ನಟ ದರ್ಶನ್ ಪ್ರಕರಣ: ಅವನ ಪಾಪದ ಕೊಡ ತುಂಬಿದೆ: ವಿ.ಮನೋಹರ್ ಹೀಗೆ ಹೇಳಿದ್ಯಾಕೆ?-ಇಲ್ಲಿದೆ ಮಾಹಿತಿ
V.Manohar: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನೂ ಪ್ರಕರಣದ ಸಂಬಂಧ ನಟ ದರ್ಶನ್ ಪರ-ವಿರೋಧ ಚರ್ಚೆಗಳು ಆಗುತ್ತಲೇ ಇವೆ. ಇದರ ಇಡುವೇ ಇದೀಗ ವಿ.ಮನೋಹರ್ ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಲಾಲಿಹಾಡು ಸಿನಿಮಾ ಶೂಟಿಂಗ್ ವೇಳೆ ಜೊತೆಗೆ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಪ್ರಕರಣವನ್ನ ವಿಧಿಯಾಟ ಎನ್ನುತ್ತೇನೆ. ಸತ್ತವನಂತೂ ಖಂಡಿತವಾಗಿಯೂ ಒಳ್ಳೆಯವನಲ್ಲ ಎಂದು ಅಂತಾ ಹೇಳಿದ್ದಾರೆ.

"ಇದು ಆಕಸ್ಮಿಕವಾಗಿ ನಡೆದುಹೋಗಿದೆ. ಸತ್ತವನಂತೂ ಖಂಡಿತ ಒಳ್ಳೆಯವನಲ್ಲ. ಸಾವಿರಾರು ಹೆಣ್ಣು ಮಕ್ಕಳಿಗೆ ಕೆಟ್ಟ ಕೆಟ್ಟದಾಗಿ ಸಂದೇಶ ಕಳುಹಿಸಿರುವ ವಿಕೃತಕಾಮಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಅವನ ಪಾಪದ ಕೊಡ ತುಂಬಿದೆ, ಅದಕ್ಕೆ ತಕ್ಕ ಶಿಕ್ಷೆಯಾಗಿದೆ. ಆದರೆ ಇದು ಪೊಲೀಸ್ ಅವರಿಂದ ಆಗಬೇಕಿತ್ತು. ಆದರೆ ದರ್ಶನ್ ಸರ್ ಬ್ಯಾಡ್ ಟೈಂ ಆಗಿರಬಹುದು. ಅವರು ಆ ಕಳಂಕದಿಂದ ಹೊರಬಂದು ಮೊದಲಿನಂತೆ ಸಿನಿಮಾದಲ್ಲಿ ನಟನೆ ಮಾಡಲಿ ಎಂದು ಹೇಳಿದ್ದಾರೆ.
ಸುಷ್ಮಾ ವೀರ್ ಹೇಳಿದ್ದೇನು?: 2024ನೇ ಸಾಲಿನ ಐಪಿಎಲ್‌ನಲ್ಲಿ ಆರ್‌ಸಿಬಿ ಸೋಲಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಕಾರಣ, ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ಗೆ ಅವರನ್ನು ಕರೆಸಿದ್ದಕ್ಕೇ ತಂಡ ಸೋಲನುಭವಿಸಿತು ಎಂದು ಗಜಪಡೆ ಹೆಸರಿನ ಟ್ವಿಟರ್ ಖಾತೆಯಿಂದ ಕೀಳು ಮಟ್ಟದ ಪೋಸ್ಟ್‌ವೊಂದನ್ನು ಮಾಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ದರ್ಶನ್ ಅಭಿಮಾನಿಗಳ ಬಗ್ಗೆ ವ್ಯಾಪಕ ಟೀಕೆಗಲು ಸಹ ಕೇಳಿಬಂದಿದ್ದು, ಆಗ ಕೆಲವರು ಸ್ವತಃ ನಟ ದರ್ಶನ್ ವಿರುದ್ಧವೇ ಧ್ವನಿ ಎತ್ತಿ, ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಬಾರದೇ ಎಂದು ಹೇಳಿದ್ದರು.
ಸುಷ್ಮಾ ವೀರ್ ಮಾತನಾಡಿದ್ದು, ಕಾನೂನು ಮೂಲಕ ಕ್ರಮ ಕೈಗೊಂಡಿದ್ದರೆ, ಎಲ್ಲರಿಗೂ ಇದೊಂದು ನಿದರ್ಶನ ಆಗುತ್ತಿತ್ತು. ಕೊಲೆ ಮಾಡುವ ಹಂತಕ್ಕೆ ಇಳಿಯಬಾರದಿತ್ತು ಎಂದು ನಟ ದರ್ಶನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
"ನಟ ದರ್ಶನ್ ಅವರ ಕೆಲವು ಹುಡುಗರು ಆರ್‌ಸಿಬಿ ಸೋಲನ್ನು ಇಟ್ಟುಕೊಂಡು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಸರೀನಾ? ಅವರು ಕೂಡ ಹೆಣ್ಣಲ್ಲವಾ? ಬೇರೆ ಹೆಣ್ಣುಮಕ್ಕಳು ಹೆಣ್ಮಕ್ಕಳಲ್ಲ, ನಿಮಗೆ ಇಷ್ಟ ಆದವರಷ್ಟೇ ಹೆಣ್ಣುಮಕ್ಕಳಾ? ದರ್ಶನ್ ಬಗ್ಗೆ ಪ್ರೀತಿ ಕಡಿಮೆಯಾಗಿಲ್ಲ, ಆದರೆ ನಿಮ್ಮ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ನಿಮ್ಮನ್ನು ನೀವೆ ಹಾಳು ಮಾಡಿಕೊಳ್ಳುತ್ತಿದ್ದೀರ. ಇನ್ನೂ ಇನ್ನಾದರೂ ಸುಧಾರಿಸಿಕೊಂಡರೆ ಒಳ್ಳೆಯದು. ಅದು ನಿಮ್ಮ ಕೈಯಲ್ಲಿದೆ", ಎಂದು ಬುದ್ಧಿವಾದ ಹೇಳಿದ್ಧಾರೆ.












Click it and Unblock the Notifications