತ್ತಾರೆ. ಅದರಲ್ಲೂ ಫೆಬ್ರವರಿ 14 ಎಂದರೆ ಸಾಕು ಬಹುತೇಕ ಮಂದಿ ಯುವಪೀಳಿಗೆಯವರು ಟ್ರಿಪ್ ಹೋಗಲು ಆಯೋಜನೆ ಮಾಡಿಕೊಂಡಿರುತ್ತಾರೆ.

ಕಂಪನಿಗಳಲ್ಲಿ ಕೆಸಲ ಮಾಡುವವರು ಇಂತಹ ಆಚರಣೆಗಳು ಬಂದ ತಕ್ಷಣ ತಮ್ಮ ಮನಸ್ಸಿನ ಒತ್ತಡವನ್ನು ತೊಲಗಿಸಲು ಪಾರ್ಟಿಗಳನ್ನು ಆಯೋಜನೆ ಮಾಡುತ್ತಾರೆ. ಕೆಲವರು ತಮ್ಮ ಮನೆಗಳಲ್ಲಿ ಕುಟುಂಬದೊಟ್ಟಿಗೆ ಸಂಭ್ರಾಮಾಚರಣೆ ಮಾಡಿದರೆ, ಇನ್ನು ಕೆಲವರು ಹೊರಗಡೆ ಹೋಗಿ ಸಮಯ ಕಳೆಯಲು ಬಯಸುತ್ತಾರೆ. ಇನ್ನು ಮೂರನೇ ವರ್ಗ ತಮ್ಮ ಪ್ರೇಯಸಿ/ಪ್ರಿಯತಮೆ/ಪ್ರೇಮ ಸಂಗಾತಿಯೊಂದಿಗೆ ಎಂಜಾಯ್ ಮಾಡಲು ಪಬ್, ರೆಸ್ಟೋರೆಂಟ್ ಇದನ್ನು ಮೀರಿ ಓಯೋಗೆ ಕರೆದೊಯ್ಯುವುದನ್ನು ಕೇಳಿದ್ದೇವೆ.
ಇದೀಗ ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನಾಚರಣೆ ಆಗಿದ್ದು, ಇದಕ್ಕೂ ಮುನ್ನವೇ ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓಯೋ ರೂಮ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾಹಿತಿಯೊಂದು ತಿಳಿದುಬಂದಿದೆ. ಹಾಗಾದರೆ ಪ್ರೇಮಿಗಳ ದಿನ ಬರುವಷ್ಟರೊಳಗೆ ಎಷ್ಟು ಮಂದಿ ಓಯೋ ಬುಕ್ಕಿಂಗ್ ಮಾಡುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಇದು ಹೊಸವರ್ಷದ ಓಯೋ ಬುಕ್ಕಿಂಗ್ ದಾಖಲೆ ಮುರಿದರೂ ಆಶ್ಚರ್ಯವೇನಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.












Click it and Unblock the Notifications