UPSC Result 2022: ಡಾ.ರಾಜ್‌ಕುಮಾರ್ ಅಕಾಡೆಮಿಯಿಂದ 11 ಜನ ಅಭ್ಯರ್ಥಿಗಳ ತೇರ್ಗಡೆ, ರ‍್ಯಾಂಕ್‌ಗಳ ವಿವರ ಇಲ್ಲಿದೆ
ಬೆಂಗಳೂರು, ಮೇ, 23: 2022ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ (ಮೇ 23) ಪ್ರಕಟ ಆಗಿದೆ. ದೇಶದಲ್ಲಿನ ಒಟ್ಟು 933 ಅಭ್ಯರ್ಥಿಗಳ ಪೈಕಿ ಕರ್ನಾಟಕ ರಾಜ್ಯದಿಂದ 26 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇಗಡೆ ಆಗಿದ್ದಾರೆ. ಈ ಪೈಕಿ ಡಾ.ರಾಜ್‌ಕುಮಾರ್ ಅಕಾಡೆಮಿಯಿಂದ 11 ಜನ ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾರೆ. ಹಾಗಾದರೆ ತೇರ್ಡೆಯಾದ ಆ 11 ಜನ ಅಭ್ಯರ್ಥಿಗಳ ರ‍್ಯಾಂಕ್‌ಗಳ ವಿವರನ್ನು ಇಲ್ಲಿ ತಿಳಿಯಿರಿ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರ ವಿವರ
1. ಮೆಲ್ವಿನ್ ವರ್ಗಿಸ್- 155ನೇ ರ‍್ಯಾಂಕ್
2. ಸೂರಜ್ ಡಿ - 197ನೇ ರ‍್ಯಾಂಕ್
3. ಆಕಾಶ್ ಎ.ಎಲ್- 210ನೇ ರ‍್ಯಾಂಕ್
4. ಚಲುವರಾಜು ಆರ್ - 238ನೇ ರ‍್ಯಾಂಕ್
5. ಸೌರಭ್ ಕೆ - 260ನೇ ರ‍್ಯಾಂಕ್
6. ಶೃತಿ ಯರಗಟ್ಟಿ ಎಸ್ - 362ನೇ ರ‍್ಯಾಂಕ್
7. ಪೂಜಾ ಮುಕುಂದ್ - 390ನೇ ರ‍್ಯಾಂಕ್
8. ಭಾನು ಪ್ರಕಾಶ್ ಜೆ - 448ನೇ ರ‍್ಯಾಂಕ್
9. ಡಾ.ವರುಣ ಗೌಡ - 594ನೇ ರ‍್ಯಾಂಕ್
10. ಅಕ್ಷಯ್ ಕುಮಾರ್ ರಾಜಗೌಡ ಪಾಟೀಲ್ - 746ನೇ ರ‍್ಯಾಂಕ್
11. ಯಲಗುರೇಶ್ ಅರ್ಜುನ್ ನಾಯಕ್ - 890ನೇ ರ‍್ಯಾಂಕ್

ಯುಪಿಎಸ್‌ಸಿ ಸಿವಿಲ್ಸ್ 2022 ಫಲಿತಾಂಶದಲ್ಲಿ ಇಶಿತಾ ಕಿಶೋರ್ ಎಂಬುವವರು ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ, ಈ ಫಲಿತಾಂಶದಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳೇ ಅಲಂಕರಿಸಿರುವುದು ವಿಶೇಷ ಆಗಿದೆ. ಹಾಗಾದರೆ ಮೊದಲ ನಾಲ್ಕು ಸ್ಥಾನಗಳನ್ನು ಅಲಂಕರಿಸಿದ ಮಹಿಳೆಯರ ಪಟ್ಟಿ ಇಲ್ಲಿದೆ ನೋಡಿ
ಮೊದಲ ನಾಲ್ಕು ಸ್ಥಾನಗಳ ವಿವರ
1. ಇಶಿತಾ ಕಿಶೋರ್ - ಪ್ರಥಮ ರ‍್ಯಾಂಕ್
2. ಗರಿಮಾ ಲೋಹಿಯಾ - ದ್ವಿತೀಯ ರ‍್ಯಾಂಕ್
3. ಉಮಾ ಹರತಿ - ಮೂರನೇ ರ‍್ಯಾಂಕ್
4. ಸ್ಮೃತಿ ಮಿಶ್ರಾ - ನಾಲ್ಕನೇ ರ‍್ಯಾಂಕ್
ಇನ್ನು ದೇಶದಲ್ಲಿನ ಒಟ್ಟು 933 ಅಭ್ಯರ್ಥಿಗಳ ಪೈಕಿ ಕರ್ನಾಟಕ ರಾಜ್ಯದಿಂದ 26 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ, ದಾವಣಗೆರೆಯ ಅವಿನಾಶ್ 31ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡದ ಶೃತಿ ಯರಗಟ್ಟಿ 362ನೇ ರ‍್ಯಾಂಕ್, ಮೈಸೂರಿನ ಪೂಜಾ 390ನೇ ರ‍್ಯಾಂಕ್, ಬಿವಿ ಶ್ರೀದೇವಿ 525, ಆದಿನಾಥ್ ಪದ್ಮಣ್ಣ 566ನೇ ರ‍್ಯಾಂಕ್ ಪಡೆದರೆ, ಐ.ಎನ್. ಮೇಘನಾ 617ನೇ ಸ್ಥಾನ ಪಡೆದಿದ್ದಾರೆ. ಹಾಗೆಯೆ ಮೈಸೂರಿನ ಕುವೆಂಪು ನಗರದ ಪೂಜಾ 390, ಬೆಳವಾಡಿಯ ಭಾನುಪ್ರಕಾಶ್ 448ನೇ ರ‍್ಯಾಂಕ್ ಪಡೆದಿದ್ದಾರೆ.
ಒಟ್ಟು 933 ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದಲ್ಲಿ 345 ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವಲಯದ 99 ಅಭ್ಯರ್ಥಿಗಳು, ಒಬಿಸಿ ವರ್ಗದಲ್ಲಿ 263, ಪರಿಶಿಷ್ಟ ಜಾತಿ ಸಮುದಾಯದ 154 ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡದಿಂದ 72 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಅಲ್ಲದೆ ಈ ಪರೀಕ್ಷೆಯ ಮೂಲಕ ಐಎಎಸ್‌ಗೆ 180, ಐಪಿಎಸ್‌ಗೆ 200, ಐಎಫ್‌ಎಸ್‌ಗೆ 38, ಗ್ರೂಪ್ ಎ ಕೇಂದ್ರ ಸೇವೆಗಳಿಗೆ 473 ಮತ್ತು ಗ್ರೂಪ್ ಬಿ ಸೇವೆಗೆ 131 ಜನರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಅದೇ ರೀತಿ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಪುತ್ರ ಸಿದ್ದಲಿಂಗಪ್ಪ ಪೂಜಾರ ಎಂಬ ವಿದ್ಯಾರ್ಥಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಈ ಮೂಲಕ ಸಿದ್ದಲಿಂಗಪ್ಪ ಪೂಜಾರ ರಾಜ್ಯಕ್ಕೆ ಮತ್ತು ಅಣ್ಣಿಗೇರಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾನೆ. ಸಿದ್ದಲಿಂಗಪ್ಪ ಪೂಜಾರ ಅವರು 589 ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆ ಹೊಂದಿದ್ದು, ಇವರ ಸಾಧನೆಗೆ ಅಣ್ಣಿಗೇರಿ ಪಟ್ಟಣವೇ ಹೆಮ್ಮೆ ಪಡುವಂತಾಗಿದೆ.












Click it and Unblock the Notifications